14.6 C
London
Monday, September 9, 2024
Homeಹಾಕಿಹಸು ಮಾರಿ ಮಗನಿಗೆ hockey ಗೋಲ್ ಕೀಪಿಂಗ್ ಕಿಟ್ ಕೊಡಿಸಿದ್ದರು ಆ ತಂದೆ..!

ಹಸು ಮಾರಿ ಮಗನಿಗೆ hockey ಗೋಲ್ ಕೀಪಿಂಗ್ ಕಿಟ್ ಕೊಡಿಸಿದ್ದರು ಆ ತಂದೆ..!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಮಗ ಇಡೀ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿ ಬಿಟ್ಟ..!

ರಾಹುಲ್ ದ್ರಾವಿಡ್ ಅವರಂತೆ ಇವರೂ ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’.. ಇವರ ಕಡೆಗೂ ಒಮ್ಮೆ ನೋಡಿ..!

ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದ ಕ್ಷಣ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಗೋಲ್ ಕೀಪರ್ ಶ್ರೀಜೇಶ್ ಮಾತ್ರ ಗೋಲ್ ಪೋಸ್ಟ್ ಮುಂದೆ ತಲೆ ಬಾಗಿ ಕೂತಿದ್ದ.

ಅದು ನೋಡುವವರ ಕಣ್ಣಿಗೆ ಗೋಲ್ ಪೋಸ್ಟ್ ಅಷ್ಟೇ. ಆದರೆ ಶ್ರೀಜೇಶ್ ಪಾಲಿಗೆ ಕಳೆದ ಎರಡು ದಶಕಗಳಿಂದ ಅದುವೇ ಮನೆಯಾಗಿತ್ತು. ಆ ಮನೆಯಲ್ಲಿ ಮುಂದೆಂದೂ ಶ್ರೀಜೇಶ್ ಕಾಣಿಸುವುದಿಲ್ಲ. He will miss that home, but India will miss him even more.

ಕ್ರಿಕೆಟ್ ತೀವ್ರತೆಯ ದೇಶದಲ್ಲಿ ಒಬ್ಬ ನೀರಜ್ ಚೋಪ್ರಾ ಧ್ರುವ ನಕ್ಷತ್ರದಂತೆ ಎದ್ದು ಬರುತ್ತಾನೆ.. ಪಿ.ವಿ ಸಿಂಧೂ, ಮನು ಭಾಕರ್, ವಿನೇಶ್ ಫೊಗಾಟ್ ಎಂಬ ಹೆಣ್ಣು ಮಕ್ಕಳು ಇಡೀ ಸ್ತ್ರೀಕುಲಕ್ಕೆ ಸ್ಫೂರ್ತಿ, ಹೆಮ್ಮೆ, ಅಭಿಮಾನದ ಪ್ರತೀಕವಾಗಿ ನಿಲ್ಲುತ್ತಾರೆ. ಇಡೀ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಾರೆ.

ಇವರ ಮಧ್ಯೆ ನಮ್ಮ ದೇಶ ಯಾವತ್ತೂ ಮರೆಯಲೇಬಾರದ, ಕ್ರೀಡೆಯನ್ನು ಪ್ರೀತಿಸುವವರು ತಲೆಯ ಮೇಲೆ ಹೊತ್ತು ಮೆರೆಸಲೇಬೇಕಾದ ಸೈಲೆಂಟ್ ಸಂತನೊಬ್ಬನಿದ್ದಾನೆ. ಅವನೇ ಪರಟ್ಟು ರವೀಂದ್ರನ್ ಶ್ರೀಜೇಶ್.

ಕರ್ನಾಟಕದ ಹೆಮ್ಮೆ ರಾಹುಲ್ ದ್ರಾವಿಡ್ ಸಾವಿರ ಸಾವಿರ ಬೆಂಕಿಯಂತಾ ಎಸೆತಗಳಿಗೆ ಎದೆಯೊಡ್ಡಿ The Great Wall of India ಎಂದು ಕರೆಸಿಕೊಂಡವರು.

ಪಿ.ಆರ್ ಶ್ರೀಜೇಶ್ ಕೂಡ ಹಾಗೆಯೇ. ಭಾರತ ಸತತ ಒಲಿಂಪಿಕ್ಸ್’ಗಳಲ್ಲಿ 2 ಕಂಚಿನ ಪದಕಗಳನ್ನು ಗೆದ್ದಿದೆ ಎಂದರೆ ಆ ವಿಜಯಗಳ ಹಿಂದಿರುವ ನಿಜವಾದ ವಿಜಯಶಿಲ್ಪಿ ಈ ಕೇರಳ ಕುಟ್ಟಿ ಶ್ರೀಜೇಶ್.

ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತದ ಪಾಲಿಗೆ ಆತ ರಕ್ಷಾ ಕವಚವಾದ ಗೋಡೆ.. ಎದುರಾಳಿಗಳ ಪಾಲಿಗೆ ಆತ ಭೇದಿಸಲಾಗದ ಮಹಾಗೋಡೆ. ಗೋಲ್ ಪೋಸ್ಟ್’ನ ಮುಂದೆ ಶ್ರೀಜೇಶ್ ದೃಢವಾಗಿ ನಿಲ್ಲದೇ ಇದ್ದಿದ್ದರೆ ಭಾರತ ಖಂಡಿತಾ ಕಂಚಿನ ಪದಕ ಗೆಲ್ಲುತ್ತಲೇ ಇರಲಿಲ್ಲ.

ಗೋಲ್’ಕೀಪರ್’ಗಳನ್ನು ಜನ ಪ್ರೀತಿಸುವುದು ತುಂಬಾ ಅಪರೂಪ. ಅವನು ಹೆಚ್ಚಾಗಿ limelightಗೆ ಬರುವುದು ಮೈದಾನದಲ್ಲಿ ತಪ್ಪು ಮಾಡಿದಾಗ. ಇಂಥದ್ದನೆಲ್ಲಾ ಎದುರಿಸಿಯೇ ಲೆಜೆಂಡ್ ಆದವನು ಪಿ.ಆರ್ ಶ್ರೀಜೇಶ್. He is widely regarded as one of the greatest goal keepers in the history of hockey.

ಕೇರಳದ ಕಿಝಕ್ಕಂಬಳಮ್ ಎಂಬ ಹಳ್ಳಿಯ ಸಾಮಾನ್ಯ ರೈತನೊಬ್ಬನ ಮಗ ಪಿ.ಆರ್ ಶ್ರೀಜೇಶ್. ಸಣ್ಣ ಹುಡುಗನಾಗಿದ್ದಾಗ ಸ್ಪ್ರಿಂಟ್, ಲಾಂಗ್ ಜಂಪ್, ವಾಲಿಬಾಲ್ ಶ್ರೀಜೇಶ್’ನ ಆಸಕ್ತಿ. 12ನೇ ವಯಸ್ಸಲ್ಲಿ ತಿರುವನಂತಪುರದ ಜಿ.ವಿ ರಾಜಾ ಕ್ರೀಡಾ ಶಾಲೆ ಸೇರಿದ ಶ್ರೀಜೇಶ್’ಗೆ ಅಲ್ಲಿ ಹಾಕಿ ಗೋಲ್ ಕೀಪಿಂಗ್ ಮೇಲೆ ಆಸಕ್ತಿ ಬೆಳೆಯುತ್ತದೆ. ‘’ಗೋಲ್ ಕೀಪಿಂಗ್ ಕಿಟ್ ತೆಗೆದುಕೊಂಡು ಬಾ’’ ಎನ್ನುತ್ತಾರೆ ಕೋಚ್. ತಂದೆಯ ಮುಂದೆ ನಿಂತವನು ‘’ನನಗೊಂದು ಕಿಟ್ ಕೊಡಿಸು’’ ಎಂದ ಮಗನ ಆಸೆಯನ್ನು ಪೂರೈಸಲು ಮನೆಗೆ ಆಧಾರವಾಗಿದ್ದ ಹಸುವನ್ನೇ ₹10 ಸಾವಿರಕ್ಕೆ ಮಾರಿ ಬಿಡುತ್ತಾರೆ ಆ ತಂದೆ. P.R Sreejesh has made those 10 thousand rupees really worth.

The Man , The Myth , The legend PR sreejesh
– 18 years.
– 336 matches.
– 2 Olympic medals.
– 2 in Commonwealth games medals.
– 3 Asian Games medals.
The great Wall of Indian Hockey

Well done Champion. ನೀನು ನಿಜವಾದ ಲೆಜೆಂಡ್. ಈ ದೇಶ ನಿನ್ನನ್ನು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುತ್ತದೆ.

Latest stories

LEAVE A REPLY

Please enter your comment!
Please enter your name here

2 × 4 =