Categories
ಸಂತಾಪ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಿರಿಯ ಗ್ರೌಂಡ್ಸ್ ಮನ್ ರಾಮಣ್ಣ ಇನ್ನಿಲ್ಲ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌಂಡ್ಸ್ ಮನ್ ರಾಮಣ್ಣ (75) ಇಂದು ವಿಧಿವಶರಾಗಿದ್ದಾರೆ. ನಿಷ್ಠಾವಂತ ಕೆಲಸಗಾರರಾಗಿ ಗುರುತಿಸಿಕೊಂಡಿದ್ದ ರಾಮಣ್ಣನವರ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಂತಾಪ ಸೂಚಿಸಿದೆ.

ತಮ್ಮ ಇಡೀ ಜೀವನವನ್ನು ಕ್ರಿಕೆಟ್ ಮೈದಾನದಲ್ಲಿ ಕಳೆದು  ಕ್ರಿಕೆಟ್‌ಗಾಗಿ ಮುಡಿಪಾಗಿಟ್ಟಿದ್ದ ರಾಮಣ್ಣ, 53 ವರ್ಷಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌಂಡ್ಸ್‌ಮನ್ ಆಗಿ ಸೇವೆ ಸಲ್ಲಿಸಿದ್ದರು. ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ರಾಮಣ್ಣ, ಹಾಲಿ ಹಾಗೂ ಮಾಜಿ ಕ್ರಿಕೆಟಿಗರ ಜೊತೆ ಉತಮ ಬಾಂಧವ್ಯ ಹೊಂದಿದ್ದರು.

ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ…💐💐💐🙏
Categories
ಕ್ರಿಕೆಟ್

4ನೇ ಟೆಸ್ಟ್: ವೃತ್ತಿ ಜೀವನದ 75ನೇ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 28 ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ , ಹಲವು ದಾಖಲೆಗಳನ್ನು ದಾಖಲಿಸಿದ ರನ್ ಮೆಷಿನ್

ಅಹ್ಮದಾಬಾದ್ ನಲ್ಲಿ ನೆಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ  ಭಾರತದ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಲೋಕದ ದಿಗ್ಗಜರ ಹಲವು ದಾಖಲೆಗಳನ್ನು ಮುರಿದು ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ.
 ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಒಂದು ವರ್ಷ ಎರಡು ತಿಂಗಳ ಸುಧೀರ್ಘ ಅವಧಿಯ ನಂತರ 243 ಎಸೆತಗಳಲ್ಲಿ ಶತಕ ಸಿಡಿಸಿದರು.ಇದು ಕೊಯ್ಲಿಯ ಟೆಸ್ಟ್ ಪಂದ್ಯದಲ್ಲಿನ 28ನೇ ಶತಕವಾಗಿದೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್  ಕೊಯ್ಲಿ ತಮ್ಮ ಕ್ರಿಕೆಟ್ ವೃತ್ತಿ ಬದುಕಿನ 75ನೇ ಶತಕ ಸಿಡಿಸಿದಂತಾಗಿದೆ.
ಸರಿಸುಮಾರು ನಲವತ್ತಕ್ಕೂ ಹೆಚ್ಚು ಇನಿಂಗ್ಸ್ ಗಳಿಂದ ಶತಕ ಸಿಡಿಸಲಾಗದೆ ಪರದಾಡುತ್ತಿದ್ದ ಕೊಯ್ಲಿ ಈ ಟೆಸ್ಟ್ ನ ಮೂಲಕ  ಶತಕದ ಬರದಿಂದ ಹೊರ ಬಂದಂತಾಗಿದೆ.
  ವಿರಾಟ್ ಕೊಯ್ಲಿ ಆಸ್ಟ್ರೇಲಿಯಾ ವಿರುದ್ಧ  ಸಿಡಿಸಿದ 16ನೇ ಶತಕವಾಗಿದೆ. ಕೊಹ್ಲಿ ಈ ಶತಕದ ಮೂಲಕ ಹಲವು ದಾಖಲೆಗಳನ್ನು  ದಾಖಲಿಸಿದಂತಾಗಿದೆ, ಎದುರಾಳಿ ತಂಡವೊಂದರ ವಿರುದ್ಧ ಅತೀ ಹಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಇದೀಗ 3 ಮತ್ತು ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಈ ಹಿಂದೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದೇ ಆಸ್ಟ್ರೇಲಿಯಾ ವಿರುದ್ಧ 20 ಶತಕಗಳನ್ನು ಸಿಡಿಸಿದ್ದರೆ, ಆಸಿಸ್ ಕ್ರಿಕೆಟ್ ದಂತಕಥೆ ಬ್ರಾಡ್ ಮನ್ ಇಂಗ್ಲೆಂಡ್ ವಿರುದ್ಧ 19 ಶತಕಗಳನ್ನು ಸಿಡಿಸಿ ಪಟ್ಟಿಯ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಸಚಿನ್ ತೆಂಡೂಲ್ಕರ್ ಅವರು ಶ್ರೀಲಂಕಾ ವಿರುದ್ಧ 17 ಶತಕ ಸಿಡಿಸಿದ್ದು ಇದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಂತೆಯೇ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 16 ಶತಕಗಳನ್ನು ಸಿಡಿಸಿದ್ದು, ಶ್ರೀಲಂಕಾ ವಿರುದ್ಧವೂ ಕೊಹ್ಲಿ 16 ಶತಕ ಸಿಡಿಸಿರುವ ದಾಖಲೆ ಮಾಡುವುದರೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇನ್ನೂ ಇಂದಿನ ಪಂದ್ಯದಲ್ಲಿ ಕೊಹ್ಲಿ ತಮ್ಮ ನಿಧಾನಗತಿಯ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದು, ಇಂದಿನ ಪಂದ್ಯದಲ್ಲಿ ಕೊಹ್ಲಿ 243 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಕೊಹ್ಲಿ ವೃತ್ತಿ ಜೀವನದ 2ನೇ ನಿಧಾನಗತಿಯ ಶತಕವಾಗಿದೆ. ಇದಕ್ಕೂ ಮೊದಲು ಕೊಹ್ಲಿ 2012ರಲ್ಲಿ ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ 289 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಕೊಹ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ನಿಧಾನಗತಿಯ ಶತಕವಾಗಿದೆ. ಅಂತೆಯೇ 2018ರಲ್ಲಿ ಪರ್ತ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 214 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಕೊಹ್ಲಿಯ ಮೂರನೇ ನಿಧಾನಗತಿಯ ಶತಕವಾಗಿದೆ.
 ಅಂತೆಯೇ ಕೊಹ್ಲಿ ತಮ್ಮ 12ನೇ ಶತಕಕ್ಕಾಗಿ 11 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಇದಾದ ಬಳಿಕ ಅತ್ಯಂತ ಸುದೀರ್ಘ ಇನ್ನಿಂಗ್ಸ್ ಗಳ ಅಂತರದಲ್ಲಿ ಕೊಹ್ಲಿ ಶತಕ ಸಿಡಿಸಿ ಮತ್ತೆ ತಮ್ಮ ಎಂದಿನ ಶೈಲಿಗೆ ಮರಳಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಕೊಯ್ಲಿ 364 ಎಸೆತಗಳಲ್ಲಿ 186 ರನ್
ಸಿಡಿಸಿ ಔಟ್ ಆಗಿದ್ದಾರೆ.
  ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್ ಮಾಡುವುದೆಂದರೆ ಒಂದು ರೀತಿ ಅಚ್ಚುಮೆಚ್ಚು ಎನ್ನುವುದನ್ನು ಈಗಾಗಲೇ ಹಲವು ಬಾರಿ ಸಾಬೀತು ಮಾಡಿ ತೋರಿಸಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಎದುರು ಮೂರು ಮಾದರಿಯ ಕ್ರಿಕೆಟ್‌ನಲ್ಲಿ 89 ಪಂದ್ಯಗಳ 104 ಇನಿಂಗ್ಸ್‌ಗಳಿಂದ  50.84ರ ಬ್ಯಾಟಿಂಗ್ ಸರಾಸರಿಯಲ್ಲಿ 4,729 ರನ್ ಬಾರಿಸಿದ್ದಾರೆ. ಇದರಲ್ಲಿ 15 ಶತಕ ಹಾಗೂ 24 ಅರ್ಧಶತಕಗಳು ಸೇರಿವೆ.
ಇನ್ನೊಂದೆಡೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯನ್ ಲಾರಾ, ಆಸ್ಟ್ರೇಲಿಯಾ ಎದುರು 82 ಪಂದ್ಯಗಳ 108 ಇನಿಂಗ್ಸ್‌ಗಳನ್ನಾಡಿ 4,714 ರನ್‌ ಬಾರಿಸಿದ್ದರು. ಇದರಲ್ಲಿ 12 ಶತಕ ಹಾಗೂ 26 ಅರ್ಧಶತಕಗಳು ಸೇರಿವೆ. ಇದೀಗ ವಿರಾಟ್ ಕೊಹ್ಲಿ, ಲಾರಾ ಅವರನ್ನು ಹಿಂದಿಕ್ಕಿ ಆಸೀಸ್‌ ಎದುರು ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಇನ್ನು ಆಸ್ಟ್ರೇಲಿಯಾ ಎದುರು ಗರಿಷ್ಠ ರನ್‌ ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಸಚಿನ್ ತೆಂಡುಲ್ಕರ್, ಆಸ್ಟ್ರೇಲಿಯಾ ಎದುರು 110 ಪಂದ್ಯಗಳ 144 ಇನಿಂಗ್ಸ್‌ಗಳಿಂದ 49.68ರ ಬ್ಯಾಟಿಂಗ್ ಸರಾಸರಿಯಲ್ಲಿ 6,707 ರನ್‌ ಬಾರಿಸಿದ್ದಾರೆ. ಇದರಲ್ಲಿ 20 ಶತಕ ಹಾಗೂ 31 ಅರ್ಧಶತಕಗಳು ಸೇರಿವೆ. ವಿರಾಟ್‌ ತವ​ರಿ​ನ ಟೆಸ್ಟ್‌​ನಲ್ಲಿ 4000 ರನ್‌ ಪೂರ್ತಿ​ಗೊ​ಳಿ​ಸಿದ ಭಾರ​ತದ 5ನೇ ಬ್ಯಾಟರ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್ ಹಾಗೂ ವಿರೇಂದ್ರ ಸೆಹ್ವಾಗ್, ತವರಿನಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 4000+ ರನ್ ಬಾರಿಸಿದ್ದಾರೆ.
ವಿರಾಟ್ ಕೊಹ್ಲ
Categories
Uncategorized

