ಉಡುಪಿ-“ಕ್ರೀಡೆಯಲ್ಲಿ ಭಾಗವಹಿಸುವುದರಿಂದಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಹೆಚ್ಚಿ ಜೀವನ ಕೌಶಲ್ಯ ವೃದ್ಧಿಯಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಲೀಗ್ ಪ್ರಾರಂಭವಾಗಿದ್ದು,ಕ್ರೀಡಾಪಟುಗಳಿಗೆ ಕ್ರೀಡೆಯ ಮೂಲಕ ವೃತ್ತಿಗೂ ಹೆಚ್ಚಿನ ಸಹಕಾರಿಯಾಗಲಿದೆ”
ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಗೌತಮ್ ಶೆಟ್ಟಿ ತಿಳಿಸಿದರು.
ಇವರು ಅಕ್ಟೋಬರ್ 21 ಶುಕ್ರವಾರ ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ,ಕ್ರೀಡಾಪಟುಗಳನ್ನುದ್ದೇ ಶಿಸಿ ಮಾತನಾಡಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸಂಚಾಲಕರಾದ ರೆವರೆಂಡ್ ಫಾದರ್ ಚಾರ್ಲ್ಸ್ ಮೆನೇಜಸ್,ಪ್ರಾಂಶುಪಾಲ ರಾದ ರೆವರೆಂಡ್ ಫಾದರ್ ಜಾನ್ಸನ್ ಸೀಕ್ವೇರಾ,
ಉಪಾಧ್ಯಕ್ಷ ಬೋನಿಫಸ್ ಡಿಸೋಜಾ,ಶ್ರೀಮತಿ ಬೆನೆಡಿಕ್ಟಾ ಫೆರ್ನಾಂಡಿಸ್,ಚರ್ಚ್ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ರೀಟಾ ಕ್ವಾಡ್ರಸ್ ಉಪಸ್ಥಿತರಿದ್ದರು.ದೈಹಿಕ ನಿರ್ದೇಶಕ ಜೆರಾಲ್ಡ್
ಪಿಂಟೋ ಸ್ವಾಗತಿಸಿದರು.