ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ,ಗೌತಮ್ ಶೆಟ್ಟಿ ಯವರ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಕ್ಟೋಬರ್ 15 ಮತ್ತು 16 ರಂದು 2 ನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾವಳಿ ಕುಂದಾಪುರದ ನಾರಾಯಣಗುರು ಎ.ಸಿ ಹಾಲ್ ನಲ್ಲಿ ಜರುಗಲಿದೆ.
15 ಶನಿವಾರ ಬೆಳಿಗ್ಗೆ 9.30 ಗೆ ಸರಿಯಾಗಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀಕಾಂತ್ ಡಿ.ವೈ.ಎಸ್.ಪಿ ಕುಂದಾಪುರ,ವೀಣಾ ಭಾಸ್ಕರ್ ಮೆಂಡನ್ ಕುಂದಾಪುರ ಪುರಸಭೆ ಅಧ್ಯಕ್ಷೆ,ರಂಜನ್ ರಮೇಶ್ ನಗರಕಟ್ಟೆ ಸಿ.ಇ.ಓ ಡಿಜಿಫ್ಲಿಕ್ ಇನ್ಷುರೆನ್ಸ್ ಮತ್ತು ರಂಜನ್ ನಗರಕಟ್ಟೆ ಸಕ್ಸಸ್ ಅಕಾಡೆಮಿ ಸಂಸ್ಥಾಪಕರು,ಸತೀಶ್ ಆಚಾರ್ಯ ಅಂತರಾಷ್ಟ್ರೀಯ ಕಾರ್ಟೂನಿಸ್ಟ್,ವಿಜಯ್.ಎಸ್.ಪೂಜಾರಿ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು,ರಾಜೇಶ್ ಕಾವೇರಿ ಬಿ.ಜೆ.ಪಿ ಮುಖಂಡರು ಮತ್ತು ಅಮಿತ್ ಕುಮಾರ್ ಶೆಟ್ಟಿ ಉಡುಪಿ ಚೆಸ್ ಅಸೋಸಿಯೇಷನ್ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಆದಿತ್ಯವಾರ 16 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ,ಗೋಪಿ ಕೃಷ್ಣ ವೃತ್ತ ನಿರೀಕ್ಷಕರು ಕುಂದಾಪುರ, ರಂಜನ್ ರಮೇಶ್ ನಗರಕಟ್ಟೆ ಸಿ.ಇ.ಓ ಡಿಜಿಫ್ಲಿಕ್ ಇನ್ಶುರೆನ್ಸ್ ಮತ್ತು ರಂಜನ್ ನಗರಕಟ್ಟೆ ಸಕ್ಸಸ್ ಅಕಾಡೆಮಿ ಸಂಸ್ಥಾಪಕರು,ಅಶೋಕ್ ಬೀಜಾಡಿ ಅಧ್ಯಕ್ಷರು ನಾರಾಯಣಗುರು ಸಂಘ ಕುಂದಾಪುರ, ಮೋಹನದಾಸ್ ಶೆಣೈ ಮಾಜಿ ಅಧ್ಯಕ್ಷರು ಪುರಸಭೆ ಕುಂದಾಪುರ,ಗಣೇಶ್ ಕಾಮತ್ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಪ್ರೋತ್ಸಾಹಕರು,ವಿಜಯ್ ಹೆಗ್ಡೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷರು,ಕೆ.ಸಿ ರಾಜೇಶ್ ಉಡುಪಿ ಜಿಲ್ಲಾ ಹೋಮ್ ಗಾರ್ಡ್ ನ 2 ನೇ ಕಮಾಂಡರ್ ಮತ್ತು ಕಿಶೋರ್ ಕಲಾಕ್ಷೇತ್ರ ಕುಂದಾಪುರ ಇವರು ಭಾಗವಹಿಸಲಿದ್ದಾರೆ.
ಈಗಾಗಲೇ ಎರಡು ದಿನಗಳ ಕಾಲ ನಡೆಯಲಿರುವ ಚೆಸ್ ಪಂದ್ಯಾವಳಿಯಲ್ಲಿ ದೇಶದ ನಾನಾ ಭಾಗಗಳಿಂದ 305 ಕ್ಕೂ ಹೆಚ್ಚಿನ ಖ್ಯಾತನಾಮ ಆಟಗಾರರು ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಅಂತರಾಷ್ಟ್ರೀಯ ಮಾಸ್ಟರ್ ಗಳಾದ ಶರಣ್ ರಾವ್ ಮಂಗಳೂರು, ರತ್ನಾಕರ್ ಕೇರಳ,ಚಕ್ರವರ್ತಿ ರೆಡ್ಡಿ ತೆಲಂಗಾಣ,ಶ್ರೀನಾಥ್ ರಾವ್ ಛತ್ತೀಸ್ಗಢ, ಮಹಿಳಾ ಅಂತರಾಷ್ಟ್ರೀಯ ಆಟಗಾರ್ತಿ ಕರ್ನಾಟಕದ ಇಶಾ ಶರ್ಮಾ ಸಹಿತ 125 ಅಂತರಾಷ್ಟ್ರೀಯ ಫಿಡೆರೇಟೆಡ್ ಆಟಗಾರರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ
ಹಾಗೂ ಪ್ರಮುಖ ತೀರ್ಪುಗಾರರಾಗಿ ಚೀಫ್ ಅರ್ಬಿಟರ್ ವಸಂತ್ ಬಿ.ಹೆಚ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ತಿಳಿಸಿದ್ದಾರೆ.