ಕ್ಯಾಪ್ಟನ್ ಕೂಲ್ ಧೋನಿ ಬಳಿಕ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ: ಹಾರ್ದಿಕ್ ಪಾಂಡ್ಯ

ಬಲಿಷ್ಠ ನ್ಯೂಜಿಲೆಂಡ್ ಎದುರು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿದ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ
ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ. ತಂಡದ ಗೆಲುವಿನ ನಂತರ ಮಾಧ್ಯಮದ ಎದುರು
ಧೋನಿ ಬಳಿಕ ಮ್ಯಾಚ್ ಫಿನಿಶಿಂಗ್ ಜವಾಬ್ದಾರಿ ನನ್ನ ಮೇಲಿದೆ ಮತ್ತು ಜವಾಬ್ದಾರಿ ಹೆಚ್ಚಾಗಿದೆ ಎಂದ ಪಾಂಡ್ಯ
ಅಹಮದಾಬಾದ್‌(ಫೆ.02): ಬಲಿಷ್ಠ ನ್ಯೂಜಿಲೆಂಡ್ ಎದುರಿನ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ, 168 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಈ ಪಂದ್ಯದ ಗೆಲುವಿನೊಂದಿಗೆ
ಹತ್ತಾರು ದಾಖಲೆಯೊಂದಿಗೆ 2-1 ಅಂತರದಲ್ಲಿ ಟಿ20 ಸರಣಿಯನ್ನು ತನ್ನ ವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ಎದುರಿನ ಈ ಬಾರಿ ಅಂತರದ ಗೆಲುವು ಟಿ20 ಕ್ರಿಕೆಟ್‌ ಮಾದರಿಯಲ್ಲಿ ಟೀಂ ಇಂಡಿಯಾ ಜಯಿಸಿದ ಅತಿ ದೊಡ್ಡ ಅಂತರದ ಗೆಲುವು ಎನಿಸಿಕೊಂಡಿತು.
ಇದರ ಜೋತೆಗೆ ತವರು ನೆಲದಲ್ಲಿ ಭಾರತೀಯರು ಜಯಿಸಿದ ಸತತ 13ನೇಯ ಟಿ20 ಸರಣಿಯ ಗೆಲುವು ಎನಿಸಿಕೊಂಡಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ದಾಂಡಿಗನಾಗಿ ಅಂಕಣಕ್ಕೆ ಇಳಿದ ಶುಭ್‌ಮನ್‌ ಗಿಲ್‌ ಕೇವಲ 64 ಎಸೆತಗಳಲ್ಲಿ ಅಜೇಯ 126 ರನ್ ಬಾರಿಸುವುದರ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಭಾರತ ಕೇವಲ 4 ವಿಕೆಟ್‌ ಕಳೆದುಕೊಂಡು 234 ರನ್‌ ಬಾರಿಸಿತು.
ಭಾರತೀಯರು ಕಲೆಹಾಕಿದ ದೊಡ್ಡ ಮೊತ್ತ ನೋಡಿಯೇ ದಿಕ್ಕೆಟ್ಟು ಹೋಗಿದ್ದ ಕಿವೀಸ್‌ ತನ್ನ ಬ್ಯಾಟಿಂಗ್ ಸರಣಿಯನ್ನು ಆರಂಭಿಸಿತೆ ಹೊರತು ಯಾವ ಕ್ಷಣದಲ್ಲೂ ಪ್ರತಿರೋಧ ತೋರಲಿಲ್ಲ.ಭಾರತೀಯರ ಬೌಲಿಂಗ್ ಎದುರು ಹೆಣಗಾಡಿದ ಕಿವೀಸ್ 12.1 ಓವರಲ್ಲಿ ಕೇವಲ 66ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬಾರಿ ಅಂತರದಿಂದ ಸೋಲಿಗೆ ಶರಣಾಯಿತು. ಡ್ಯಾರಿಲ್‌ ಮಿಚೆಲ್‌(35), ಸ್ಯಾಂಟ್ನರ್‌(13) ಈ ಇಬ್ಬರು ಆಟಗಾರರನ್ನು ಬಿಟ್ಟರೆ ಉಳಿದವರೆಲ್ಲ ಬಂದಷ್ಟೆ ವೇಗವಾಗಿ ಪೆವಿಲಿಯನ್ ಗೆ ಮರಳಿದ್ದರು. ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಬೌಲಿಂಗ್ ಮಾಡಿ ಕೇವಲ 16 ರನ್ ಗಳಿಗೆ ನ್ಯೂಜಿಲೆಂಡ್ ನ 4 ವಿಕೆಟ್ ಕಬಳಿಸಿದರೆ. ಭಾರತೀಯ ಯುವ ವೇಗಿ ಉಮ್ರಾನ್‌ ಹಾಗೂ ಆರ್ಶದೀಪ್‌, ಶಿವಂ ಮಾವಿ ತಲಾ 2 ವಿಕೆಟ್‌ ಪಡೆದು ನ್ಯೂಜಿಲೆಂಡ್ ತಂಡವನ್ನು ಕಡಿಮೆ ರನ್ ಗಳಿಗೆ ಕಟ್ಟಿಹಾಕಿ ಭಾರತ ತಂಡಕ್ಕೆ ಬಾರಿ ಅಂತರದ ಗೆಲುವು ತಂದು ಕೊಟ್ಟರು.
ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಷ್ಟೇ ಅಲ್ಲದೇ, ಬ್ಯಾಟಿಂಗ್‌ನಲ್ಲೂ ಕೇವಲ 17 ಎಸೆತಗಳನ್ನು ಎದುರಿಸಿ 30 ರನ್‌ಗಳ ಮಹತ್ವದ ಕಾಣಿಕೆ ನೀಡಿದರು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ, ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.ಅಂತೆಯೇ ಶುಭಮನ್ ಗಿಲ್ ಪಂದ್ಯದ ಶ್ರೇಷ್ಠ ಆಟಗಾರನಾಗಿ ಪ್ರಶಸ್ತಿ ಮುಡಿಗೆರಿಸಿ ಕೊಂಡರು
ಕಳೆದ ವರ್ಷದ ಗಾಯದ ಸಮಸ್ಯೆಯಿಂದ ಕೇಲವು ಪಂದ್ಯಗಳಿಂದ ದೂರ ಉಳಿದಿದ್ದ ಪಾಂಡ್ಯ ನಂತರ ಚೇತರಿಸಿಕೊಂಡು ತಂಡಕೂಡಿಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ತಿರುಗಿ ನೋಡಲಿಲ್ಲ ತನ್ನ ಬ್ಯಾಟಿಂಗ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿರುವ  ಪಾಂಡ್ಯ ದೊಡ್ಡ ಹೊಡೆತಕ್ಕೆ ಕೈ ಹಾಕುವುದಕ್ಕಿಂತ ಹೆಚ್ಚಾಗಿ ಸ್ಟ್ರೈಕ್ ರೊಟೇಟ್ ಮಾಡುವ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಸ್ಪೋಟಕ ಬ್ಯಾಟಿಂಗ್‌ನಿಂದಲೇ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ, ಇದೀಗ ತಮ್ಮ ಆಟದ ಶೈಲಿಯನ್ನು ಕೊಂಚ ಬದಲಿಸಿಕೊಂಡು ತಾಳ್ಮೆಯಿಂದ ಪ್ರತಿ ಬಾಲನ್ನು ಎದುರಿಸಿ ತಕ್ಕ ಉತ್ತರ ನೀಡುತ್ತಿದ್ದಾರೆ.ಇದನ್ನು ಸ್ವತಹ ಪಾಂಡ್ಯನೆ ಒಪ್ಪಿಕೊಂಡಿದ್ದಾರೆ.
ನ್ಯೂಜಿಲೆಂಡ್ ಎದುರಿನ ಮೂರನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ” ನಾನು ಯಾವಾಗಲೂ ಸಿಕ್ಸರ್ ಬಾರಿಸುವುದನ್ನು ಎಂಜಾಯ್ ಮಾಡುತ್ತಿದ್ದೆ, ಯಾಕೆಂದರೇ ನಾನು ಬೆಳೆದುಬಂದಿದ್ದೇ ಹಾಗೆ. ಆದರೆ ನಾನು ಜತೆಯಾಟದ ಮೇಲೆ ಹೆಚ್ಚು ನಂಬಿಕೆ ಇಡುತ್ತೇನೆ. ನಾನು ನನ್ನ ಸಹ ಆಟಗಾರನಿಗೆ ಹಾಗೂ ತಂಡಕ್ಕೆ ನಾನಿದ್ದೇನೆ ಎನ್ನುವ ಭರವಸೆ ನೀಡುತ್ತೇನೆ ಹಾಗೂ ಕ್ರೀಸ್‌ನಲ್ಲಿ ತಾಳ್ಮೆಯಿಂದಿರಲು ಬಯಸುತ್ತೇನೆ. ನಾನು ಇವರೆಲ್ಲರಿಗಿಂತ ಹೆಚ್ಚಿನ ಪಂದ್ಯಗಳನ್ನಾಡಿದ್ದೇನೆ. ನಾನು ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಅರಿತುಕೊಂಡಿದ್ದೇನೆ” ಎಂದು ಹೇಳಿದ್ದಾರೆ.
ಈ ಕಾರಣಕ್ಕಾಗಿಯೇ ನನ್ನ ಸ್ಟ್ರೈಕ್‌ರೇಟ್ ಕಡಿಮೆಯಾಗಬಹುದು. ನನಗೆ ಸಿಕ್ಕಿರುವ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗಲು ಬಯಸುತ್ತೇನೆ. ನಾನು ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಯಾಕೆಂದರೆ, ನಾನು ಬೇರೆಯವರು ಈ ಕಷ್ಟಕರ ಪಾತ್ರವನ್ನು ನಿಭಾಯಿಸಲಿ ಎಂದು ಬಯಸುವುದಿಲ್ಲ. ಎದುರಾಳಿಗಳು ಒತ್ತಡದಲ್ಲಿದ್ದಾರೆ ಎಂದರೆ ನಾವು ಅವರನ್ನು ಬೆನ್ನತ್ತಬಹುದು. ನಾನೇ ನೇತೃತ್ವ ತೆಗೆದುಕೊಂಡು ಮುಂದುವರೆಯುತ್ತೇನೆ. ಹೊಸ ಚೆಂಡಿನೊಂದಿಗೆ ದಾಳಿ ನಡೆಸುವ ಕೌಶಲ್ಯದ ಕಡೆಗೂ ಗಮನ ಕೊಡುತ್ತಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ನಾನು ಮಹೇಂದ್ರ ಸಿಂಗ್ ಧೋನಿ ಅವರಂತೆಯೇ, ಕೆಳಕ್ರಮಾಂಕದಲ್ಲಿ ಆಡುವ ಬಗ್ಗೆ ಹೆಚ್ಚು ಆಲೋಚಿಸಲು ಹೋಗುವುದಿಲ್ಲ. ನಾನು ಆರಂಭದಲ್ಲಿ ಚೆಂಡನ್ನು ಮೂಲೆ ಮೂಲೆಗೆ ಸಿಕ್ಸರ್‌ಗಟ್ಟುತ್ತಿದ್ದೆ. ಆದರೆ ಧೋನಿ ನಿವೃತ್ತಿಯಾದ ಬಳಿಕ, ದಿಢೀರ್ ಎನ್ನುವಂತೆ ಆ ಜವಾಬ್ದಾರಿ ಈಗ ನನ್ನ ಹೆಗಲೇರಿದೆ. ಹೀಗಾಗಿ ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ತಂಡಕ್ಕೆ ಒಳ್ಳೆಯದಾಗುತ್ತದೇ ಎಂದರೇ ನಾನು ಮಂದ ಗತಿಯಲ್ಲಿ ಬ್ಯಾಟಿಂಗ್ ಮಾಡುವ ಬಗ್ಗೆ ಆಲೋಚಿಸುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.ಅದೇನೇ ಇರಲಿ ದೋನಿ ನಂತರದಲ್ಲಿ  ಭಾರತ ತಂಡಕ್ಕೆ ಉತ್ತಮ ನಾಯಕನೊಬ್ಬ ಸಿಕ್ಕಿರುವುದು ಭಾರತೀಯರು ಹೆಮ್ಮೆ ಪಡುವಂತಾಗಿದೆ.
Categories
ಕ್ರಿಕೆಟ್

