Categories
ಭರವಸೆಯ ಬೆಳಕು

ಕಂಡ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶೂ ವಿತರಿಸಿದ ಟೊರ್ಪೆಡೋಸ್ ಗೌತಮ್ ಶೆಟ್ಟಿ

ಕುಂದಾಪುರ-ಇಲ್ಲಿನ ಕಂಡ್ಲೂರು ಸರಕಾರಿ(ಕನ್ನಡ) ಹಿರಿಯ ಪ್ರಾಥಮಿಕ‌ ಶಾಲಾ ಮಕ್ಕಳಿಗೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿ ಇವರು BAS ಕಂಪೆನಿಯ ಶೂ ವಿತರಿಸಿದರು.
ಈ ಸಂದರ್ಭ ಶ್ರೀ ಕನ್ನಿಕಾ ಎಜ್ಯುಕೇಶನ್ ಟ್ರಸ್ಟ್ (ರಿ) ಅಧ್ಯಕ್ಷ ಗೌರಿ ಶ್ರೀಯಾನ್,ಅಂಪಾರು ವಲಯದ ಸಿ.ಆರ್.ಪಿ ರಾಘವೇಂದ್ರ,ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಸ್ಕರ ಮೊಗವೀರ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರತ್ನಾ ಶೆಟ್ಟಿ,ಶಿಕ್ಷಕ ವರ್ಗದ ರೇಖಾ,ವೀಣಾ,ಜ್ಯೋತಿ,ಜ್ಯೋತಿ ಗ್ಲಾಡಿಸ್,ರವಿ,ನಾಗರಾಜ್,ಸುನೀತಾ,ಲಲಿತಾ,ಚಂದ್ರ,ಬಸವ ನಾಯಕ್,ಹರ್ಷ ಕೋಟೇಶ್ವರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಕ್ರೀಡೆಯಿಂದ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಸಾಧ್ಯ-ಗೌತಮ್ ಶೆಟ್ಟಿ ಟೊರ್ಪೆಡೋಸ್

ಕಾರ್ಕಳ-ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ ಮತ್ತು ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಇವರ ಜಂಟಿ ಆಯೋಜನೆಯಲ್ಲಿ,ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಬಿ.ಸಿ.ಆಳ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿಟ್ಟೆಯಲ್ಲಿ ಲೆಜೆಂಡ್ಸ್  ಕ್ರಿಕೆಟ್ ಪಂದ್ಯಾಟ ಜರುಗಿತು.
ರಾಯಲ್ ಇಂಡಿಯನ್ಸ್ ಪ್ರಥಮ ಹಾಗೂ ಕೆ.ಆರ್.ಎಸ್-ಬಿ.ಎ.ಸಿ.ಎ ರನ್ನರ್ ಅಪ್ ತಂಡವಾಗಿ ಮೂಡಿ ಬಂದಿತು.
ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಟೊರ್ಪೆಡೋಸ್ ಗೌತಮ್ ಶೆಟ್ಟಿ ಮಾತನಾಡಿ *”ಕ್ರೀಡೆಯಿಂದ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಸಾಧ್ಯ.ಬಿಡುವಿಲ್ಲದ ಜೀವನ ಕೆಲಸದೊತ್ತಡದ ನಡುವೆ ಕ್ರೀಡೆ ದೈಹಿಕ ಹಾಗೂ ಮಾನಸಿಕ‌ ಸದೃಢತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತದೆ.
ಕೆ.ಆರ್.ಎಸ್ ಮತ್ತು ಬಿ.ಎ.ಸಿ.ಎ ಕ್ರಿಕೆಟ್ ಕ್ಲಬ್ ಗಳು ಯುವ ಕ್ರಿಕೆಟಿಗರ ಕ್ರೀಡಾ ಬದುಕು ರೂಪಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದು ಹಿರಿಯ ಆಟಗಾರರ ಸಮರ್ಪಣಾ ಭಾವ ಅತ್ಯಂತ ಶ್ಲಾಘನೀಯ.ಮಕ್ಕಳ ಕ್ರೀಡಾ ಬದುಕು ರೂಪಿಸಲು ಬಿ.ಸಿ.ಆಳ್ವ ಸುಸಜ್ಜಿತ ಹುಲ್ಲುಹಾಸಿನ ಅಂಗಣದ ವ್ಯವಸ್ಥೆಯನ್ನು ನಿಟ್ಟೆ ವಿದ್ಯಾಸಂಸ್ಥೆ ಮಾಡಿದ್ದು,ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಕ್ರೀಡಾಪಟುಗಳು ಇಂತಹ ಕ್ರೀಡಾಸಂಸ್ಥೆಗಳಿಗೆ ಋಣಿಯಾಗಿರಬೇಕು” ಎಂದರು.*
ಈ ಸಂದರ್ಭ ಮುಖ್ಯ ಅತಿಥಿಗಳಾಗಿ
ನಿಟ್ಟೆ ವಿಶ್ವವಿದ್ಯಾಲಯದ ಚಾನ್ಸಲರ್ ಶ್ರೀಯುತ ಎನ್.ವಿನಯ್ ಹೆಗ್ಡೆ,ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀ.ನಿರಂಜನ್.ಎನ್‌.ಚಿಪ್ಳೂಣ್ಕರ್,
ಸಿ.ಎ.ಬ್ಯಾಂಕ್ ಪಡುಬಿದ್ರಿ ಅಧ್ಯಕ್ಷರಾದ ಶ್ರೀ.ವೈ.ಸುಧೀರ್ ಕುಮಾರ್,ಕೆ.ಆರ್.ಎಸ್ ಅಕಾಡೆಮಿಯ ಉದಯ್ ಕುಮಾರ್ ಕಟಪಾಡಿ,ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ವಿಜಯ್ ಆಳ್ವ ಮತ್ತು ಹಿರಿಯ ಆಟಗಾರರು ಉಪಸ್ಥಿತರಿದ್ದರು.
Categories
ಕ್ರಿಕೆಟ್

ಉಡುಪಿಯಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿಯವರಿಗೆ ಸನ್ಮಾನ

ಉಡುಪಿ-ಕೊಡಂಕೂರು ಕೋಟಿಯಾನ್ ವಾಲಿಬಾಲ್ ಅಕಾಡೆಮಿ ಇವರ ಪ್ರಾಯೋಜಕತ್ವದಲ್ಲಿ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ(ರಿ)ಕೊಡಂಕೂರು ಇವರ ಸಹಕಾರದೊಂದಿಗೆ ನಡೆದ ಮುಕ್ತ ಪುರುಷರ ಹಾಗೂ ಮಹಿಳೆಯರ 3 ಜನ ಆಟಗಾರರ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ‌ ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿಯವರು
“ಕ್ರೀಡೆಯಲ್ಲಿ ನಿರಂತರವಾಗಿ ತೊಡಗಿಸಿಗೊಳ್ಳುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ,ಸೋಲು ಗೆಲುವನ್ನು  ಸಮಾನವಾಗಿ ಸ್ವೀಕರಿಸಲು ಬದ್ಧರಾಗುತ್ತೇವೆ ಹಾಗೂ ಜೀವನ ಕೌಶಲ್ಯ ವೃದ್ಧಿಯಾಗುತ್ತದೆ.” ಎಂದರು.
ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ಶ್ರೀ‌.ಕೆ.ದಿವಾಕರ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿದರು.ಕೊಡಂಕೂರು ನಾಗರಿಕ
ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಘುನಾಥ್ ಮಾಬಿಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಮುಖ್ಯ ಅತಿಥಿಗಳಾಗಿ ಕಾರ್ಕಳ ಯಂಗ್ ಸ್ಟಾರ್ ವಾಲಿಬಾಲ್ ಕ್ಲಬ್ ಅಧ್ಯಕ್ಷ ಪ್ರವೀಣ್.ಕೆ.ಕೋಟ್ಯಾನ್,ರಾಷ್ಟ್ರ ಮಟ್ಟದ ಆಟಗಾರ ಸುಮನ್ ಕುಮಾರ್,ರಾಜ್ಯ ಮಟ್ಟದ ಆಟಗಾರ ರಾಜೇಶ್ ಹೆಗ್ಡೆ,ಮಲ್ಟಿ ನ್ಯಾಷನಲ್ ಕಂಪೆನಿ ಸೀನಿಯರ್ ಮೆನೇಜರ್ ಮಿನೊಟಿ ಆಗ್ನೇಸ್ ಬ್ಲಾಜೋ,ಕೊಡಂಕೂರು ನಾಗರಿಕ ಹಿತರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷರಾದ ಅಶೋಕ್ ಪೂಜಾರಿ ಕೊಡಂಕೂರು,ಭಾಸ್ಕರ್.ಸಿ.ಕೋಟ್ಯಾನ್ ಮತ್ತು ಹಳೆ ವಿದ್ಯಾರ್ಥಿಗಳು,ಆಟಗಾರರು ಉಪಸ್ಥಿತರಿದ್ದರು.
Categories
ಭರವಸೆಯ ಬೆಳಕು

ದಾವಣಗೆರೆಯಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿಯವರಿಗೆ ಗೌರವ ಸನ್ಮಾನ

ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ,ಟೆನಿಸ್ಬಾಲ್ ಕ್ರಿಕೆಟ್ ನ ವಿಶ್ವಕಪ್ ಖ್ಯಾತಿಯ 15 ನೇ ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್-2022 ಪಂದ್ಯಾಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರನ್ನು ಸನ್ಮಾನಿಸಲಾಯಿತು.
ಜೈ ಕರ್ನಾಟಕ ಮತ್ತು  ಫ್ರೆಂಡ್ಸ್ ಬೆಂಗಳೂರು ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಕ್ಕೂ ಮುನ್ನ ಪಂದ್ಯಾಟದ ಪ್ರಮುಖ ಆಯೋಜಕರಾದ ಉದ್ಯಮಿ ಶಿವಗಂಗಾ ಶ್ರೀನಿವಾಸ್ ಮತ್ತು ಜಯಪ್ರಕಾಶ್ ಗೌಡ(ಜೆ.ಪಿ) ಇವರು  ಗೌತಮ್ ಶೆಟ್ಟಿಯವರನ್ನು ಪಿಚ್ ನ‌ ಮಧ್ಯಭಾಗದಲ್ಲಿ  ಉಭಯ ತಂಡಗಳ‌ ಆಟಗಾರರ ಸಮ್ಮುಖದಲ್ಲಿ ಗೌರವಿಸಿದರು.
ಈ ಸಂದರ್ಭ ಚಲನಚಿತ್ರ ನಿರ್ಮಾಪಕ ಉದಯ್ ಶಿವಕುಮಾರ್ ಮತ್ತು ಪುತ್ರಿ,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಕೋಟ ರಾಮಕೃಷ್ಣ ಆಚಾರ್,ಜೈ ಕರ್ನಾಟಕ ಸಚಿನ್ ಮಹಾದೇವ್,ಫ್ರೆಂಡ್ಸ್ ನ ಸಾಗರ್ ಭಂಡಾರಿ ಮತ್ತು ಉಭಯ ತಂಡಗಳ ಆಟಗಾರರು ಉಪಸ್ಥಿತರಿದ್ದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

TCA ಉಡುಪಿ-ತಾಲೂಕು ಮಟ್ಟದ ಅಭೂತಪೂರ್ವ ಯಶಸ್ಸಿನ ಬಳಿಕ ಇದೀಗ ನವೆಂಬರ್ 19 ಮತ್ತು 20 ರಂದು ಜಿಲ್ಲಾಮಟ್ಟದ ಪಂದ್ಯಾಟ

ಕುಂದಾಪುರ-T.C.A ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನವೆಂಬರ್  19 ಮತ್ತು 20 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಪಂದ್ಯಾಟ ನಡೆಸಲಾಗುವುದೆಂದು ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ 7 ತಾಲೂಕು ಮಟ್ಟದ ಪಂದ್ಯಾಟ ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು,ಇದೀಗ 7 ತಾಲೂಕಿನ ಪ್ರಥಮ ಹಾಗೂ ದ್ವಿತೀಯ ಸ್ಥಾನಿ ಒಟ್ಟು 14 ತಂಡಗಳಾದ ಅಂಶು ಕೋಟೇಶ್ವರ, ಚೇತನಾ ಉಡುಪಿ,
ಅಗಸ್ತ್ಯ ಮದಗ,ಟೊರ್ಪೆಡೋಸ್ ಕುಂದಾಪುರ,8 ಸ್ಟಾರ್ ಉಪ್ಪುಂದ,ಆರ್.ಕೆ‌‌.ಕಾರ್ಕಳ,ದಾವೂದ್ ಶಿರ್ವ,ಇಲೆವೆನ್ ಅಪ್ ಕೋಟ,ಕಲಾಕಿರಣ,ಹೊಳೆಬಾಗಿಲು,ಫ್ರೆಂಡ್ಸ್ ಉದ್ಯಾವರ,ಪಾರಂಪಳ್ಳಿ,ಹೆಬ್ರಿ ಹಾಕ್ಸ್,ಇಲೆವೆನ್ ಬೆಳ್ಮಣ್ ತಂಡಗಳು ಜಿಲ್ಲಾಮಟ್ಟದ ಪಂದ್ಯದಲ್ಲಿ ಭಾಗವಹಿಸಲಿದೆ.
ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಹಾಗೂ ಮಾಜಿ ಆಟಗಾರರು ಆಗಮಿಸಲಿದ್ದಾರೆ.
Categories
ಸ್ಪೋರ್ಟ್ಸ್

