ಕಾರ್ಕಳ-ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ ಮತ್ತು ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಇವರ ಜಂಟಿ ಆಯೋಜನೆಯಲ್ಲಿ,ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಬಿ.ಸಿ.ಆಳ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿಟ್ಟೆಯಲ್ಲಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾಟ ಜರುಗಿತು.
ರಾಯಲ್ ಇಂಡಿಯನ್ಸ್ ಪ್ರಥಮ ಹಾಗೂ ಕೆ.ಆರ್.ಎಸ್-ಬಿ.ಎ.ಸಿ.ಎ ರನ್ನರ್ ಅಪ್ ತಂಡವಾಗಿ ಮೂಡಿ ಬಂದಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಟೊರ್ಪೆಡೋಸ್ ಗೌತಮ್ ಶೆಟ್ಟಿ ಮಾತನಾಡಿ *”ಕ್ರೀಡೆಯಿಂದ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಸಾಧ್ಯ.ಬಿಡುವಿಲ್ಲದ ಜೀವನ ಕೆಲಸದೊತ್ತಡದ ನಡುವೆ ಕ್ರೀಡೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತದೆ.
ಕೆ.ಆರ್.ಎಸ್ ಮತ್ತು ಬಿ.ಎ.ಸಿ.ಎ ಕ್ರಿಕೆಟ್ ಕ್ಲಬ್ ಗಳು ಯುವ ಕ್ರಿಕೆಟಿಗರ ಕ್ರೀಡಾ ಬದುಕು ರೂಪಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದು ಹಿರಿಯ ಆಟಗಾರರ ಸಮರ್ಪಣಾ ಭಾವ ಅತ್ಯಂತ ಶ್ಲಾಘನೀಯ.ಮಕ್ಕಳ ಕ್ರೀಡಾ ಬದುಕು ರೂಪಿಸಲು ಬಿ.ಸಿ.ಆಳ್ವ ಸುಸಜ್ಜಿತ ಹುಲ್ಲುಹಾಸಿನ ಅಂಗಣದ ವ್ಯವಸ್ಥೆಯನ್ನು ನಿಟ್ಟೆ ವಿದ್ಯಾಸಂಸ್ಥೆ ಮಾಡಿದ್ದು,ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಕ್ರೀಡಾಪಟುಗಳು ಇಂತಹ ಕ್ರೀಡಾಸಂಸ್ಥೆಗಳಿಗೆ ಋಣಿಯಾಗಿರಬೇಕು” ಎಂದರು.*
ಈ ಸಂದರ್ಭ ಮುಖ್ಯ ಅತಿಥಿಗಳಾಗಿ
ನಿಟ್ಟೆ ವಿಶ್ವವಿದ್ಯಾಲಯದ ಚಾನ್ಸಲರ್ ಶ್ರೀಯುತ ಎನ್.ವಿನಯ್ ಹೆಗ್ಡೆ,ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀ.ನಿರಂಜನ್.ಎನ್.ಚಿಪ್ಳೂಣ್ಕರ್,
ಸಿ.ಎ.ಬ್ಯಾಂಕ್ ಪಡುಬಿದ್ರಿ ಅಧ್ಯಕ್ಷರಾದ ಶ್ರೀ.ವೈ.ಸುಧೀರ್ ಕುಮಾರ್,ಕೆ.ಆರ್.ಎಸ್ ಅಕಾಡೆಮಿಯ ಉದಯ್ ಕುಮಾರ್ ಕಟಪಾಡಿ,ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ವಿಜಯ್ ಆಳ್ವ ಮತ್ತು ಹಿರಿಯ ಆಟಗಾರರು ಉಪಸ್ಥಿತರಿದ್ದರು.