ಮಗಳ ಕ್ರಿಕೆಟ್​​​ ಬದುಕಿಗಾಗಿ ತನ್ನ ಕೆಲಸವನ್ನು ತ್ಯಜಿಸಿ ಜಮೀನು ಮಾರಿದ ತಂದೆ; ವಿಶ್ವಕಪ್​​ ಗೆದ್ದು ಅಪ್ಪನಿಗೆ ಉಡುಗೊರೆ ಕೊಟ್ಟ ಯುವ ಆಟಗಾರ್ತಿ ತ್ರಿಷಾ ರೆಡ್ಡಿ

ಈ ಬಾರಿ 19 ವರ್ಷದೊಳಗಿನವರ ವಿಶ್ವಕಪ್​ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಬಿಸಿಸಿಐ 5 ಕೋಟಿ ರೂಪಾಯಿಯ ಭಾರಿ ಬಹುಮಾನವನ್ನು ಘೋಷಣೆ ಮಾಡಿ ಮಹಿಳಾ ಕ್ರಿಕೆಟ್ ಗೆ ಮತ್ತಷ್ಟು ಸ್ಫೂರ್ತಿ ತುಂಬಿದೆ.
ಈ ವಿಶ್ವಕಪ್ ನ ಎಲ್ಲಾ ಪಂದ್ಯಗಳಲ್ಲೂ  ಟೀಂ ಇಂಡಿಯಾ ಪರ ಅಲ್ ರೌಂಡರ್ ಆಟದ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ತ್ರಿಷಾ ಹೆಸರು ಕೂಡ ವಿಶ್ವ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ
ಮೊದಲ ಆವೃತ್ತಿಯ ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಂತಿಮ ಫೈನಲ್‌ ಪಂದ್ಯದಲ್ಲಿ ಕಪ್ ಗಾಗಿ ಕಾದಾಡಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶ್ವದಾದ್ಯಂತ ಟೀಂ ಇಂಡಿಯಾ ಆಟಗಾರ್ತಿಯರ ಸಾಧನೆಗೆ ಪ್ರಶಂಸೆಗಳ ಸುರಿಮಳೆಯೆ ಹರಿದುಬರುತ್ತಿದೆ. ಈ ಬಾರಿಯ ವಿಶ್ವಕಪ್  ಗೆಲ್ಲುವುದರ ಹಿಂದೆ ಟೀಂ ಇಂಡಿಯಾ ಆಟಗಾರ್ತಿಯರ ಪರಿಶ್ರಮ ಮೆಚ್ಚುವಂತದ್ದು.
ಕ್ರಿಕೆಟ್​ ಮೇಲಿನ ಪ್ರೀತಿ, ಆಟಗಾರರಿಗೆ ಸಿಕ್ಕ ಬೆಂಬಲ ಸೇರಿದಂತೆ ಹಲವು ಅಂಶಗಳ ಬಗ್ಗೆ ಗೌರವದ ಮಾತುಗಳು ಕೇಳಿಬರುತ್ತಿವೆ.
ವಿಶ್ವಕಪ್​ ಗೆದ್ದ ತಂಡಕ್ಕೆ ಬಿಸಿಸಿಐ ಭಾರೀ ಬಹುಮಾನವನ್ನು ಘೋಷಣೆ ಮಾಡಿದೆ. ಈ ನಡುವೆ ಟೀಂ ಇಂಡಿಯಾದಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ತ್ರಿಷಾ ಹೆಸರು ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಹೌದು, ಅಂಡರ್​19  ವಿಶ್ವಕಪ್​ನಲ್ಲಿ ಭಾರತದ ಟಾಪ್​ ಅಲ್ ರೌಂಡರ್ ಆಗಿ  ಹೊರ ಹೊಮ್ಮಿರುವ ತ್ರಿಷಾ, 17 ವರ್ಷಕ್ಕೆ ತಮ್ಮ ಸಾಮರ್ಥ್ಯವೇನು ಅಂತ ಸಾಬೀತು ಪಡಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 172 ರನ್​ ಗಳಿಸಿ ತ್ರಿಷಾ, ಒಂದು ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದರು. ಅಲ್ಲದೇ ಫೈನಲ್​ ಪಂದ್ಯದಲ್ಲಿ ತೀವ್ರ ಒತ್ತಡದ ನಡುವೆಯೂ 29 ಬಾಲುಗಳಲ್ಲಿ 24 ರನ್ ಗಳಿಸಿ ಉತ್ತಮ ಪ್ರದರ್ಶನ ಮೂಲಕ ಭಾರತ ತಂಡ ವಿಶ್ವಕಪ್ ಗೆಲ್ಲಲು ಪ್ರಮುಖಪಾತ್ರ ವಹಿಸಿದ್ದಾಳೆ ತ್ರೀಷಾ. ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದಾಳೆ ಪ್ರತಿ ಪಂದ್ಯದಲ್ಲೂ ಪಿಚ್​​ಅನ್ನು ಉತ್ತಮವಾಗಿ ಆರ್ಥೈಸಿಕೊಂಡು, ತಂಡದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್​ ಬೀಸಿ ತಂಡದ ಗೆಲುವಿಗೆ ಕಾಣಿಕೆ ನೀಡುವಲ್ಲಿ ಯಶಸ್ವಿಯಾಗಿರುವ ತ್ರೀಷಾ ಭಾರತ ಮಹಿಳಾ ತಂಡದ ಶ್ರೇಷ್ಠ ಆಟಗಾರ್ತಿ ಆಗುವುದರಲ್ಲಿ ಯಾವು ಅನುಮಾನವಿಲ್ಲ.
ವಿಶೇಷ ಎಂದರೆ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಇಂಗ್ಲೆಂಡ್ ಕ್ಯಾಪ್ಟನ್​ರನ್ನು ಅತ್ಯುತ್ತಮ ಕ್ಯಾಚ್​ ಹಿಡಿಯುವ ಮೂಲಕ ಫೈನಲ್​ ಪಂದ್ಯದಲ್ಲಿ ಔಟ್​ ಮಾಡಿದ್ದ ತ್ರೀಷಾ ಈ ಮೂಲಕ ಪಂದ್ಯಕ್ಕೆ ತಿರುವು ನೀಡಿದ್ದರು.
*ತ್ರಿಷಾ ಹಿನ್ನಲೆ…*
