ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ ಸ್ವಂತ ರಾಜ್ಯದ ತಂಡದಲ್ಲೇ ಕಡೆಗಣಿಸಲ್ಪಟ್ಟು depressionಗೆ ಜಾರಿದ್ದವ. ಆ ಇಬ್ಬರೂ ಹುಡುಗರು ಐಪಿಎಲ್’ನಲ್ಲಿ ಆಡುತ್ತಿರುವ ಹೊಡಿಬಡಿ ಆಟವನ್ನು ಕ್ರಿಕೆಟ್ ಜಗತ್ತೇ ನಿಬ್ಬೆರಗಿನಿಂದ ನೋಡುತ್ತಿದೆ.
ಐಪಿಎಲ್ auctionನಲ್ಲಿ ಪಂಜಾಬ್ ಫ್ರಾಂಚೈಸಿಯ ಮಾಲೀಕರು Confusion ಆಗಿ ಪಂಜಾಬ್ ತಂಡ ಸೇರಿದ್ದವ ಶಶಾಂಕ್ ಸಿಂಗ್. ಈಗ ಪಂಜಾಬ್ ತಂಡದ ಮಾನ ಉಳಿಸುತ್ತಿರುವುದು ಇದೇ ಶಶಾಂಕ್.
ಇನ್ನು ಅಶುತೋಷ್ ಶರ್ಮಾ. ಈತನಂತೂ rejected ಮಾಲು. “ಪ್ರಯೋಜನಕ್ಕೆ ಬಾರದವ” ಎಂದಿದ್ದರು ಒಬ್ಬ ಕ್ರಿಕೆಟ್ ಕೋಚ್. 4 ವರ್ಷ ಆತನ ಕಡೆ ಯಾರೂ ತಿರುಗಿ ನೋಡಿದ್ದೂ ಇಲ್ಲ. ಆದರೆ ಐಪಿಎಲ್’ನಲ್ಲಿ ನಾಲ್ಕೇ 4 ಇನ್ನಿಂಗ್ಸ್. ಎಲ್ಲೋ ಕಳೆದು ಹೋಗಿದ್ದ ಅಶುತೋಷ್’ನನ್ನು ಹೀರೋ ಮಾಡಿ ಬಿಟ್ಟಿದೆ.
ಈತ 20 ಲಕ್ಷ ರೂಪಾಯಿಗೆ ಪಂಜಾಬ್ ಕಿಂಗ್ ತಂಡದ ಸೇರಿದ್ದ ಅಶುತೋಷ್’ನ ಆಟದ ಮುಂದೆ 20 ಕೋಟಿ ಪಡೆದವರು ಲೆಕ್ಕಕ್ಕೇ ಇಲ್ಲ. ಐಪಿಎಲ್’ನಂಥಾ ಬಿಗ್ ಸ್ಟೇಜ್’ನಲ್ಲಿ ಈ ಹುಡುಗ ಪ್ರತೀ ಪಂದ್ಯವನ್ನು ಕ್ಲಬ್ ಗೇಮ್ ರೀತಿ ಆಡುತ್ತಿದ್ದಾನೆ. ಭಯ ಇಲ್ಲ, ಸಾವಿರಾರು ಜನರ ಮುಂದೆ ಆಡುತ್ತಿರುವ ಅಂಜಿಕೆಯಿಲ್ಲ.
ಗುಜರಾತ್ ವಿರುದ್ಧ 27 ಎಸೆತಗಳಲ್ಲಿ 50 ರನ್ ಬೇಕಿದ್ದಾಗ 17 ಎಸೆತಗಳಲ್ಲಿ 31 ರನ್ (ಪಂಜಾಬ್’ಗೆ 3 ವಿಕೆಟ್ ಜಯ);
ಹೈದರಾಬಾದ್ ವಿರುದ್ಧ 27 ಎಸೆತಗಳಲ್ಲಿ 69 ರನ್ ಬೇಕಿದ್ದಾಗ 15 ಎಸೆತಗಳಲ್ಲಿ 33* ರನ್ (ಪಂಜಾಬ್’ಗೆ 2 ರನ್ ಸೋಲು);
ಮುಂಬೈ ವಿರುದ್ಧ 64 ಎಸೆತಗಳಲ್ಲಿ 116 ರನ್ ಬೇಕಿದ್ದಾಗ 28 ಎಸೆತಗಳಲ್ಲಿ 61 ರನ್ (ಪಂಜಾಬ್’ಗೆ 9 ರನ್ ಸೋಲು).