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಜೀವನ ಕೌಶಲ್ಯ ವೃದ್ಧಿ”-ಗೌತಮ್ ಶೆಟ್ಟಿ ಟೊರ್ಪೆಡೋಸ್

ಉಡುಪಿ-“ಕ್ರೀಡೆಯಲ್ಲಿ ಭಾಗವಹಿಸುವುದರಿಂದ
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಹೆಚ್ಚಿ ಜೀವನ ಕೌಶಲ್ಯ ವೃದ್ಧಿಯಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಲೀಗ್ ಪ್ರಾರಂಭವಾಗಿದ್ದು,ಕ್ರೀಡಾಪಟುಗಳಿಗೆ ಕ್ರೀಡೆಯ ಮೂಲಕ ವೃತ್ತಿಗೂ ಹೆಚ್ಚಿನ ಸಹಕಾರಿಯಾಗಲಿದೆ”
ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಗೌತಮ್ ಶೆಟ್ಟಿ ತಿಳಿಸಿದರು.
ಇವರು ಅಕ್ಟೋಬರ್ 21 ಶುಕ್ರವಾರ ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ,ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ  ಸಂಚಾಲಕರಾದ ರೆವರೆಂಡ್ ಫಾದರ್ ಚಾರ್ಲ್ಸ್ ಮೆನೇಜಸ್,ಪ್ರಾಂಶುಪಾಲ ರಾದ ರೆವರೆಂಡ್ ಫಾದರ್ ಜಾನ್ಸನ್ ಸೀಕ್ವೇರಾ,
ಉಪಾಧ್ಯಕ್ಷ ಬೋನಿಫಸ್ ಡಿಸೋಜಾ,ಶ್ರೀಮತಿ ಬೆನೆಡಿಕ್ಟಾ ಫೆರ್ನಾಂಡಿಸ್,ಚರ್ಚ್ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ರೀಟಾ ಕ್ವಾಡ್ರಸ್ ಉಪಸ್ಥಿತರಿದ್ದರು.ದೈಹಿಕ ನಿರ್ದೇಶಕ ಜೆರಾಲ್ಡ್
ಪಿಂಟೋ ಸ್ವಾಗತಿಸಿದರು.
Categories
ಕ್ರಿಕೆಟ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ 2 ನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ರ್‍ಯಾಪಿಡ್ ಚೆಸ್ ಪಂದ್ಯಾವಳಿ