 ತೆಲಂಗಾಣದ ಭದ್ರಾಚಲಂ ಜಿಲ್ಲೆಯ ರಾಮಿರೆಡ್ಡಿಯ ಪುತ್ರಿಯಾಗಿರುವ ತ್ರಿಷಾ ಹೆಚ್ಚು ಎತ್ತರದವಳಲ್ಲ ಈ ಕಾರಣದಿಂದ ಮಗಳು ಹಾಕಿ ಮತ್ತು ಟೆನ್ನಿಸ್ ಆಡಲು ಅವಳ ಬೆಳವಣಿಗೆ ಸೂಕ್ತವಲ್ಲ ಎಂದು ತೀರ್ಮಾನಿಸಿದ ತಂದೆ ತ್ರೀಷಾ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಮತ್ತು ಬಾಲ್ ನೀಡಿ ಪ್ರೋತ್ಸಹಿಸಿದರು. ಮಗಳ ಪ್ರತಿ ಕ್ಷಣವು ಕ್ರಿಕೆಟ್ ಗಾಗಿ ಮಿಸಲಿಟ್ಟು ಆಕೆಯ ಕ್ರಿಕೆಟ್ ಕಲಿಕೆಗೆ ಹಗಲಿರುಳು ಶ್ರಮಿಸಿದರು. ಚಿಕ್ಕಂದಿನಿಂದಲೂ ತಂದೆಯ ಮನೆಯವರ ಪ್ರೋತ್ಸಾಹ ಸಿಕ್ಕ ಹುಡುಗಿ ತ್ರೀಷಾ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಕಾರಣವಾಗಿದೆ. ತನ್ನ ಎಂಟನೇ ವಯಸ್ಸಿಗೆ ಜಿಲ್ಲಾ ಮಟ್ಟದ ಕ್ರಿಕೆಟ್​ ಟೂರ್ನಿಯಲ್ಲಿ ತ್ರಿಷಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಳು.
ಮಗಳ ಕ್ರಿಕೆಟ್ ಮೇಲಿನ ಪ್ರೀತಿ ಕಂಡ ತಂದೆ ರಾಮಿರೆಡ್ಡಿ ಕೂಡ ಆಕೆಯ ಕನಸಿಗೆ ಪ್ರೋತ್ಸಾಹ ನೀಡಿದ್ದರು. ಮಗಳ ಕ್ರಿಕೆಟ್​ ವೃತ್ತಿ ಜೀವನಕ್ಕಾಗಿ ಇದ್ದ ಜಮೀನು, ಜಿಮ್​ ಸೆಂಟರ್ ಮಾರಾಟ ಮಾಡಿ ಹೈದರಾಬಾದ್​ಗೆ ವಲಸೆಹೊಗಿದ್ದರು. ಅಷ್ಟೇ ಅಲ್ಲದೆ ಮಗಳ ಕ್ರಿಕೆಟ್​​ ಉತ್ತಮವಾಗಲು ತಮ್ಮ ಕೆಲಸವನ್ನು ಬಿಟ್ಟು ಸಂಪೂರ್ಣ ತಮ್ಮ ಸಮಯವನ್ನು ಆಕೆಯ ಕ್ರಿಕೆಟ್ ಕಲಿಕೆಗಾಗಿ ಮುಡಿಪಾಗಿಟ್ಟಿದ್ದರು.
ತಂದೆ ಆಸೆಯಂತೆ ತ್ರಿಷಾ ಕೂಡ ಇಂದು ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಟೀಂ ಇಂಡಿಯಾ ಕಪ್​ ಗೆಲ್ಲುತ್ತಿದ್ದಂತೆ ಮನೆಯಲ್ಲಿ ಕೂತು ಪಂದ್ಯ ವೀಕ್ಷಣೆ ಮಾಡುತ್ತಿದ್ದ ರಾಮಿರೆಡ್ಡಿ ಕೂಡ ಸಾಕಷ್ಟು ಸಂತೋಷ ಪಟ್ಟು ತನ್ನವರ ಬಳಿ ಖುಷಿ ಹಂಚಿಕೊಂಡಿದ್ದಾರೆ.
ಭಾರತದ ತಂಡ ಕಪ್ ಗೆಲ್ಲುತ್ತಿದ್ದಂತೆ ಮಾಧ್ಯಮದೊಂದಿಗೆ ಖುಷಿ ಹಂಚಿಕೊಂಡಿರುವ ತ್ರಿಷಾ, ಗೆಲುವಿನ ಕ್ಷಣಗಳು ಖುಷಿಯನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಗಾಳಿಯಲ್ಲಿ ತೆಲಿದಂತಹ ಅನುಭವ. ಟೂರ್ನಿಯಲ್ಲಿ ನನಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ  ಹೇಳಿದ್ದಾರೆ.
ಅಲ್ಲದೇ, ಅನುಭವಿ ಆಟಗಾರ್ತಿಯರಾದ ಕ್ಯಾಪ್ಟನ್ ಶಫಾಲಿ ವರ್ಮಾ, ರಿಚಾ ಘೋಷ್ ರಂತಹ ಆಟಗಾರರು ತಂಡದಲ್ಲಿದ್ದ ಕಾರಣ ಹೆಚ್ಚಿನ ಒತ್ತಡ ನಮಗಿರಲಿಲ್ಲ. ಟೂರ್ನಿಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಆಡಿದ್ದೇವು. ಫೈನಲ್ ಪಂದ್ಯದಲ್ಲಿ ಔಟ್​ ಆಗದೆ ಅಂತಿಮ ಎಸೆತದವರೆಗೂ ಆಡಬೇಕಿತ್ತು. ಕಪ್ ಗೆದ್ದಿರುವ ನನ್ನ ಜೀವನ ಅತ್ಯಂತ ಸಂತಸ ಕ್ಷಣವಾಗಿದೆ ಎಂದು ತನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ
ತಂದೆಯ ಶ್ರಮ ವ್ಯರ್ಥವಾಗಲಿಲ್ಲ ಅವರ ಕನಸನ್ನು ಅರ್ಧದಷ್ಟು ಮಾತ್ರ ಈಡೇರಿಸಿದ್ದೇನೆ ನಾಮು ಭಾರತೀಯ ಹಿರಿಯರ ಪರವಾಗಿ ಆಡಿ ಉತ್ತಮ ಪ್ರದರ್ಶನ ನೀಡಿದರೆ ನನ್ನ ತಂದೆಯ ಸಂಪೂರ್ಣ ಆಸೆ ಈಡೇರಿಸಿದಂತಾಗುತ್ತದೆ ಎಂದು ಹೇಳಿದರು ತ್ರಿಷಾ..
 ಅದೇನೇ ಇರಲಿ ಭಾರತ 19ವರ್ಷದೊಳಗಿನ ಮಹಿಳಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖಪಾತ್ರ ವಹಿಸಿದ ತ್ರೀಷಾಳ ಮುಂದಿನ ಕ್ರಿಕೆಟ್ ಪಯಣ ಯಶಸ್ವಿಯಾಗಿ ಭಾರತಿಯ ಮಹಿಳಾ ಕ್ರಿಕೆಟ್ ಬಾನೆತ್ತರಕ್ಕೆ ಬೆಳೆಯಲಿ ಎನ್ನುವುದು ನಮ್ಮೆಲ್ಲರ ಆಸಯವಾಗಿದೆ.
ಮತ್ತೊಮ್ಮೆ ಅಂಡರ್ 19 ಚೊಚ್ಚಲ ಮಹಿಳಾ ವಿಶ್ವಕಪ್ ಗೆದ್ದ ನಮ್ಮ ಭಾರತೀಯ ಮಹಿಳಾ ತಂಡಕ್ಕೆ ಶುಭಾಶಯಗಳು
Categories
ಕ್ರಿಕೆಟ್

ಫ್ರೆಂಡ್ಸ್ ಬೆಂಗಳೂರು ತಂಡದ ಆಶ್ರಯದಲ್ಲಿ ಶ್ರೇಷ್ಠ ಮಟ್ಟದ ಅಂತರರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘಟಿಸಿದ ರೇಣುಗೌಡರು & ಟೀಮ್..

