17.1 C
London
Monday, September 9, 2024
Homeಕ್ರಿಕೆಟ್ಮಹಾರಾಜ ಟ್ರೋಫಿಯಲ್ಲಿ ಮಿಂಚುತ್ತಿದ್ದಾನೆ ರಾಹುಲ್ ದ್ರಾವಿಡ್ ಅವರ ಹಿರಿಮಗ!

ಮಹಾರಾಜ ಟ್ರೋಫಿಯಲ್ಲಿ ಮಿಂಚುತ್ತಿದ್ದಾನೆ ರಾಹುಲ್ ದ್ರಾವಿಡ್ ಅವರ ಹಿರಿಮಗ!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಕ್ರಿಕೆಟ ದಿಗ್ಗಜ ರಾಹುಲ್ ದ್ರಾವಿಡ್ ಅವರ ಹಿರಿಮಗ ಸಮಿತ್ ದ್ರಾವಿಡ್ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ ಆಡುತ್ತಿದ್ದಾನೆ. ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 24 ಎಸೆತಗಳಲ್ಲಿ 33 ರನ್ ಗಳಿಸಿ ಗಮನ ಸೆಳೆದಿದ್ದಾನೆ 18 ವರ್ಷದ ಸಮಿತ್ ದ್ರಾವಿಡ್.

ದ್ರಾವಿಡ್ ಮಗನ ಆಟವನ್ನು ನೋಡಿದವರು, “ಅಪ್ಪನಂತೆ ಮಗ” ಎಂದು ಉದ್ಘರಿಸುತ್ತಿದ್ದಾರೆ.
ಅಂಥವರಿಗೊಂದು ಮಾತು.. ರಾಹುಲ್ ದ್ರಾವಿಡ್ ಅವರ ಹಿರಿಮಗ ಸಮಿತ್ ಅಪ್ಪನಂತೆ ಅಲ್ಲವೇ ಅಲ್ಲ.. ಅಪ್ಪ ಇಡೀ ಜಗತ್ತೇ ಮೆಚ್ಚಿದ ಬ್ಯಾಟ್ಸ್’ಮನ್. ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್’ಗಳಲ್ಲಿ ಒಬ್ಬರು. ಆದರೆ ಮಗ ಆಲ್ರೌಂಡರ್… ಬಲಗೈ ಮಧ್ಯಮ ವೇಗದ ಬೌಲರ್, ಬಲಗೈ ಬ್ಯಾಟರ್.

ಈಗಿನ ಕಾಲದಲ್ಲಿ higher level ಕ್ರಿಕೆಟ್ ಆಡಬೇಕೆಂದರೆ, multi talented ಆಗಿರಲೇಬೇಕು. ಬ್ಯಾಟಿಂಗ್ ಜೊತೆ ಬೌಲಿಂಗ್ ಮಾಡಬೇಕು ಅಥವಾ ಬೌಲಿಂಗ್ ಜೊತೆ ಬ್ಯಾಟಿಂಗ್ ಕೌಶಲ್ಯ ಗೊತ್ತಿರಬೇಕು. ಮೀಡಿಯಂ ಪೇಸ್ ಆಲ್ರೌಂಡರ್ ಆಗಿದ್ದರೆ ಅಂಥಾ ಆಟಗಾರನ ತೂಕವೇ ಬೇರೆ. ರಾಹುಲ್ ದ್ರಾವಿಡ್ ತಮ್ಮ ಹಿರಿಮಗನನ್ನು ಹಾಗೆಯೇ ಬೆಳೆಸಿದ್ದಾರೆ.

ಈಗಾಗಲೇ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿರುವ ಸಮಿತ್ ದ್ರಾವಿಡ್, ಈ ವರ್ಷ ಕೂಚ್ ಬೆಹಾರ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ್ದ ಕರ್ನಾಟಕ ತಂಡದ ಸದಸ್ಯನೂ ಹೌದು.

KSCA ಅಂಡರ್-19 ಟೂರ್ನಿಗಳಲ್ಲಿ ಮಗ ಆಡುತ್ತಿದ್ದರೆ.. ದ್ರಾವಿಡ್ ಮೈದಾನದ ಮೂಲೆಯಲ್ಲಿ ಕುಳಿತು ಇಡೀ ದಿನ ಪಂದ್ಯ ವೀಕ್ಷಿಸುತ್ತಾರೆ. ಅದು ನೆಲದ ಮೇಲಾದರೂ ಸರಿ, ಮೆಟ್ಟಿಲುಗಳ ಮೇಲಾದರೂ ಸರಿ.

ದ್ರಾವಿಡ್ ಅವರ ಕಿರಿಮಗ ಅನ್ವಯ್ ದ್ರಾವಿಡ್ ಅಪ್ಪನ ಪಡಿಯಚ್ಚು. ಅಂದರೆ, ವಿಕೆಟ್ ಕೀಪರ್ ಬ್ಯಾಟ್ಸ್’ಮನ್. ಕರ್ನಾಟಕ ಅಂಡರ್-14 ತಂಡದ ನಾಯಕ ಕೂಡ.

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರನಿಗೆ ಕ್ರಿಕೆಟ್ ಒಗ್ಗಿದಂತೆ ಕಾಣುತ್ತಿಲ್ಲ.. ಮತ್ತೊಬ್ಬ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಅವರ ಮಗ ಭಾರತ ಪರ ಆಡಿದರೂ ಅಪ್ಪನ ಪ್ರಭಾವಳಿಯ ಮುಂದೆ ಆತ ನಿಲ್ಲಲೇ ಇಲ್ಲ. ದ್ರಾವಿಡ್ ಅವರ ಮಕ್ಕಳು ಹಾಗಾಗದಿರಲಿ.. ಅಪ್ಪನಂತೆ ಮಕ್ಕಳಿಗೂ ಕ್ರಿಕೆಟ್ ದೇವತೆ ಒಲಿಯಲಿ.

Latest stories

LEAVE A REPLY

Please enter your comment!
Please enter your name here

18 − 4 =