Categories
ಭರವಸೆಯ ಬೆಳಕು

ಬನ್ನಾಡಿ ದಿ.ಪದ್ದು ಆಚಾರ್ ಸ್ಮರಣಾರ್ಥ ಉಚಿತ ನೋಟ್ಸ್ ಬುಕ್,ಸಮವಸ್ತ್ರ,ವಿಶೇಷ ಚೇತನರಿಗೆ ಸಹಾಯಧನ ವಿತರಣೆ

ಬನ್ನಾಡಿ ದಿ.ಪದ್ದು ಆಚಾರ್ ಸ್ಮರಣಾರ್ಥ ಮಕ್ಕಳಾದ
ಬಿ.ನಾರಾಯಣ ಆಚಾರ್(ONGC Rtd) ಮತ್ತು
ಶ್ರೀದೇವಿ ಜ್ಯುವೆಲ್ಲರ್ಸ್ ಕೋಟ-ಸಾಲಿಗ್ರಾಮ ಮಾಲೀಕರಾದ ಸೀತಾರಾಮ ಆಚಾರ್ ಬನ್ನಾಡಿ ಇವರಿಂದ ಪರಮಹಂಸ ಖಾ.ಹಿ.ಪ್ರಾ ಶಾಲೆಯ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ,ಲೇಖನ ಸಾಮಗ್ರಿಗಳು,ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.ಜೊತೆಗೆ ದಿ.ಪದ್ದು ಆಚಾರ್ ಸ್ಮರಣಾರ್ಥ ಆರೋಗ್ಯ ಉಪಕೇಂದ್ರ  ವಡ್ಡರ್ಸೆ ಔಷಧಿ ಮತ್ತು ವಿಶೇಷ ಚೇತನರಿಗೆ ಧನಸಹಾಯ ವಿತರಣಾ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ಬನ್ನಾಡಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಲಯನ್ಸ್ ಕ್ಲಬ್ ಕೋಟ-ಬ್ರಹ್ಮಾವರ ಅಧ್ಯಕ್ಷರಾದ L.N.ಕೆ.ಸುಧಾಕರ ಹೆಗ್ಡೆ “ದಿ.ಪದ್ದು ಆಚಾರ್ ಸ್ಮರಣಾರ್ಥ ಅವರ ಮಕ್ಕಳು ಹಲವಾರು ವರ್ಷಗಳಿಂದ ಶಾಲಾ ಮಕ್ಕಳಿಗೆ,ಸಮಾಜದ ಬಡ ಅಶಕ್ತ ಕುಟುಂಬಗಳ ಪರವಾಗಿ ನಿಸ್ವಾರ್ಥ ಸೇವಾ
ಮನೋಭಾವದಿಂದ ಶ್ರಮಿಸುತ್ತಿದ್ದು ಸಮಾಜಕ್ಕೆ ಮಾದರಿ” ಎಂದರು.
ಈ ಸಂದರ್ಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬನ್ನಾಡಿ ಪರಮಹಂಸ ಶಾಲೆಯ ಸಂಚಾಲಕರಾದ ಬಿ.ಅಜಿತ್ ಹೆಗ್ಡೆ,ಅಸಿಸ್ಟೆಂಟ್ ಗವರ್ನರ್ ವಲಯ-2 Rtn PHF ಪ್ರಭಾಕರ್ ಕುಂಭಾಶಿ,ಡಿಸ್ಟ್ರಿಕ್ಟ್ ಚೇರ್ಮನ್ Rtn PHF ಚಂದ್ರಶೇಖರ್ ಮೆಂಡನ್,ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲಾ ಯುವಘಟಕಾಧ್ಯಕ್ಷ ಕೋಟ ರಾಮಕೃಷ್ಣ ಆಚಾರ್,ಲಯನ್ಸ್ ಕ್ಲಬ್ ಕೋಟ-ಬ್ರಹ್ಮಾವರ ಕಾರ್ಯದರ್ಶಿ Ln.ವಿಜಯ ಕುಮಾರ್ ಶೆಟ್ಟಿ,ಬನ್ನಾಡಿ ಪರಮಹಂಸ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

eighteen + fourteen =