ಟಿ20ಯಲ್ಲಿ ಕೆಳ ಕ್ರಮಾಂಕದಲ್ಲಿ ಆಡುವಾಗ ಕನ್ಸಿಸ್ಟೆನ್ಸಿ ತೋರಿಸುವುದು ತುಂಬಾ ಕಷ್ಟ ಎಂಬ ಪರಿಸ್ಥಿತಿಯಲ್ಲಿ, ಈ ಪರಿಯ ಈ ಕನ್ಸಿಸ್ಟೆನ್ಸಿ..! ಅದೂ ಟಾಪ್ ಕ್ವಾಲಿಟಿ ಬೌಲರ್’ಗಳ ವಿರುದ್ಧ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ ಅಶುತೋಷ್ ಆಡಿದ ಮಾತು..! “ಒಬ್ಬ ಒಳ್ಳೆ ಫಾಸ್ಟ್ ಬೌಲರ್, ಚೆಂಡನ್ನು ಚೆನ್ನಾಗಿ ಸ್ವಿಂಗ್ ಮಾಡುತ್ತಿದ್ದಾಗ ಸಿಕ್ಸರ್ ಬಾರಿಸಬೇಕೆಂಬ ಆಸೆಯಿತ್ತು. ಅದನ್ನು ಜಸ್’ಪ್ರೀತ್ ಬುಮ್ರಾಗೆ ಬಾರಿಸಿದ್ದು ಖುಷಿ ಕೊಟ್ಟಿದೆ”.
ಬೂಮ್ರಾನಂಥಾ ಬೆಂಕಿ ಬೌಲರ್’ಗಳಿಗೆ ಸ್ವೀಪ್ ಮಾಡಿ ಸಿಕ್ಸರ್ ಹೊಡೆಯಬೇಕೆಂದರೆ ಸಾಮಾನ್ಯ ಗುಂಡಿಗೆ ಇದ್ದರೆ ಸಾಲದು, ಎಂಟೆದೆ ಬೇಕು.
25 ವರ್ಷದ ಅಶುತೋಷ್ ಶರ್ಮಾನ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ. ಈತನ ಊರು ಮಧ್ಯಪ್ರದೇಶದ ರಾಟ್ಲಮ್. ಕ್ರಿಕೆಟ್ ಆಡಲೆಂದೇ ಸಣ್ಣ ವಯಸ್ಸಲ್ಲೇ ಇಂದೋರ್’ಗೆ ಬಂದವ. ಕೈಯಲ್ಲಿ ದುಡ್ಡಿಲ್ಲದಿದ್ದಾಗ ಒಂದು ಹೊತ್ತಿನ ಊಟಕ್ಕೆ ಲೋಕಲ್ ಟೂರ್ನಮೆಂಟ್’ಗಳಲ್ಲಿ ಅಂಪೈರಿಂಗ್ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಇರೋ ಬರೋ ಲೋಕಲ್ ಟೂರ್ನಿಗಳಲ್ಲಿ ಬೆವರು ಹರಿಸುತ್ತಿದ್ದವನಿಗೆ ದಾರಿ ತೋರಿಸಿದ್ದು ಮಧ್ಯಪ್ರದೇಶದ ಮಾಜಿ ಕ್ರಿಕೆಟಿಗ, ಭಾರತ ಪರ ಒಂದೆರಡು ಪಂದ್ಯಗಳನ್ನು ಆಡಿದ್ದ ಅಮಾಯ್ ಖುರೇಸಿಯಾ.