ಫ್ರೆಂಡ್ಸ್ ಬೆಂಗಳೂರು ತಂಡದ ಆಶ್ರಯದಲ್ಲಿ ರೇಣುಗೌಡರ ಸಾರಥ್ಯದಲ್ಲಿ ಬೆಂಗಳೂರಿನ ಪಿಣ್ಯಾದ ಎರಡನೇ ಹಂತದಲ್ಲಿ ಕೇಲವೆ ದಿನಗಳಲ್ಲಿ ನಿರ್ಮಿಸಿದ ಸುಂದರ ಕ್ರೀಡಾಂಗಣದಲ್ಲಿ ನಡೆದಂತಹ  *”ಫ್ರೆಂಡ್ಸ್ ಟ್ರೋಫಿ 2023″*
ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಕ್ರಿಕೆಟ್ ಕಲರವ ಮುಗಿಲು ಮುಟ್ಟಿದೆ ಇತ್ತೀಚೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗಳಲ್ಲಿ ಹೆಚ್ಚು ತಂಡಗಳು ಭಾಗವಹಿಸುವುದೆ ವಿರಳ ಇಂತಹ ಸ್ಥಿತಿಯಲ್ಲಿ *”ರೇಣುಗೌಡರ ಸಾರಥ್ಯದ”* ಫ್ರೆಂಡ್ಸ್ ಟ್ರೋಫಿಯ ಪಂದ್ಯಾವಳಿಗೆ  49 ತಂಡಗಳು ಭಾಗವಹಿಸಿದ್ದು ಹೆಮ್ಮೆಯ ವಿಷಯ ಪ್ರಮುಖವಾಗಿ ಅಂತರರಾಷ್ಟ್ರೀಯ ತಂಡಗಳಲ್ಲಿ ಒಂದಾದ ದೂರದ ಶ್ರೀಲಂಕಾ ಮತ್ತು ಹೊರ ರಾಜ್ಯದ ಎಂಟು ತಂಡಗಳು ಭಾಗವಹಿಸಿ ಕರುನಾಡಿನ ಮಣ್ಣಿನಲ್ಲಿ ರೇಣುಗೌಡರ ಕನಸಿನ ಕ್ರಿಕೆಟ್ ಪಂದ್ಯಾವಳಿಗೆ ಇನ್ನಷ್ಟು ಮೆರಗು ನೀಡುವುದರ ಜೋತೆಗೆ ಕರ್ನಾಟಕದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಮಟ್ಟದ  ಕ್ರಿಕೆಟ್ ಪಂದ್ಯಾವಳಿನೆಡೆದು ಇತಿಹಾಸವನ್ನೇ ದಾಖಲಿಸಿದೆ.
      ಇಲ್ಲಿ ಪ್ರಮುಖ ವಾಗಿ ಗಮನಿಸಬೇಕಾಗಿರುವುದು ಪಂದ್ಯಾವಳಿಯಲ್ಲಿ ಭಾಗವಹಿಸಿದ ಯಾವುದೇ ತಂಡಕ್ಕೆ ಪ್ರವೇಶ ಶುಲ್ಕವಿಲ್ಲ ಬೆಂಗಳೂರು ನಗರ ಹೊರತು ಪಡಿಸಿ ಪ್ರತಿ ತಂಡಕ್ಕೂ ಉತ್ತಮವಾದ ಊಟ ವಸತಿಯ ವ್ಯವಸ್ಥೆಯ ಜೋತೆಗೆ ಪ್ರತಿ ತಂಡವನ್ನು ವಿಷೇಶವಾಗಿ ಉಪಚರಿಸಿ ಆದರಿಸಿದ ಗೌರವ ರೇಣುಗೌಡ ಮತ್ತು ಇವರ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಸಲ್ಲುತ್ತದೆ.
     ಈ ಪಂದ್ಯಾವಳಿಯ ಕೊನೆಯ ಕ್ಷಣದ ವರೆಗೂ  ಪ್ರತಿ ಪಂದ್ಯಾವಳಿಗಳ ವೀಕ್ಷಕ ವಿವರಣೆ ಹಾಗೂ ತೀರ್ಪುಗಾರಿಕೆ ಶ್ರೇಷ್ಠ ಮಟ್ಟದಾಗಿತ್ತು ಯಾವುದೇ ಹಂತದಲ್ಲೂ  ಪಂದ್ಯಾವಳಿಯಲ್ಲಿ ಗೊಂದಲ ಉಂಟಾಗಲಿಲ್ಲ. ಅದರಲ್ಲೂ ಪ್ರತಿಪಂದ್ಯವನ್ನು ನೇರ ಪ್ರಸಾರದೊಂದಿಗೆ ವಿಶ್ವವ್ಯಾಪ್ತಿ ಕ್ರಿಕೆಟ್ ಪ್ರೇಮಿಗಳಿಗೆ ಕುಳಿತಲ್ಲೆ ವಿಕ್ಷಿಸುವಂತೆ ಮಾಡಿದ ಎಸ್ ಆರ್ ಬಿ ಗ್ರೂಪ್‌ ನ ಛಾಯಗ್ರಾಹಕು ಮತ್ತು ವ್ಯವಸ್ಥಾಪಕರ ಕಾರ್ಯವೈಖರಿಯು ಈ ಟೂರ್ನಿಯ ಯಶಸ್ಸಿನ ಒಂದು ಭಾಗವಾಗಿದೆ.
    ಸಾಕಷ್ಟು ರಾಜ್ಯಮಟ್ಟದ ಟೂರ್ನಿಗಳಲ್ಲಿ ಎಂಟು ಓವರ್ ಗೆ ಸೀಮಿತವಾದ ಪಂದ್ಯಾವಳಿಗಳು ಆರಂಭದಲ್ಲಿ ಪಂದ್ಯಗಳು ಎಂಟು ಓವರ್ ಕಂಡರು ಪ್ರಮುಖವಾದ ಅಂತಿಮ ಹಂತದ ಪಂದ್ಯಗಳು ಎರಡು ಮೂರು ಓವರ್ ಪಂದ್ಯಗಳು ನೆಡೆದು ಕ್ರಿಕೆಟ್ ಆಟದ ಘನತೆಗೆ ಚ್ಯುತಿತರತ್ತದೆ. ಒಂದೇರಡು ಓವರ್ ಪಂದ್ಯದಲ್ಲಿ  ಗೆಲ್ಲುವಂತಹ ತಂಡಗಳು ಸೋಲಿಗೆ ಶರಣಾದರೆ ಸೋಲುವಂತಹ ತಂಡಗಳು ಗೆದ್ದು ಬಿಗುವುದು ಸಹಜ.
   *”ರೇಣುಗೌಡರ ಸಾರಥ್ಯದಲ್ಲಿ”* ನಡೆದ *”ಫ್ರೆಂಡ್ಸ್ ಬೆಂಗಳೂರು ಕಪ್”* ನ ಪ್ರತಿ ಪಂದ್ಯಗಳು ಎಂಟು ಓವರ್ ಎಸತಗಾರಿಕೆ ಕಂಡಿದೆ. ಎಲ್ಲಾ ಪಂದ್ಯಗಳು ಶ್ರೇಷ್ಠ ಮಟ್ಟದಾಗಿದ್ದು ಕ್ರೀಡಾಂಗಣದ ಸುತ್ತ ಬೆಳಿಗಿನಿಂದ ತಡರಾತ್ರಿವರೆಗೂ ಸಾವಿರಾರು ಮಂದಿ ಪ್ರೇಕ್ಷರ ಕರತಾಡನ ಮುಗಿಲು ಮುಟ್ಟಿತ್ತು. ಈ ಟೂರ್ನಿಯ ಅಂತಿಮ ಘಟ್ಟಕ್ಕೆ ತಲುಪಿದ ಬೆಂಗಳೂರಿನ *”ಮೈಟಿ ಬೆಂಗಳೂರು”* ತಂಡ ಮತ್ತು ದೂರದ ಲಕ್ನೋದ *”ಕಾಮಾಕ್ಷಿ ರಾಹುಲ್ ಇಲವೇನ್”* ತಂಡಗಳ ನಡುವಿನ ಪಂದ್ಯದಲ್ಲಿ ಲಕ್ನೋ ತಂಡ ನಿರಾಯಾಸವಾಗಿ ಮೈಟಿ ಬೆಂಗಳೂರು ತಂಡವನ್ನು ಮಣಿಸಿ ಫ್ರೆಂಡ್ಸ್ ಬೆಂಗಳೂರು ಕಪ್ ಮತ್ತು ನಗದು ಬಹುಮಾನವಾದ *ಐದುಲಕ್ಷದ ಐದುಸಾವಿರ* ರೂಪಾಯಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ತಾನು ಆಡಿದ ಎಲ್ಲಾ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಮೈಟಿ ಬೆಂಗಳೂರು ತಂಡ ಫೈನಲ್‌ ಪಂದ್ಯದಲ್ಲಿ ಎಡವಿ *ಎರಡುವರೆ ಲಕ್ಷ* ರೂಪಾಯಿಯೊಂದಿಗೆ ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಬೆಂಗಳೂರಿನ ಪಿಣ್ಯಾ ಎರಡನೇ ಹಂತದಲ್ಲಿ ರೇಣುಗೌಡರ ಸಾರಥ್ಯದಲ್ಲಿ  ಐದು ದಿನಗಳ ಕಾಲ ನೆಡೆದಂತಹ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಆರಂಭದಿಂದ ಅಂತಿಮ ಹಂತದವರೆಗೂ ಯಶಸ್ವಿಯಾಗಿ ನೆಡೆದು ಕರ್ನಾಟಕದಲ್ಲಿ ಇದು ವರೆಗೂ ನೆಡೆದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಇದು ಅಂತ್ಯಂತ ಯಶಸ್ವಿ ಪಂದ್ಯಾವಳಿಯಾಗಿ ಇತಿಹಾಸದ ಪುಟ ಸೇರಿದೆ ಅದರಲ್ಲೂ ಪ್ರವೇಶ ಶುಲ್ಕವಿಲ್ಲದ ಪಂದ್ಯಾವಳಿ ಎನ್ನುವ ಹಿರಿಮೆಯ ಜೋತೆಗೆ ಅಂತರರಾಷ್ಟ್ರೀಯ ತಂಡವಾದ ಶ್ರೀಲಂಕಾ ಮತ್ತು ಹೊರ ರಾಜ್ಯದ ಎಂಟು ಶ್ರೇಷ್ಠ ತಂಡಗಳು ಭಾಗವಹಿಸಿದ ಹಿರಿಮೆ ಈ ಟೂರ್ನಿಗಿದೆ…
  ಕನ್ನಡದ ಮಣ್ಣಿನಲ್ಲಿ ಶ್ರೇಷ್ಠ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಸಂಘಟಿಸಿದ ಗೌರವ ಫ್ರೆಂಡ್ಸ್ ಬೆಂಗಳೂರು ತಂಡದ ರೇಣುಗೌಡರು ಮತ್ತು ಇವರ ತಂಡಕ್ಕೆ ಸಲ್ಲುತ್ತದೆ..ಶ್ರೇಷ್ಠ ಮಟ್ಟದ ಅಂತರರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘಟಿಸಿದ ಸಹೋದರ ಮಿತ್ರರಾದ ರೇಣುಗೌಡರು ಮತ್ತು ತಂಡಕ್ಕೆ ಹೃದಯ ಪೂರ್ವಕ ವಂದನೆಗಳು
Categories
ಕ್ರಿಕೆಟ್

ಏಕದಿನ ವಿಶ್ವಕಪ್‌ ನಂತರ ಭಾರತ ತಂಡದಲ್ಲಿ ನಾಯಕನ ಬದಲಾವಣೆ ಸುಳಿವುಕೊಟ್ಟ ಬಿಸಿಸಿಐ: ಕನ್ನಡಿಗ ಕೆ ಎಲ್ ರಾಹುಲ್ ಗೆ ಒಲಿಯಲಿದೆ ಟೆಸ್ಟ್ ತಂಡದ ನಾಯಕತ್ವ…!?

