ಕೋಟ ರಾಮಕೃಷ್ಣ ಆಚಾರ್ಯ ಎಲ್ಲರೂ ಪ್ರೀತಿಯಿಂದ ಕರೆಯುವ ಇವರ ಹೆಸರು ಕೆ ಆರ್ ಕೆ.ಇವರ ಹುಟ್ಟೂರು ಕೋಟದಿಂದ ಆರಂಭಗೊಂಡು ಜಿಲ್ಲಾ ರಾಜ್ಯ ಮತ್ತು ರಾಷ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿನ ಟೆನ್ನಿಸ್ ಬಾಲ್ ಕ್ರಿಕೆಟ್ ಅಂಗಳದಲ್ಲಿ ಇವರ ಹೆಸರು ಚಿರಪರಿಚಿತವಾಗಿದೆ.
ವೃತ್ತಿಯಲ್ಲಿ ಆಭರಣ ತಯಾರಕರಾದ ಇವರು ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರ ಹಾಗೂ ಸಂಘಟಕರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಟೆನ್ನಿಸ್ ಬಾಲ್ ಕ್ರಿಕೆಟಿನ ನಂಟಿನೊಂದಿಗೆ ಕ್ರಿಕೆಟ್ ಅಂಗಳದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಕೆ ಆರ್ ಕೆ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡುವುದರ ಜೊತೆ ಜೋತೆಗೆ ಟೆನ್ನಿಸ್ ಬಾಲ್ ಕ್ರಿಕೆಟಿನ ಪ್ರತಿಯೊಬ್ಬ ಹಿರಿಯ ಕಿರಿಯ ಆಟಗಾರರ ಮತ್ತು ತಂಡಗಳ ಕಷ್ಟ ಸುಖವನ್ನು ಹತ್ತಿರದಿಂದ ನೋಡಿ ಎಲ್ಲರನ್ನೂ ಒಗ್ಗೂಡಿಸಿ ಆಟಗಾರರ ಮತ್ತು ತಂಡಗಳ ಹಾಗೂ ಪಂದ್ಯಾವಳಿಗಳ ಆಗು ಹೊಗುಗಳನ್ನು ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯನ್ನು ರೂಪಿಸ ಬೇಕೆನ್ನುವುದು ಇವರ ಕನಸಾಗಿತ್ತು.
ಗ್ರಾಮೀಣ ಪ್ರದೇಶ ಮತ್ತು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಗಳ ಮಾಹಿತಿಯೊಂದಿಗೆ ಪ್ರತಿಯೊಬ್ಬ ಆಟಗಾರರ ಪರಿಚಯ ಮತ್ತು ಹಿರಿಯರು ಮತ್ತು ಕಿರಿಯ ಶ್ರೇಷ್ಠಮಟ್ಟದ ಆಟಗಾರರ ಆಟದ ಮತ್ತು ದಾಖಲೆಗಳ ಸುದ್ದಿಯನ್ನು ಎಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಪ್ರಿಯರಿಗೆ ತಲುಪಿಸುವುದು ಇವರ ಗುರಿಯಾಗಿತ್ತು.
ಜೊತೆಗೆ ಹಿರಿಯರು ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಬಹುದೊಡ್ಡ ಕಾರ್ಯಕ್ಕೆ ಮುನ್ನುಡಿ ಬರೆಯಲೆ ಬೇಕು ಎನ್ನುವ ಸಂಕಲ್ಪ ತೊಟ್ಟ ಕೆ ಆರ್ ಕೆ ಕನಸಿನ ಮೂಟೆ ಹೊತ್ತು ಸುಮ್ಮನೇ ಕೂರಲಿಲ್ಲ.