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ,ಗೌತಮ್ ಶೆಟ್ಟಿ ಯವರ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಕ್ಟೋಬರ್   15 ಮತ್ತು 16 ರಂದು 2 ನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾವಳಿ ಕುಂದಾಪುರದ ನಾರಾಯಣಗುರು ಎ.ಸಿ ಹಾಲ್ ನಲ್ಲಿ ಜರುಗಲಿದೆ.
15 ಶನಿವಾರ ಬೆಳಿಗ್ಗೆ 9.30 ಗೆ ಸರಿಯಾಗಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀಕಾಂತ್ ಡಿ.ವೈ.ಎಸ್‌.ಪಿ ಕುಂದಾಪುರ,ವೀಣಾ ಭಾಸ್ಕರ್ ಮೆಂಡನ್ ಕುಂದಾಪುರ ಪುರಸಭೆ ಅಧ್ಯಕ್ಷೆ,ರಂಜನ್ ರಮೇಶ್ ನಗರಕಟ್ಟೆ ಸಿ.ಇ.ಓ ಡಿಜಿಫ್ಲಿಕ್ ಇನ್ಷುರೆನ್ಸ್ ಮತ್ತು ರಂಜನ್ ನಗರಕಟ್ಟೆ ಸಕ್ಸಸ್ ಅಕಾಡೆಮಿ ಸಂಸ್ಥಾಪಕರು,ಸತೀಶ್ ಆಚಾರ್ಯ ಅಂತರಾಷ್ಟ್ರೀಯ ಕಾರ್ಟೂನಿಸ್ಟ್,ವಿಜಯ್.ಎಸ್.ಪೂಜಾರಿ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು,ರಾಜೇಶ್ ಕಾವೇರಿ ಬಿ.ಜೆ‌.ಪಿ ಮುಖಂಡರು ಮತ್ತು ಅಮಿತ್ ಕುಮಾರ್ ಶೆಟ್ಟಿ ಉಡುಪಿ ಚೆಸ್ ಅಸೋಸಿಯೇಷನ್ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಆದಿತ್ಯವಾರ 16 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ,ಗೋಪಿ ಕೃಷ್ಣ ವೃತ್ತ ನಿರೀಕ್ಷಕರು ಕುಂದಾಪುರ, ರಂಜನ್ ರಮೇಶ್ ನಗರಕಟ್ಟೆ ಸಿ.ಇ.ಓ ಡಿಜಿಫ್ಲಿಕ್ ಇನ್ಶುರೆನ್ಸ್ ಮತ್ತು ರಂಜನ್ ನಗರಕಟ್ಟೆ ಸಕ್ಸಸ್ ಅಕಾಡೆಮಿ ಸಂಸ್ಥಾಪಕರು,ಅಶೋಕ್ ಬೀಜಾಡಿ ಅಧ್ಯಕ್ಷರು ನಾರಾಯಣಗುರು ಸಂಘ ಕುಂದಾಪುರ, ಮೋಹನದಾಸ್ ಶೆಣೈ ಮಾಜಿ ಅಧ್ಯಕ್ಷರು ಪುರಸಭೆ ಕುಂದಾಪುರ,ಗಣೇಶ್ ಕಾಮತ್ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಪ್ರೋತ್ಸಾಹಕರು,ವಿಜಯ್ ಹೆಗ್ಡೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷರು,ಕೆ.ಸಿ ರಾಜೇಶ್ ಉಡುಪಿ ಜಿಲ್ಲಾ ಹೋಮ್ ಗಾರ್ಡ್ ನ 2 ನೇ ಕಮಾಂಡರ್ ಮತ್ತು ಕಿಶೋರ್ ಕಲಾಕ್ಷೇತ್ರ ಕುಂದಾಪುರ ಇವರು ಭಾಗವಹಿಸಲಿದ್ದಾರೆ.
ಈಗಾಗಲೇ ಎರಡು ದಿನಗಳ ಕಾಲ ನಡೆಯಲಿರುವ ಚೆಸ್ ಪಂದ್ಯಾವಳಿಯಲ್ಲಿ ದೇಶದ ನಾನಾ ಭಾಗಗಳಿಂದ 305 ಕ್ಕೂ ಹೆಚ್ಚಿನ ಖ್ಯಾತನಾಮ‌ ಆಟಗಾರರು ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಅಂತರಾಷ್ಟ್ರೀಯ ಮಾಸ್ಟರ್ ಗಳಾದ ಶರಣ್ ರಾವ್ ಮಂಗಳೂರು, ರತ್ನಾಕರ್ ಕೇರಳ,ಚಕ್ರವರ್ತಿ ರೆಡ್ಡಿ ತೆಲಂಗಾಣ,ಶ್ರೀನಾಥ್ ರಾವ್ ಛತ್ತೀಸ್ಗಢ, ಮಹಿಳಾ ಅಂತರಾಷ್ಟ್ರೀಯ ಆಟಗಾರ್ತಿ ಕರ್ನಾಟಕದ ಇಶಾ ಶರ್ಮಾ ಸಹಿತ 125 ಅಂತರಾಷ್ಟ್ರೀಯ ಫಿಡೆರೇಟೆಡ್ ಆಟಗಾರರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ
ಹಾಗೂ ಪ್ರಮುಖ ತೀರ್ಪುಗಾರರಾಗಿ ಚೀಫ್ ಅರ್ಬಿಟರ್ ವಸಂತ್ ಬಿ.ಹೆಚ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ತಿಳಿಸಿದ್ದಾರೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