ಟಿ20 ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳಿಂದ ರೋಹಿತ್, ವಿರಾಟ್ ಕೊಯ್ಲಿ ಹೊರಕ್ಕೆ..!!
ಬಲ್ಲ ಮೂಲಗಳ ಪ್ರಕಾರ ರೋಹಿತ್ ಶರ್ಮಾ ಇನ್ನು ಮುಂದೆ ಟಿ20 ಮಾದರಿಯಲ್ಲಿ ಭಾರತ ತಂಡದಲ್ಲಿ ಆಡುವುದಿಲ್ಲ. ವಿರಾಟ್ ಕೊಹ್ಲಿಯವರನ್ನು ಕೂಡ ಟಿ20 ಕ್ರಿಕೆಟ್‌ನಿಂದ ಹೊರಗಿಡಲು ಬಿಸಿಸಿಐ ನಿರ್ಧರಿಸಿದೆಯಂತೆ..!? ಇನ್ನೇನು ಏಕದಿನ ವಿಶ್ವಕಪ್‌ ಪಂದ್ಯಾವಳಿ ಬರಲಿರುವುದರಿಂದ ಪ್ರಮುಖ ಆಟಗಾರರಲ್ಲಿ ಒತ್ತಡವನ್ನು ಕಡಿಮೆ ಮಾಡುವ ನೆಪದಲ್ಲಿ ಇಬ್ಬರೂ ಹಿರಿಯ ಆಟಗಾರರನ್ನು ತಂಡದಿಂದ ತೆರೆಮರೆಗೆ ಸರಿಸಲು ಮುಂದಾಗಿದೆಯಂತೆ ಬಿಸಿಸಿಐ…?
ಟಿ20 ನಾಯಕತ್ವ ಬದಲಾವಣೆ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಮಾಡಿಲ್ಲವಾದರೂ ಬಲ್ಲ ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ತಂಡದ ನಾಯಕನಾಗಿ ಮುಂದುವರೆಯುವುದು ಖಚಿತವಾಗಿದೆ. ಏಕದಿನ ಮಾದರಿಗೂ  ಉಪನಾಯಕನ ಸ್ಥಾನದಿಂದ ಕೆಎಲ್‌ ರಾಹುಲ್‌ರನ್ನು ಕೈಬಿಟ್ಟು ಹಾರ್ದಿಕ್ ಪಾಂಡ್ಯರನ್ನು ಉಪನಾಯಕರನ್ನಾಗಿ ಮಾಡಿದೆ.
*ನಾಯಕನಾಗಿ ಪಾಂಡ್ಯ ಉತ್ತಮ ಪ್ರದರ್ಶನ*
ಈಗಾಗಲೇ ಹಾರ್ದಿಕ್ ಪಾಂಡ್ಯ ಟಿ20 ಮಾದರಿಯಲ್ಲಿ ನಾಯಕನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಯಸ್ಸಿನಲ್ಲಿ ಚಿಕ್ಕವನಾದರೂ ನಾಯಕನಾಗುವ ಎಲ್ಲಾ ಶಕ್ತಿ ಪಾಂಡ್ಯನಿಗಿದೆ ತನ್ನ ನಡತೆಯಲ್ಲೂ ಸಾಕಷ್ಟು ಸುಧಾರಿಸಿದ್ದಾರೆ. ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕತ್ವಕ್ಕೆ ಪಾಂಡ್ಯನಿಗಿಂತ ಉತ್ತಮ ಆಯ್ಕೆ ಇಲ್ಲ ಆತನಿಗೆ ಬೆಂಬಲ ನೀಡಬೇಕು’ ಎಂದು ಬಿಸಿಸಿಐನ ಪದಾಧಿಕಾರಿಗಳು ಹೇಳಿದ್ದಾರೆ.
ಟಿ20 ವಿಶ್ವಕಪ್ ಮುಕ್ತಾಯದ ನಂತರ ನೆಡೆದ ಟಿ20 ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕರಾಗಿ ತಂಡವನ್ನು ಮುನ್ನೆಡೆಸಿ ಯಶಸ್ವಿಯಾಗಿದ್ದಾರೆ. ಟಿ20 ವಿಶ್ವಕಪ್‌ ನಂತರ ಪಾಂಡ್ಯ ಸಾರಥ್ಯದಲ್ಲಿ  ಆಡಿರುವ ಎರಡು ಟಿ20 ಸರಣಿಯನ್ನು ಭಾರತ ತನ್ನ ಮಡಿಲಿಗೆ ಹಾಕಿಕೊಂಡಿದೆ.
*ಟೆಸ್ಟ್ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ನಾಯಕ..!?*
ಮುಂದಿನ ದಿನಗಳಲ್ಲಿ ಭಾರತದ ಟೆಸ್ಟ್ ತಂಡದ ನಾಯಕರಾಗಲು ಅರ್ಹತೆ ಇರುವ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ರೇಸ್‌ನಲ್ಲಿದ್ದಾರೆ. ಪಂತ್‌ ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ಸುಧಾರಿಸಿಕೊಳ್ಳುತ್ತಿರುವ ಕಾರಣಕ್ಕಾಗಿ ಅವರು ಯಾವಾಗ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂದು ಹೇಳುವುದು ಕಷ್ಟವಾಗಿದೆ. ಈ ಕಾರಣದಿಂದಲೇ
ಕೆಎಲ್ ರಾಹುಲ್‌  ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾದರು ಅವರು ಬಿಸಿಸಿಐಗೆ ನಂಬಿಕೆ ಬರುವಂತಹ ಪ್ರದರ್ಶನ ನೀಡಬೇಕಿದೆ ಅಷ್ಟೇ.. ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ರಾಹುಲ್ ನಾಯಕತ್ವದಲ್ಲಿ ಭಾರತ ಸರಣಿ ಗೆದ್ದರು, ನಾಯಕನಾಗಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ಏಕದಿನ ವಿಶ್ವಕಪ್ ನಂತರ ಬಿಸಿಸಿಐ, ರೋಹಿತ್ ಶರ್ಮಾ ಮತ್ತು ಕೆಎಲ್‌ ರಾಹುಲ್ ಜೊತೆ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನಿಸಲಿದೆ.
ರೋಹಿತ್ ಶರ್ಮಾ ಈಗಾಗಲೇ 36 ವರ್ಷ ವಯಸ್ಸಿನವರಾಗಿದ್ದಾರೆ. ಅವರು ಇನ್ನೂ ಹೆಚ್ಚು ದಿನಗಳ ಕಾಲ ಕ್ರಿಕೆಟ್ ಆಡುವ ಸಾಧ್ಯತೆಯಿಲ್ಲ. 2023ರ ಏಕದಿನ ವಿಶ್ವಕಪ್‌ ಗೆದ್ದರೆ, ರೋಹಿತ್ ಶರ್ಮಾ ನಿವೃತ್ತಿ ಘೋಷಿಸುವ ಸಾಧ್ಯತೆ ಕೂಡ ಇದ್ದು, ಬಿಸಿಸಿಐ ಈಗಿನಿಂದಲೇ ಎಲ್ಲಾ ವಿಭಾಗದ ಕ್ರಿಕೆಟ್ ನ ನಾಯಕತ್ವಕ್ಕೆ ಹಲವು ಬದಲಾವಣೆ ಮಾಡಲು ಸಜ್ಜಾಗಿನಿಂತಿದೆ ಅದರಲ್ಲೂ ಭಾರತದ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಯುವ ಪ್ರತಿಭೆಗಳು  ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಯಾಗುವ ಕನಸು ಕಾಣುತ್ತ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಸಾಕಷ್ಟು ಯುವ  ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಆಯ್ಕೆ ಸಮಿತಿಗೆ ಯಾರನ್ನು ಆಯ್ಕೆ ಮಾಡಬೇಕೆಂದು ದಿಕ್ಕುಕಾಣದಂತೆ ಕೈಕಟ್ಟಿ ಕೂಳಿತಿದೆ.ಈ ಕಾರಣದಿಂದಲೇ ಬಿಸಿಸಿಐ ಮೂರು ವಿಭಾಗದ ಕ್ರಿಕೆಟ್ ಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಆಯ್ಕೆ ಮಾಡುವ ಸಲುವಾಗಿ ಮೂರು ವಿಭಾಗದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿ ಯುವ ಆಟಗಾರಿಗೆ ಅವಕಾಶ ಮಾಡಿಕೊಡುತ್ತಿದೆ. ಮೂರು ರಾಷ್ಟ್ರೀಯ ತಂಡವನ್ನು ಮಾಡುವಷ್ಟರ ಮಟ್ಟಿಗೆ  ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರ ದಂಡೆ ಭಾರತದ ಕ್ರಿಕೆಟ್ ಅಂಗಳದಲ್ಲಿ ಪ್ರಜ್ವಲಿಸುತ್ತಿದ್ದಾರೆ. ಯಾರನ್ನು ಆಯ್ಕೆ ಮಾಡಬೇಕೆನ್ನುವುದು ಮಾತ್ರ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿದೆ.
 ಒಟ್ಟಿನಲ್ಲಿ ಬರಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯ ನಂತರ ಬಿಸಿಸಿಐ ರಾಷ್ಟ್ರೀಯ  ಮೂರು ವಿಭಾಗದ ಕ್ರಿಕೆಟ್ ತಂಡದಲ್ಲಿ ಬಾರಿ ಬದಲಾವಣೆ ಮಾಡಲಿದೆ. ಮತ್ತು ಯಾರನ್ನೂ ಯಾವ ಯಾವ ಮಾದರಿಯ ಕ್ರಿಕೆಟ್ ತಂಡಗಳಿಗೆ ಅಯ್ಕೆ ಮಾಡಲಿದೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ…!?
Categories
ಸಂತಾಪ

ಕಿರಿ ವಯಸ್ಸಿನಲ್ಲೇ ಬ್ರೈನ್ ಟ್ಯೂಮರ್ ಗೆ ಬಲಿಯಾದ ಉದಯೋನ್ಮುಖ ಕ್ರಿಕೆಟಿಗ ರಕ್ಷಿತ್ ಶೆಟ್ಟಿ…!

