ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲದ ಡಿಪಾರ್ಟ್ ಮೆಂಟ್ ಆಫ್ ಜನರಲ್ ಸರ್ವಿಸ್, ಏರ್ ಕಂಡೀಶನ್ ಡಿಪಾರ್ಟ್ ಮೆಂಟ್ ಇವರ ನೇತೃತ್ವದಲ್ಲಿ ಸ್ಪಂದನ ಟ್ರೋಫಿ-2024, ಸೀಸನ್ 2 ಎನ್ನುವ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ಮಾಹೆ ಉದ್ಯೋಗಿಗಳಿಗೆ ಆಯೋಜಿಸಿದೆ. ಮಾರ್ಚ್ 16 ಮತ್ತು 17 ರಂದು ಮಾಹೆ ಎಂಡ್ ಪಾಯಿಂಟ್ ಗ್ರೌಂಡ್ ನಲ್ಲಿ ಈ ಟೂರ್ನಮೆಂಟ್ ನಡೆಯಲಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ಮಕ್ಕಳ ನೆರವಿಗಾಗಿ ಈ ಟೂರ್ನಮೆಂಟ್ ಆಯೋಜನೆಗೊಂಡಿದೆ.
ಮಾರ್ಚ್ 16 ರಂದು ಬೆಳಗಿನ ಜಾವ 10:00 ಗಂಟೆಗೆ ಈ ಪಂದ್ಯಾಟ ಉದ್ಘಾಟನೆ ನಡೆಯಲಿದೆ. ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ ಡಿ ವೆಂಕಟೇಶ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಈ ಟೂರ್ನಮೆಂಟ್ಗೆ ಚಾಲನೆ ನೀಡಲಿರುವರು. ಗೌರವ ಅತಿಥಿಗಳಾಗಿ ಮಾಹೆ ಮಣಿಪಾಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ. ಜಿ. ಸಿ. ಮುತ್ತಣ್ಣ, ಪ್ರೊ ವೈಸ್ ಚಾನ್ಸಲರ್ ಹೆಲ್ತ್ ಸೈನ್ಸಸ್ ನ ಡಾ. ಶರತ್ ರಾವ್ ಕೆ, ಕೆ ಎಂ ಸಿ ಮಣಿಪಾಲದ ಡೀನ್ ಡಾಕ್ಟರ್ ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್,ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲದ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಅವಿನಾಶ್ ಶೆಟ್ಟಿ,ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ (PHO) ವಿಭಾಗದ ಮುಖ್ಯಸ್ಥರು ಡಾ. ವಾಸುದೇವ್ ಭಟ್, ಉಜ್ವಲ್ ಕನ್ಸ್ಟ್ರಕ್ಷನ್ಸ್ ಮತ್ತು ಡೆವಲಪ್ ಮೆಂಟ್ ಮಣಿಪಾಲದ ಶ್ರೀ ಅಜಯ್ ಪಿ ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ.
17 ಮಾರ್ಚ್ 2024 ರಂದು ಟೂರ್ನಿಯು ಮುಕ್ತಾಯಗೊಂಡು ಆ ಬಳಿಕ ಸುಮಾರು ಐದೂವರೆ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಸ್ಟಾರ್ ವರ್ಟೆಕ್ಸ್ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಟೂರ್ನಮೆಂಟ್ ನ ಲೈವ್ ಸ್ಟ್ರೀಮಿಂಗ್ ಇರಲಿದೆ.
`Donate to Serve a Life’ಎಂಬ ಟ್ಯಾಗ್ ಲೈನ್ ನೊಂದಿಗೆ ಮಣಿಪಾಲ್ ಆಕ್ಸೆಸ್ ಲೈಫ್ ಇದು ಕಸ್ತೂರ್ಬಾ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ಕ್ಯಾನ್ಸರ್ ಕೇಂದ್ರಕ್ಕೆ ಬರುವ ಕುಟುಂಬಗಳಿಗೆ ಬಹು-ಶಿಸ್ತಿನ ಬೆಂಬಲ ಆರೈಕೆಯನ್ನು ಒದಗಿಸುತ್ತದೆ. ‘.ಈ ಟೂರ್ನಿಯಿಂದ ಸಂಗ್ರಹಿಸಿದ ಹಣವನ್ನು ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ಉಪಯೋಗಿಸಲಾಗುವುದು. ಮಕ್ಕಳ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ ಈ ಕ್ರಿಕೆಟ್ ಪಂದ್ಯಾವಳಿಯು ಬಹಳಷ್ಟು ಅರ್ಥಪೂರ್ಣವಾಗಿದೆ.