TCA ಉಡುಪಿ-ನವೆಂಬರ್ ತಿಂಗಳಲ್ಲಿ ಜಿಲ್ಲಾಮಟ್ಟದ ಪಂದ್ಯಾಟ-ನೂತನ ಗೌರವಾಧ್ಯಕ್ಷರ ನೇಮಕ

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್,
ಈಗಾಗಲೇ 7 ತಾಲೂಕುಗಳಲ್ಲಿ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಿರ್ವಹಿಸಿದ್ದು,
ಮುಂಬರುವ ನವೆಂಬರ್ 18,19 ಮತ್ತು 20 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ
ಪಂದ್ಯಾಟ ನಡೆಸಲಾಗುವುದು ಎಂದು ಸೋಮವಾರ ಉಡುಪಿಯಲ್ಲಿ ನಡೆದ ಸಭೆಯಲ್ಲಿ ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ತಿಳಿಸಿದರು.
ಪ್ರತೀ ತಾಲೂಕಿನ 2 ತಂಡಗಳು  (ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು),7 ತಾಲೂಕಿನ ಒಟ್ಟು 14 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದ್ದು,ತಾಲೂಕು ಮಟ್ಟದ ತಂಡಗಳ ನಾಯಕರಿಗೆ ಈಗಾಗಲೇ ತಿಳಿಸಲಾಗಿದೆ‌.ಮುಂದಿನ ವಾರದಲ್ಲಿ ತಂಡದ ನಾಯಕರ ಸಭೆಯನ್ನು ಆಯೋಜಿಸಲಾಗಿದ್ದು,ಪಂದ್ಯಾಟದ ಬಗ್ಗೆ ಸವಿಸ್ತಾರ ಮಾಹಿತಿ ಲಭ್ಯವಾಗಲಿದೆ ಎಂದರು.
*ಟಿ‌.ಸಿ‌.ಎ ನೂತನ ಗೌರವಾಧ್ಯಕ್ಷರ ಆಯ್ಕೆ*
ಸೋಮವಾರ ಉಡುಪಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ಯಾರಡೈಸ್ ಬನ್ನಂಜೆ ತಂಡದ ಹಿರಿಯ ಆಟಗಾರರಾದ ಯಾದವ್ ನಾಯಕ್ ಕೆಮ್ಮಣ್ಣು,ರಮೇಶ್ ಶೇರಿಗಾರ್ ಮತ್ತು ಬ್ಲೂಸ್ಟಾರ್ ಶಿರ್ವ ತಂಡದ ಸಂಸ್ಥಾಪಕ ನಾಯಕರಾದ ಸದಾನಂದ ಶಿರ್ವ ಇವರನ್ನು ಟಿ.ಸಿ‌.ಎ ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಯಿತು.ಈ ಸಂದರ್ಭ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಟಿ‌.ಸಿ.ಎ ಮೀಡಿಯಾ ಪಾರ್ಟ್ನರ್ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಈ ಸಂದರ್ಭ ಟಿ.ಸಿ‌‌.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್,ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ
ಪ್ಯಾರಡೈಸ್ ಬನ್ನಂಜೆ,ಶರತ್ ಶೆಟ್ಟಿ ಪಡುಬಿದ್ರಿ,ಪ್ರವೀಣ್ ಕುಮಾರ್ ಬೈಲೂರು,ಪ್ರವೀಣ್ ಪಿತ್ರೋಡಿ,ಟಿ.ಸಿ.ಎ ಪದಾಧಿಕಾರಿಗಳು ಉಪಸ್ಥಿತರಿದ್ದರು…
Categories
ಭರವಸೆಯ ಬೆಳಕು

