ಉಡುಪಿ-ಕೊಡಂಕೂರು ಕೋಟಿಯಾನ್ ವಾಲಿಬಾಲ್ ಅಕಾಡೆಮಿ ಇವರ ಪ್ರಾಯೋಜಕತ್ವದಲ್ಲಿ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ(ರಿ)ಕೊಡಂಕೂರು ಇವರ ಸಹಕಾರದೊಂದಿಗೆ ನಡೆದ ಮುಕ್ತ ಪುರುಷರ ಹಾಗೂ ಮಹಿಳೆಯರ 3 ಜನ ಆಟಗಾರರ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿಯವರು
“ಕ್ರೀಡೆಯಲ್ಲಿ ನಿರಂತರವಾಗಿ ತೊಡಗಿಸಿಗೊಳ್ಳುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ,ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಬದ್ಧರಾಗುತ್ತೇವೆ ಹಾಗೂ ಜೀವನ ಕೌಶಲ್ಯ ವೃದ್ಧಿಯಾಗುತ್ತದೆ.” ಎಂದರು.
ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ಶ್ರೀ.ಕೆ.ದಿವಾಕರ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿದರು.ಕೊಡಂಕೂರು ನಾಗರಿಕ
ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಘುನಾಥ್ ಮಾಬಿಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಮುಖ್ಯ ಅತಿಥಿಗಳಾಗಿ ಕಾರ್ಕಳ ಯಂಗ್ ಸ್ಟಾರ್ ವಾಲಿಬಾಲ್ ಕ್ಲಬ್ ಅಧ್ಯಕ್ಷ ಪ್ರವೀಣ್.ಕೆ.ಕೋಟ್ಯಾನ್,ರಾಷ್ಟ್ರ ಮಟ್ಟದ ಆಟಗಾರ ಸುಮನ್ ಕುಮಾರ್,ರಾಜ್ಯ ಮಟ್ಟದ ಆಟಗಾರ ರಾಜೇಶ್ ಹೆಗ್ಡೆ,ಮಲ್ಟಿ ನ್ಯಾಷನಲ್ ಕಂಪೆನಿ ಸೀನಿಯರ್ ಮೆನೇಜರ್ ಮಿನೊಟಿ ಆಗ್ನೇಸ್ ಬ್ಲಾಜೋ,ಕೊಡಂಕೂರು ನಾಗರಿಕ ಹಿತರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷರಾದ ಅಶೋಕ್ ಪೂಜಾರಿ ಕೊಡಂಕೂರು,ಭಾಸ್ಕರ್.ಸಿ.ಕೋಟ್ಯಾನ್ ಮತ್ತು ಹಳೆ ವಿದ್ಯಾರ್ಥಿಗಳು,ಆಟಗಾರರು ಉಪಸ್ಥಿತರಿದ್ದರು.