ಭರವಸೆಯ ಬೆಳಕುಇಂದು ವಿದ್ಯಾರ್ಥಿವೇತನ ಪಡೆಯುವವರು ಮುಂದೆ ಕೊಡುವಂತಾಗಬೇಕು - ಐಕಳ ಹರೀಶ್ ಶೆಟ್ಟಿ.

ಇಂದು ವಿದ್ಯಾರ್ಥಿವೇತನ ಪಡೆಯುವವರು ಮುಂದೆ ಕೊಡುವಂತಾಗಬೇಕು – ಐಕಳ ಹರೀಶ್ ಶೆಟ್ಟಿ.

-

- Advertisment -spot_img

ಇಂದು ವಿದ್ಯಾರ್ಥಿವೇತನ ಪಡೆಯುವವರು ಮುಂದೆ ಕೊಡುವಂತಾಗಬೇಕು – ಐಕಳ ಹರೀಶ್ ಶೆಟ್ಟಿ.


ಇಂದು ವಿವಿಧ ಚಾರಿಟಿ ಸಂಸ್ಥೆಗಳಿಂದ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಮುಂದೆ ಅದೇ ರೀತಿಯ ವಿದ್ಯಾರ್ಥಿವೇತನಗಳನ್ನು ಕೊಡುವವರಾಗಬೇಕು. ಕೃತಜ್ಞತೆಯು ಅತೀ ದೊಡ್ಡ ಮೌಲ್ಯವಾಗಿದೆ. ನಮ್ಮ ಶಿಕ್ಷಣಕ್ಕೆ ವಿವಿಧ ವ್ಯಕ್ತಿ ಮತ್ತು ಸಂಸ್ಥೆಗಳಿಂದ ದೊರೆತ ವಿದ್ಯಾರ್ಥಿವೇತನವನ್ನು ಸದುಪಯೋಗ ಪಡಿಸುವುದು ಮಾತ್ರವಲ್ಲ ಅದನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಮತ್ತು ಮುಂದೆ ನಾವು ಸಂಪಾದನೆ ಆರಂಭಿಸಿದಾಗ ಅದರ ಒಂದು ಭಾಗವನ್ನು ಸಮಾಜಕ್ಕೆ ಹಿಂದಿರುಗಿಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು ಎಂದು ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು.

ಅವರು ಬೆಳ್ಮಣ್ ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಅಮ್ಮನ ನೆರವು ಫೌಂಡೇಶನ್ ವತಿಯಿಂದ ನಡೆದ ವಿದ್ಯಾರ್ಥಿವೇತನ ಮತ್ತು ಸಹಾಯ ಧನ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತಾಡುತ್ತಿದ್ದರು. ಅಮ್ಮನ ನೆರವು ಫೌಂಡೇಶನ್ ಮೂಲಕ ಸರಕಾರಿ ಶಾಲೆಗಳ ಪ್ರತಿಭಾವಂತ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅಂದಾಜು ಮೂರು ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನಗಳನ್ನು ಹಸ್ತಾಂತರ ಮಾಡಿ ಅವರು ಶುಭಕೋರಿದರು.