ಜುಲೈ 7 ಟೆನ್ನಿಸ್ ಬಾಲ್ ಕ್ರಿಕೆಟ್ ಕಾಶಿ ಎಂದೆ ಪ್ರಸಿದ್ಧಿ ಹೊಂದಿರುವ ಕುಂದಾಪುರದ ಕಡಲ ಕಿನಾರೆಯ ಕ್ರಿಕೆಟ್ ಅಂಗಳ ಅರಿದ್ರ ಮಳೆಯ ಬಿರುಸಿಗೆ ತೆವಗೊಂಡು ಮಲಗಿದರೆ ಬ್ಯಾಟು ಬಾಲುಗಳು ನಿದ್ರಾವಸ್ಥೆಗೆ ಜಾರಿದ್ದವು ಜಿಟಿ ಜಿಟಿ ಮಳೆಯಲ್ಲೂ ತೆವಗೊಂಡ ಮೈದಾನದಲ್ಲಿ ಪುಟ್ಟ ಮಕ್ಕಳ ಕ್ರಿಕೆಟ್ ಆಟದ ಕಲರವ ಮಾತ್ರ ಮುಗಿಲು ಮುಟ್ಟಿತ್ತು ಈ ಸಂಧರ್ಭದಲ್ಲೆ ಮೈ ಕೊಡವಿದ ಕೆ ಆರ್ ಕೆ ತಮ್ಮ ಕನಸನ್ನು ನನಸಾಗಿಸುವ ಕಾರ್ಯಕ್ಕೆ ಕೈ ಹಾಕಿಯೆ ಬಿಟ್ಟರು…
ಕರಾವಳಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಅಂಗಳದಿಂದ ರಾಜ್ಯ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಅಂಗಳದ ವರೆಗೆ ಆಟಗಾರರನ್ನು ಪರಿಚಯಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೇದಿಕೆಯನ್ನು ಹುಟ್ಟು ಹಾಕಲು ಮನಸ್ಸು ಮಾಡಿದ ಕೆ ಆರ್ ಕೆ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದರು.
ಕಳೆದ ಮೂರು ವರ್ಷಗಳ ಹಿಂದೆ ಅಂದರೆ ದಿನಾಂಕ 07/07/2019 ರಂದು ಮಳೆಯ ಬಿರುಸು ತಣ್ಣಗೆ ಬಿಸುವ ಗಾಳಿಗೆ ಕೊರೆವ ಚಳಿಯಲ್ಲೆ ಜನಿಸಿದ ಕೂಸೆ *”ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್”* ಒಳ್ಳೆಯ ಉದ್ದೇಶದ ಕನಸಿಟ್ಟುಕೊಂಡು ಲೋಕಾರ್ಪಣೆಗೊಂಡ ಜಾಲತಾಣವೆ www.sportskannada.com . ಕುಂದಾಪುರದ ಬಡಗುಪೇಟೆಯಲ್ಲಿರುವ ಕಛೇರಿಯಿಂದ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ಇಂದು ಮೂರು ವರ್ಷಗಳನ್ನು ತುಂಬಿ ಯಶಸ್ಸಿನ ಹಾದಿಯಲ್ಲಿ ದಿಟ್ಟ ಹೆಜ್ಜೆಯನೀಡುತ್ತಿದೆ ಇದು ಪ್ರತಿಯೊಬ್ಬ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರನಿಗೆ ಹೆಮ್ಮೆಯ ವಿಷಯವಾಗಿದೆ .
ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರರ ಮತ್ತು ಕ್ರಿಕೆಟ್ ಪ್ರೇಮಿಗಳ ಹೆಮ್ಮೆಯ ವೇದಿಕೆಯಾಗಿರುವ ಕೆ ಆರ್ ಕೆ ಅವರ ಕನಸಿನ ಕೂಸಾದ ಸ್ಪೋರ್ಟ್ಸ್ ಕನ್ನಡ ಜಾಲತಾಣ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ .
ನಿಮ್ಮೆಲ್ಲ ಕನಸುಗಳು ನನಸಾಗಲಿ ಶುಭವಾಗಲಿ ಸಹೋದರ ರಾಮಕೃಷ್ಣ ಆಚಾರ್ಯ ( ಕೆ ಆರ್ ಕೆ )