ಸಾವು ಅನ್ನೋದು ಅನಿರೀಕ್ಷಿತ. ಯಾರು? ಯಾವಾಗ? ಎಲ್ಲಿ? ಹೇಗೆ? ಸಾವಿನಮನೆ ಸೇರುತ್ತಾರೆಂದು ಊಹಿಸಲು ಸಾಧ್ಯವಿಲ್ಲ..! ಯಾವ ರೂಪದಲ್ಲಾದರು ಸಾವು ಎದುರಾಗಬಹುದು. ಈ ರೀತಿಯ ಸಾವಿಗೆ ಉಸಿರು ಚೆಲ್ಲಿದವರು ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪದ ಬುಕ್ಕಿಗುಡ್ಡೆಯ ಯುವ ಕ್ರಿಕೆಟಿಗ ರಕ್ಷಿತ್ ಶೆಟ್ಟಿ..!!
ಸಾವು ಬಹುಬೇಗನೆ ಬಂದು ಆತನ ಉಸಿರನ್ನು ಕಸಿದುಕೊಂಡು ಹೋಗಿದೆ ವಿಧಿ..?
 30 ವರ್ಷದ ಗಡಿ ದಾಟುವ ಮುನ್ನವೆ ಬ್ರೈನ್ ಟ್ಯೂಮರ್ ಗೆ ಬಲಿಯಾದ ಯುವಕನನ್ನು ಕಂಡು ಆತನ ಆಪ್ತ ವಲಯ ಬೆಚ್ಚಿ ಬಿದ್ದಿದೆ.ಈತನ ಸಾವಿನ ಸುದ್ದಿ ತಿಳಿದು  ಆತನ ಹೆತ್ತವರಿಗೂ ಸಂಬಂಧಿಕರಿಗೂ ಮತ್ತು ಮಿತ್ರವೃಂದಕ್ಕೂ ಇನ್ನೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ವಿಧಿ ನಿನೇಷ್ಟು ಕ್ರೂರಿ ಬದುಕಿನ ಹಾದಿಯಲ್ಲಿ ನೆಮ್ಮದಿಯ ಪಯಣ ಮಾಡುತ್ತಿದ್ದ  ಹುಡುಗನ ಉಸಿರು ನಿಲ್ಲಿಸಿ ನಿನ್ನ ಕ್ರೂರ ತನವನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಿಯಾ..! ಬೆಟ್ಟದಷ್ಟು ಕನಸುಗಳನ್ನು ತನ್ನ ಜೋಳಿಗೆಯಲ್ಲಿ ಹೊತ್ತು ತನ್ನಿಚ್ಚೆಯ ಗುರಿತಲುಪಲು ಹಗಲಿರುಳು ಶ್ರಮಿಸುತ್ತಿದ್ದ  ಯುವಕ  ರಕ್ಷಿತ್ ಶೆಟ್ಟಿ.
ರಕ್ಷಿತ್ ಶೆಟ್ಟಿಗೆ ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್ ಆಟವೆಂದರೆ ಪಂಚಪ್ರಾಣ. ತಾನು ಕೂಡ ಒಳ್ಳೆಯ ಕ್ರಿಕೆಟಿಗನಾಗಬೇಕೆಂದು ಕನಸು ಕಂಡವನು ಸುಮ್ಮನೆ ಕೂರಲಿಲ್ಲಿ. ಕರಾವಳಿ ಮೂಲದ ಪ್ರಸಿದ್ದ ತಂಡಗಳಲ್ಲಿ ಒಂದಾದ ಪೆರ್ಡೂರಿನ *”ಗೆಳೆಯರ ಬಳಗ”* ತಂಡದ ಮುಖಾಂತರ ಕ್ರಿಕೆಟ್ ಆಟವನ್ನು ಆರಂಭಿಸಿದ *”ರಕ್ಷಿತ್ ಶೆಟ್ಟಿ”* ತಿರುಗಿ ನೋಡಲಿಲ್ಲ ಉತ್ತಮ ಆಟಗಾರನಾಗಿ ಹೊರಹೊಮ್ಮಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.  ತಾಲ್ಲೂಕು ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಗಳಲ್ಲಿ ತನ್ನ ಆಕರ್ಷಕ ಬೌಲಿಂಗ್ ನಿಂದ ಸಾಕಷ್ಟು ಹೆಸರು ಮಾಡಿದ್ದ ರಕ್ಷಿತ್ ಶೆಟ್ಟಿ ರಾಜ್ಯದ ಹೆಸರಾಂತ ತಂಡಗಳನ್ನು ಪ್ರತಿನಿಧಿಸುವ ಮೂಲಕ ಕರಾವಳಿಯ ಹೆಸರಾಂತ ಬೌಲರ್ ಸಾಲಿನಲ್ಲಿ ತನ್ನ ಹೆಸರನ್ನು ನಮೂದಿಸಿದ್ದರು.
ಸೌಮ್ಯ ಸ್ವಭಾವದ ಆಕರ್ಷಕ ಮೈಕಟ್ಟಿನ ಸುಂದರ ಯುವಕ ರಕ್ಷಿತ್ ಶೆಟ್ಟಿ ತನ್ನ 29 ನೇ ವಯಸ್ಸಿನಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.
 ಮನೆಯ ಮುದ್ದಿನ ಮಗನಾಗಿದ್ದ ರಕ್ಷಿತ್ ಶೆಟ್ಟಿಗೆ ಮನೆಯ ಜವಾಬ್ದಾರಿಯು ಕೂಡ ಹೆಗಲ ಮೇಲಿತ್ತು ಎಲ್ಲವನ್ನೂ ನಿಭಾಯಿಸುವ ಶಕ್ತಿಕೂಡ ಅವನಲ್ಲಿತ್ತು. ಎಲ್ಲವನ್ನೂ ಸರಿದೂಗಿಸಿಕೊಂಡು ಹೆಜ್ಜೆ ಹಾಕುತ್ತಿದ್ದ ಸಮಯದಲ್ಲಿಯೇ  ರಕ್ಷಿತ್ ಶೆಟ್ಟಿಯ ಮೇಲೆ ಆ ದೇವರಿಗೂ ಜಲಸ್ಸಿರ ಬೇಕು..! ಕಳೆದ ಜನವರಿ ಎಂಟನೇ ತಾರೀಖು ಯಾರು ಊಹಿಸಲು ಸಾಧ್ಯವಿಲ್ಲದಂತಹ ಸುದ್ದಿಯೊಂದು ಸುನಾಮಿಯಂತೆ ಕರಾವಳಿಯ ಮಂದಿಯ ಕಿವಿಗೆ  ಅಪ್ಪಳಿಸಿತ್ತು..! ಇನ್ನೂ ಬಾಳಿ ಬದುಕಬೇಕಾಗಿದ್ದ 29 ವಯಸ್ಸಿನ ಯುವಕ ರಕ್ಷಿತ್ ಶೆಟ್ಟಿ ಇನ್ನಿಲ್ಲ ಎನ್ನುವ ಸಾವಿನ ಸುದ್ದಿ..!
ತನ್ನ ಬದುಕಿಗೆ ಅಂತ್ಯವಾಡಿ ಒಲ್ಲದ ಮನಸ್ಸಿನಿಂದಲೆ ಈ ನೆಲದ ಋಣ ಮುಗಿಸಿ ಹೊರಟ ಶ್ರೇಷ್ಠ ಕ್ರಿಕೆಟಿಗನ ಸಾವಿನ ಸುದ್ಧಿ ಕರಾವಳಿಯ ಕ್ರಿಕೆಟ್ ಅಂಗಳದ ಅಸಂಖ್ಯಾತ ಅಭಿಮಾನಿಗಳು ಮತ್ತು ಕ್ರಿಕೆಟಿಗರನ್ನು  ಒಮ್ಮೆ ದುಃಖಿಸುವಂತೆ ಮಾಡಿತ್ತು. ರಕ್ಷಿತ್ ಶೆಟ್ಟಿಯ ಸಾವಿನ ಸುದ್ಧಿ ಕೇಳಿದ ಕುಟುಂಬಸ್ಥರು ಮತ್ತು ಮಿತ್ರರು ಕ್ರಿಕೆಟ್ ಅಂಗಳದ ಸ್ನೇಹಿತರ ದುಃಖ ಮುಗಿಲು ಮುಟ್ಟಿತ್ತು. ಚಿಕ್ಕ ವಯಸ್ಸಿನಲ್ಲೇ ಬ್ರೈನ್ ಟ್ಯೂಮರ್ ಎಂಬ ಮಾರಕ ರೋಗಕ್ಕೆ ಬಲಿಯಾದ ರಕ್ಷಿತ್ ಶೆಟ್ಟಿಯ ಅಂತಿಮ ದರ್ಶನಕ್ಕೆ ಆತನ ಸ್ನೇಹಿತರು ಕ್ರಿಕೆಟ್ ಅಭಿಮಾನಿಗಳು.ಸಹ ಆಟಗಾರರು ಮತ್ತು ಕುಟುಂಬಸ್ಥರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಅಂತಿಮ ಯಾತ್ರೆಯೊಂದಿಗೆ ಯುವ ಕ್ರಿಕೆಟಿಗನನ್ನು ಬಿಳ್ಕೋಟ್ಟರು….
ಒಟ್ಟಿನಲ್ಲಿ ಮಾರಕ ರೋಗವೊಂದು ಹರೆಯದ ಯುವಕನನ್ನು ಬಲಿಪಡೆದಿದ್ದು ಮಾತ್ರ ದುರಂತವೆ ಹೌದು..!
 ಮೃತ ರಕ್ಷಿತ್ ಶೆಟ್ಟಿಯ ಆತ್ಮಕ್ಕೆ ಚಿರಶಾಂತಿ ದೊರಕಲಿ ದೇವರು ಅವರ ಅಭಿಮಾನಿಗಳು. ಮಿತ್ರರು ಮತ್ತು ಕುಟುಂಬ ವರ್ಗದರಿಗೆ  ದುಃಖ ಭರಿಸುವ ಶಕ್ತಿ ನೀಡಲಿ
Categories
ಕ್ರಿಕೆಟ್

ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

ಡೆಹ್ರಾಡೂನ್: ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ರಿಷಭ್ ಪಂತ್  ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದ ರಿಷಭ್ ಪಂತ್ ಸ್ಥಿತಿ ಗಂಭೀರವಾಗಿದೆ.

