ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ,ಟೆನಿಸ್ಬಾಲ್ ಕ್ರಿಕೆಟ್ ನ ವಿಶ್ವಕಪ್ ಖ್ಯಾತಿಯ 15 ನೇ ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್-2022 ಪಂದ್ಯಾಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರನ್ನು ಸನ್ಮಾನಿಸಲಾಯಿತು.
ಜೈ ಕರ್ನಾಟಕ ಮತ್ತು ಫ್ರೆಂಡ್ಸ್ ಬೆಂಗಳೂರು ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಕ್ಕೂ ಮುನ್ನ ಪಂದ್ಯಾಟದ ಪ್ರಮುಖ ಆಯೋಜಕರಾದ ಉದ್ಯಮಿ ಶಿವಗಂಗಾ ಶ್ರೀನಿವಾಸ್ ಮತ್ತು ಜಯಪ್ರಕಾಶ್ ಗೌಡ(ಜೆ.ಪಿ) ಇವರು ಗೌತಮ್ ಶೆಟ್ಟಿಯವರನ್ನು ಪಿಚ್ ನ ಮಧ್ಯಭಾಗದಲ್ಲಿ ಉಭಯ ತಂಡಗಳ ಆಟಗಾರರ ಸಮ್ಮುಖದಲ್ಲಿ ಗೌರವಿಸಿದರು.
ಈ ಸಂದರ್ಭ ಚಲನಚಿತ್ರ ನಿರ್ಮಾಪಕ ಉದಯ್ ಶಿವಕುಮಾರ್ ಮತ್ತು ಪುತ್ರಿ,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಕೋಟ ರಾಮಕೃಷ್ಣ ಆಚಾರ್,ಜೈ ಕರ್ನಾಟಕ ಸಚಿನ್ ಮಹಾದೇವ್,ಫ್ರೆಂಡ್ಸ್ ನ ಸಾಗರ್ ಭಂಡಾರಿ ಮತ್ತು ಉಭಯ ತಂಡಗಳ ಆಟಗಾರರು ಉಪಸ್ಥಿತರಿದ್ದರು.