ಅಂಗನವಾಡಿಯ 45 ಮಕ್ಕಳಿಗೆ ಸ್ಪೋರ್ಟ್ಸ್ ಶೂ ವಿತರಿಸಿದ ಟೊರ್ಪೆಡೋಸ್ ಗೌತಮ್ ಶೆಟ್ಟಿ

ಕುಂಭಾಶಿ- ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ,
ಈಗಲ್ಸ್ ಕ್ರಿಕೆಟ್ ಕ್ಲಬ್ ಕುಂಭಾಶಿ ಮತ್ತು ಕುಂಭಾಶಿ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಅಂಬೇಡ್ಕರ್ ಭವನ ಕುಂಭಾಶಿ ಇಲ್ಲಿ ನಡೆದ ಅಮೃತಪ್ರಾಶನ(ಸ್ವರ್ಣ ಪ್ರಾಶನ)ಕಣ್ಣಿನ ತಪಾಸಣಾ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ಇವರು ಅಂಗನವಾಡಿಯ 45 ಮಕ್ಕಳಿಗೆ ಬೆಲೆಬಾಳುವ BAS ಕಂಪೆನಿಯ ಸ್ಪೋರ್ಟ್ಸ್ ಶೂ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿನ ಪ್ರಾಂಶುಪಾಲರಾದ ಡಾ.ಎಸ್.ಜಿ.ಪ್ರಸನ್ನ ಐತಾಳ್ ವಹಿಸಿದರೆ,ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಶ್ರೀನಿಧಿ ಉಪಾಧ್ಯಾಯ ಉದ್ಘಾಟನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಬಿ.ಜೆ‌.ಪಿ ಅಧ್ಯಕ್ಷರಾದ ಶಂಕರ ದೇವಾಡಿಗ ಅಂಕದಕಟ್ಟೆ,ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ‌ ಶೆಟ್ಟಿ, ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿ(ರಿ) ಕುಂದಾಪುರ ಅಧ್ಯಕ್ಷೆ ಶ್ರೀಮತಿ ರಾಧಾ ದಾಸ್,ಕುಂಭಾಶಿ ಗ್ರಾಮ ಪಂಚಾಯತ್ ಪಿ.ಡಿ.ಓ ಜಯರಾಮ್ ಶೆಟ್ಟಿ, ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎ.ಓ ಅಭಿನಂದನ್ ಶೆಟ್ಟಿ,ಎಮ್.ಎಸ್ ಡಾ ಸವಿತಾ.ಕೆ.ಭಟ್,ಈಗಲ್ಸ್ ಕ್ರಿಕೆಟ್ ಕ್ಲಬ್ ಕುಂಭಾಶಿಯ ಅಧ್ಯಕ್ಷ ಸುನಿಲ್ ಮತ್ತು ಶಿಬಿರಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
Categories
ಅಥ್ಲೆಟಿಕ್ಸ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ರ‌್ಯಾಪಿಡ್ ಚೆಸ್ ಪಂದ್ಯಾವಳಿ