2018ರಲ್ಲಿ ಮಧ್ಯಪ್ರದೇಶ ಪರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿ ತಂಡದ ಪರವಾಗಿ 2ನೇ ಅತೀ ಹೆಚ್ಚು ರನ್ ಗಳಿಸಿದ್ದ ಅಶುತೋಷ್. ಆದರೆ ಮುಂದಿನ ವರ್ಷ #smat ಟೂರ್ನಿಗೆ ಮಧ್ಯಪ್ರದೇಶ ತಂಡವನ್ನು ಪ್ರಕಟಿಸಿದಾಗ ಅಲ್ಲಿ ಅಶುತೋಷ್’ನ ಹೆಸರೇ ಇರಲಿಲ್ಲ. ತಂಡಕ್ಕೆ ಕೋಚ್ ಆಗಿ ಬಂದಿದ್ದ, ಈಗಿನ ಕೆಕೆಆರ್ ತಂಡದ ಹೆಡ್ ಕೋಚ್ ಚಂದ್ರಕಾಂತ್ ಪಂಡಿತ್, ಕಾರಣವನ್ನೇ ನೀಡದೆ ಅಶುತೋಷ್’ನನ್ನ ತಂಡದಿಂದ ಹೊರ ಹಾಕಿದ್ದರು. ಅಲ್ಲಿಂದ 6 ತಿಂಗಳು depression.
ಇಲ್ಲಿ ಕತ್ತಲೆ ಕವಿದರೆ, ಇನ್ನೆಲ್ಲೋ ಬೆಳಕು ಮೂಡಿದೆ ಎಂದರ್ಥ. ಸ್ವಂತ ರಾಜ್ಯದ ತಂಡದಲ್ಲೇ ಕಡೆಗಣಿಸ್ಪಟ್ಟ ಅಶುತೋಷ್ ಶರ್ಮಾನಿಗೆ ರೈಲ್ವೇಸ್ ಬೆಳಕು ತೋರಿಸಿತು. 2023ರಲ್ಲಿ ಮಧ್ಯಪ್ರದೇಶದ ಹುಡುಗನಿಗೆ ಕೆಲಸ ಕೊಟ್ಟ ರೈಲ್ವೇ ಇಲಾಖೆ, ತನ್ನ ತಂಡದಲ್ಲಿ ಆಡುವ ಅವಕಾಶವನ್ನೂ ಕೊಟ್ಟಿತು. ನಾಲ್ಕು ವರ್ಷ ಪ್ರೊಫೆಶನಲ್ ಕ್ರಿಕೆಟ್ ಆಡದ ಅಶುತೋಷ್, ಆ ವರ್ಷ ರೈಲ್ವೇಸ್ ಪರ ಅಬ್ಬರಿಸಿ ಬಿಟ್ಟ.
SMAT ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ 11 ಎಸೆತಗಳಲ್ಲಿ 50 ರನ್ ಸಿಡಿಸಿ, ಯುವರಾಜ್ ಸಿಂಗ್ ದಾಖಲೆಯನ್ನೇ (ಟಿ20 ಕ್ರಿಕೆಟ್’ನಲ್ಲಿ ವೇಗದ ಅರ್ಧಶತಕದ ದಾಖಲೆ) ಪುಡಿಗಟ್ಟಿದ್ದ. ಅವತ್ತು quality ಇಲ್ಲದ ಬೌಲಿಂಗ್ ಅಟ್ಯಾಕ್ ವಿರುದ್ಧ ರನ್ ಹೊಡೆಯೋದು ಏನ್ ಮಹಾ, ಅಂದವರಿಗೆ ಈಗ ಐಪಿಎಲ್’ನಲ್ಲಿ ಉತ್ತರ ಕೊಡುತ್ತಿದ್ದಾನೆ.
#AshutoshSharma #ShashankSingh #ipl #ipl2024 #punjabkings