ಸಹಕಾರಿ ಧುರೀಣರು ಹಾಗೂ ಬೆಳಪು ಗ್ರಾಮದ ಅಭಿವೃದ್ಧಿಯ ಹರಿಕಾರರೂ ಆದ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಕಳದ ವಿಜೇತಾ ವಿಶೇಷ ಶಾಲೆಗೆ, ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಬೆಳ್ಳಿಹಬ್ಬದ ಕೊಡುಗೆಯಾಗಿ ನಿರ್ಮಾಣ ಮಾಡುತ್ತಿರುವ ಮನೆಗೆ ಮತ್ತು ಕಾರ್ಕಳದ ಸುರಕ್ಷಾ ಸೇವಾಶ್ರಮಗಳಿಗೆ ಅಮ್ಮನ ನೆರವು ಫೌಂಡೇಶನ್ ಕೊಡಮಾಡಿದ ತಲಾ 10,000 ರೂ.ಗಳ ಸಹಾಯಧನವನ್ನು ಹಸ್ತಾಂತರ ಮಾಡಿ ಶುಭಕೋರಿದರು. ಮಾಜಿ ಜಿ ಪಂ. ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ನಿಟ್ಟೆ ಮೆಸ್ಕಾಂನ ಸಹಾಯಕ ಅಭಿಯಂತರರಾದ ವಿನಾಯಕ್ ಕಾಮತ್, ಬೆಳ್ಮಣ್ ಜೆಸಿಐ ಅಧ್ಯಕ್ಷ ಇನ್ನಾ ಪ್ರದೀಪ್ ಶೆಟ್ಟಿ, ಹೋಟೆಲ್ ಉದ್ಯಮಿ ಜಗದೀಶ್ ಶೆಟ್ಟಿ, ಸಾಹಿತಿ ರೇಷ್ಮಾ ಶೆಟ್ಟಿ ಗೋರೂರು ಅವರು ಕಾರ್ಯಕ್ರಮದ ಅತಿಥಿಗಳಾಗಿದ್ದರು. ಬೆಳ್ಮಣ್ ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯರಾದ ವಿನ್ಸೆಂಟ್ ಡಿಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಮ್ಮನ ನೆರವು ಫೌಂಡೇಶನ್ ಅಧ್ಯಕ್ಷರಾದ ಅವಿನಾಶ್ ಜಿ ಶೆಟ್ಟಿ ಅವರು ಈ ವರ್ಷದಲ್ಲಿ ಕಾರ್ಕಳ ತಾಲೂಕಿನ ಸರಕಾರಿ ಶಾಲೆಗಳ ಮಕ್ಕಳಿಗೆ 16 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು ಅದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಟ್ರಸ್ಟಿನ ಸಲಹೆಗಾರರಾದ ವಸಂತ್ ಎಂ ಅವರು ವಿದ್ಯಾರ್ಥಿವೇತನದ ವಿವರ ನೀಡಿದರು. ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮುಖ್ಯ ಶಿಕ್ಷಕ ಗೋಪಾಲ್ ಅವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here

16 − 9 =

Latest news

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್ ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ, ತುಮಕೂರು  ಹಾಗೂ ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ತುಮಕೂರು ಇವರ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಈ ಟೂರ್ನಮೆಂಟ್ ಡಾ....

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ! ಬೆಂಗಳೂರು:  ಪ್ರತೀ ಬಾರಿಯಂತೆ ಈ ವರ್ಷದ ‘Cheftalk Premier League – Season 6’ ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 13...

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು! ಮಲ್ಪೆ, ಮೀನುಗಾರಿಕಾ ಬಂದರು: ಮಲ್ಪೆ ಬಂದರು ಸಹಕಾರಿ ನೌಕರರ ಸಂಘ, ಮಲ್ಪೆ ಇವರ ವತಿಯಿಂದ,...

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”   ಉಡುಪಿ: ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ (Kinnimulki Sports Club) ವತಿಯಿಂದ ಪ್ರತಿಷ್ಠಿತ ಕಿನ್ನಿಮೂಲ್ಕಿ ಸೂಪರ್...
- Advertisement -spot_imgspot_img

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ! 

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ!  ಕ್ರಿಕೆಟ್ ಲೋಕದ ಅಭಿಮಾನಿಗಳನ್ನು ರಂಜಿಸಿದ ಗೆಳೆಯರು ಕಪ್ 2025 ಟೂರ್ನಮೆಂಟ್...

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ.

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ. ಖ್ಯಾತ ಕ್ರಿಕೆಟ್ ಆಟಗಾರ ವಿಠಲ್ ರಿಶಾನ್ ನಾಯಕ್ ಅವರು ದುಬೈನ ಪ್ರಸಿದ್ಧ ಕ್ರಿಕೆಟ್ ತಂಡವಾದ ಕರ್ನಾಟಕ...

Must read

- Advertisement -spot_imgspot_img

You might also likeRELATED
Recommended to you