ಉಡುಪಿ-ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ,ಶ್ರೀಯುತ  ಗೌತಮ್ ಶೆಟ್ಟಿಯವರ  ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಅಕ್ಟೋಬರ್ 15 ಮತ್ತು 16 ರಂದು  2 ನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾವಳಿ ಕುಂದಾಪುರದ ನಾರಾಯಣ ಎ.ಸಿ ಹಾಲ್ ನಲ್ಲಿ ನಡೆಯಲಿದೆ.
ಅಕ್ಟೋಬರ್ 15 ರಂದು ಬೆಳಿಗ್ಗೆ 9 ಗಂಟೆಗೆ
ಉದ್ಘಾಟನೆಗೊಳ್ಳಲಿದ್ದು,10.30 ಸರಿಯಾಗಿ
ಮೊದಲ ಸುತ್ತಿನ ಪಂದ್ಯಾವಳಿ ಆರಂಭವಾಗಲಿದೆ.
ಅಕ್ಟೋಬರ್ 16 ಸಂಜೆ 5.30 ಕ್ಕೆ ಬಹುಮಾನ ವಿತರಣಾ ಸಮಾಂಭ ನಡೆಯಲಿದೆ.
ಮುಕ್ತ,ರೇಟೆಡ್,ಉಡುಪಿ ಜಿಲ್ಲೆ ಬೆಸ್ಟ್ ಪ್ಲೇಯರ್ ಸಹಿತ ನಾನಾ ವಯೋಮಿತಿಯ ವಿಜೇತರಿಗೆ 2 ಲಕ್ಷ ಮೌಲ್ಯದ ಒಟ್ಟು 165 ಬಹುಮಾನ ನೀಡಲಾಗುತ್ತದೆ.
ಮುಕ್ತ ವಿಭಾಗದ ವಿಜೇತರಿಗೆ ಪ್ರಥಮ 30,000 ರೂ,ದ್ವಿತೀಯ 20,000ರೂ,ತೃತೀಯ 10,000ರೂ,
4ನೇ  ಸ್ಥಾನ 8,000,5ನೇ ಸ್ಥಾನ 7,000ರೂ,6 ನೇ ಸ್ಥಾನ 6,000ರೂ,7 ನೇ ಸ್ಥಾನ 5,000 ರೂ,8 ನೇ ಸ್ಥಾನ 4,000ರೂ,9 ನೇ ಸ್ಥಾನ 3,500ರೂ,10 ನೇ ಸ್ಥಾನ 3,000 ರೂ,11 ರಿಂದ 15 ನೇ ಸ್ಥಾನಿಗಳಿಗೆ ತಲಾ 2,500 ರೂ,16 ರಿಂದ 20 ನೇ ಸ್ಥಾನಿಗಳಿಗೆ  ತಲಾ 2,000ರೂ,21 ರಿಂದ 25 ನೇ ಸ್ಥಾನಿಗಳಿಗೆ ತಲಾ 1,500 ರೂ ಮತ್ತು ಟ್ರೋಫಿ ನೀಡಲಾಗುತ್ತದೆ.
7,9,11,13,15 ವಯೋಮಿತಿಯ ಪ್ರತಿ ವಿಭಾಗದ ಟಾಪ್ 10 ಬಾಲಕ-ಬಾಲಕಿಯರಿಗೆ ಟ್ರೋಫಿ,ಹಾಗೂ ಉಡುಪಿ
ಜಿಲ್ಲೆಯ ಬೆಸ್ಟ್ ಪ್ಲೇಯರ್ ಟಾಪ್ 10 ವಿಜೇತರಿಗೆ ಮೊದಲ ಬಹುಮಾನ 2,000 ರೂ,ದ್ವಿತೀಯ 1,500 ರೂ,ತೃತೀಯ 1,500 ರೂ,4 ರಿಂದ 10 ನೇ ಸ್ಥಾನಿಗಳಿಗೆ ಟ್ರೋಫಿ ನೀಡಲಾಗುತ್ತಿದೆ.
1,000 ದಿಂದ 1,199, 1,200 ರಿಂದ 1,399,1400 ರಿಂನ1,599 ಹಾಗೂ1,600 ರಿಂದ 1799 ರೇಟಿಂಗ್ ಹೊಂದಿದ ಹಾಗೂ ಅನ್ ರೇಟೆಡ್ ವಿಜೇತ ಮೊದಲ ಸ್ಥಾನಿಗೆ 3,500 ರೂ,ದ್ವಿತೀಯ 3,000 ರೂ,ತೃತೀಯ 2,500ರೂ,4 ನೇ ಸ್ಥಾನ 2,000,5 ನೇ ಸ್ಥಾನಿಗೆ 1,500ರೂ ಹಾಗೂ ಟ್ರೋಫಿ ನೀಡಲಾಗುತ್ತಿದೆ.
ಉತ್ತಮ ಹಿರಿಯ ಆಟಗಾರ(60 ಕ್ಕಿಂತ ಮೇಲಿನವರು) ವಿಭಾಗದ ವಿಜೇತ ಮೊದಲ‌ ಸ್ಥಾನಿಗೆ 2,500 ರೂ ಮತ್ತು ದ್ವಿತೀಯ 2,000 ರೂ,ತೃತೀಯ 1,500 ರೂ ಹಾಗೂ ಬೆಸ್ಟ್ ಯಂಗೆಸ್ಟ್ ಪ್ಲೇಯರ್ ಮೊದಲ ಹಾಗೂ ದ್ವಿತೀಯ ಸ್ಥಾನಿಗೆ ಟ್ರೋಫಿ ನೀಡಲಾಗುತ್ತಿದೆ.
ಅಕ್ಟೋಬರ್ 13 ನೋಂದಣಿಗೆ ಕೊನೆಯ ದಿನವಾಗಿದ್ದು www.udupichessassociation.com ಅಥವಾ www.chessfee.com ಸಂಪರ್ಕಿಸಬಹುದು ಎಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ  ಗೌತಮ್ ಶೆಟ್ಟಿ ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಮಿತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.