ಉತ್ತರಾಖಂಡದಿಂದ  ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ಲಾಸ್ಟಿಕ್ ಸರ್ಜರಿಯ (Plastic Surgery) ಅವಶ್ಯಕತೆ ಇರುವುದಾಗಿ ವರದಿಯಾಗಿದೆ.

ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಬೆನ್ನು, ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುಶೀಲ್ ನಗರ್ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಷಭ್ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ. ನಂತರ ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಅದೇ ವೇಳೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಷಬ್ ಪಂತ್ ಅವರನ್ನು  ದೆಹಲಿ ರಸ್ತೆಯಲ್ಲಿರುವ ಸಕ್ಷಮ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದುಬಂದಿದೆ.                 

Categories
ಸಂತಾಪ

ವೆಸ್ಟ್‌ವಿಂಡೀಸ್‌ ಮಾಜಿ ಕೀಪರ್‌ ಡೇವಿಡ್‌ ಮರ್ರೆ ನಿಧನ

ಬಾರ್ಬಡೊಸ್‌: ಒಂದುಕಾಲದ ಬಲಿಷ್ಠ ಕ್ರಿಕೆಟ್ ತಂಡ ವೆಸ್ಟ್‌ ಇಂಡೀಸ್‌ನ ಭಯಾನಕ ಹಾಗೂ ಘಾತಕ ವೇಗಿಗಳ ಕಾಲಘಟ್ಟದಲ್ಲಿ ಅಮೋಘ ಕೀಪಿಂಗ್‌ ನಡೆಸಿ ವಿಶ್ವಖ್ಯಾತಿ ಪಡೆದಂತಹ ಶ್ರೇಷ್ಠ ಕ್ರಿಕೆಟ್ ಆಟಗಾರ ಡೇವಿಡ್‌ ಮರ್ರೆ (72) ಇನ್ನೂ ನೆನಪು ಮಾತ್ರ.
ಇವರ ನಿಧನವನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಒಂದು ದಿನ ವಿಳಂಬವಾಗಿ ಘೋಷಿಸಿದೆ.
ಡೇವಿಡ್‌ ಆ್ಯಂಟನಿ ಮರ್ರೆ ವೆಸ್ಟ್ ಇಂಡೀಸ್‌ನ ಖ್ಯಾತ ತ್ರಿವಳಿ “ಡಬ್ಲ್ಯು’ ಗಳಲ್ಲಿ ಒಬ್ಬರಾದ ಎವರ್ಟನ್‌ ವೀಕ್ಸ್‌ ಅವರ ಪುತ್ರ. 1973ರ ಇಂಗ್ಲೆಂಡ್‌ ಪ್ರವಾಸದ ವೇಳೆ ವಿಂಡೀಸ್‌ ತಂಡಕ್ಕೆ ಆಯ್ಕೆಯಾದರು. ಆದರೆ ಟೆಸ್ಟ್‌ ಪಾದಾರ್ಪಣೆ  ಮಾಡಿದ್ದು 1978 ರಲ್ಲಿ ಅಂದು ಪ್ರವಾಸಿ ಆಸ್ಟ್ರೇಲಿಯಾ ತಂಡದ ಆಗಮನದ ವೇಳೆ. 19 ಟೆಸ್ಟ್‌, 10 ಏಕದಿನ ಪಂದ್ಯಗಳನ್ನು ಆಡಿದ್ದ ಮರ್ರೆ
ಮಾರ್ಷಲ್‌, ಹೋಲ್ಡಿಂಗ್‌ ಮೊದ ಲಾದ ವಿಂಡೀಸ್ ಬಲಿಷ್ಠ ವೇಗಿಗಳ ಎಸೆತಗಳನ್ನು ಯಾವುದೇ ಅಳುಕಿಲ್ಲದೆ ನಿರಾಯಾಸವಾಗಿ ಗ್ಲೌಸ್‌ಗೆ ಸೇರಿಸಿಕೊಳ್ಳುತ್ತಿದ್ದ ಹೆಗ್ಗಳಿಕೆ ಮರ್ರೆ ಅವರದಾಗಿತ್ತು.
ಆದರೆ ಹದಿಮೂರನೇ ವಯಸ್ಸಿನಲ್ಲೇ ಅಂಟಿಕೊಂಡ ಮರಿಜುವಾನಾ ಚಟ, 1983ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬಂಡುಕೋರನಾಗಿ ತೆರಳಲು ದೊಡ್ಡ ಮೊತ್ತ ಪಡೆದದ್ದು ಮರ್ರೆ ಅವರ ಕ್ರಿಕೆಟ್‌ ಬದುಕನ್ನು ಬಹಳ ಬೇಗ ಮೊಟಕುಗೊಳಿಸಿತು. ಇನ್ನಷ್ಟು ಎತ್ತರಕ್ಕೆ ಬೆಳೆಯ ಬೇಕಾಗಿದ್ದ ಮರ್ರೆ ತಮ್ಮ ‌ಕೈಯಾರೆ ತಮ್ಮ ಉತ್ತಂಗ ಕ್ರಿಕೆಟ್ ಬದುಕನ್ನು ನಾಶಮಾಡಿಕೊಂಡಿದ್ದು ಮಾತ್ರ ದುರಂತವೆ ಹೌದು
ಇಂದು ಹೆಸರಾಂತ ಹಿರಿಯ ಕ್ರಿಕೆಟಿಗ ಮರ್ರೆ ತಮ್ಮ ಎಪ್ಪತ್ತೆರಡನೆ ವಯಸ್ಸಿನಲ್ಲಿ ತಮ್ಮ ‌ಬದುಕಿಗೆ ವಿಧಾಯ ಹೇಳಿ ಇಹಲೋಕ ತೆಜಿಸಿದ್ದಾರೆ. ಇವರ ಅಕಾಲಿಕ ಮರಣಕ್ಕೆ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ
Categories
ಕ್ರಿಕೆಟ್

ಒಂದೇ ಓವರಿನಲ್ಲಿ ಏಳು ಸಿಕ್ಸರ್‌ ಜೋತೆಗೆ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಯುವ ಕ್ರಿಕೆಟಿಗ ಋತುರಾಜ್ ಗಾಯಕ್ವಾಡ್

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ 2022 ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ನಲ್ಲಿ ಅಬ್ಬರಿಸುವುದರ ಜೋತೆಗೆ ವಿಶ್ವದಾಖಲೆ ನಿರ್ಮಿಸಿದ್ದಾರೆ. ಒಂದೇ ಓವರ್‌ನಲ್ಲಿನ ಸತತ ಏಳು ಸಿಕ್ಸರ್ ಸಿಡಿಸಿದ್ದಲ್ಲದೆ ಅಜೇಯ ದ್ವಿಶತಕ ದಾಖಲಿಸಿ ಅಬ್ಬರಿಸಿದ್ದಾರೆ.
ಉತ್ತರ ಪ್ರದೇಶ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮಹಾರಾಷ್ಟ್ರ ಪರ ನಾಯಕ ಮತ್ತು  ಓಪನರ್ ಋತುರಾಜ್ ಗಾಯಕ್ವಾಡ್ ಏಕಾಂಗಿಯಾಗಿ ಅಬ್ಬರಿಸಿ ಶ್ರೇಷ್ಠ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೆ ಮತ್ತೊಂದು ತುದಿಯಲ್ಲಿ ಭದ್ರವಾಗಿ ನೆಲ ಕಚ್ಚಿದ ಮಹಾರಾಷ್ಟ್ರ ನಾಯಕ ಋತುರಾಜ್  159 ಎಸೆತಗಳಲ್ಲಿ ಅಜೇಯ 220 ರನ್‌ ಕಲೆಹಾಕುವ ಮೂಲಕ ಮಿಂಚಿದರು. 138.36 ಸರಾಸರಿಯಲ್ಲಿ ಬ್ಯಾಟ್‌ ಬೀಸಿದ ರುತುರಾಜ್‌ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಭರ್ಜರಿ 16 ಸಿಕ್ಸರ್‌ ಬಾರಿಸಿದ್ದರು
49ನೇ ಓವರ್‌ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ಋತುರಾಜ್ ಗಾಯಕ್ವಾಡ್ ಬರೋಬ್ಬರಿ 7 ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಶಿವ ಸಿಂಗ್‌ ಬೌಲಿಂಗ್‌ನಲ್ಲಿ ಒಂದರ ಹಿಂದೆ ಮತ್ತೊಂದರಂತೆ ಸಿಕ್ಸರ್ ಸಿಡಿಸಿದ ಗಾಯಕ್ವಾಡ್‌, ನೋ ಬಾಲ್‌ ಎಸೆತದಲ್ಲೂ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಓವರ್‌ನಲ್ಲಿ ಏಳು ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಸಾಧನೆ ಮಾಡಿ ದಾಖಲೆ ಮಾಡಿದ್ದಾರೆ.
*ವೀಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*
https://youtu.be/HS8IEKHg8o0
ಇನ್ನೂ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ದಾಖಲೆಯು ವಿಜರ್ ಹಜಾರೆ ಟ್ರೋಫಿಯಲ್ಲಿ ದಾಖಲಾಗಿದೆ. 49ನೇ ಓವರ್‌ನಲ್ಲಿ 43 ರನ್‌ ದಾಖಲಾಗುವ ಮೂಲಕ ಅತ್ಯಂತ ದುಬಾರಿ ಓವರ್‌ ಎಂಬ ಪಟ್ಟಿಗೆ ಸೇರಿದೆ.
ಋತುರಾಜ್ ಗಾಯಕ್ವಾಡ್ ಅಜೇಯ 220 ರನ್‌ಗಳ ನೆರವಿನಿಂದ ಮಹಾರಾಷ್ಟ್ರ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 330 ರನ್ ಕಲೆಹಾಕಿದೆ. ಉತ್ತರ ಪ್ರದೇಶ ತಂಡಕ್ಕೆ 331ರನ್ ಗುರಿ ನೀಡಿದೆ.