ಕ್ರಿಕೆಟ್ ಜಗತ್ತಿನ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ ಇಂದಿಗೆ 16 ವರ್ಷಗಳು ತುಂಬಿವೆ.
2008ರ ಆಗಸ್ಟ್ 18ರಂದು ಶ್ರೀಲಂಕಾದ ದಾಂಬುಲದಲ್ಲಿ ನಡೆದ ಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ದ ವಿರಾಟ್ ಕೊಹ್ಲಿ ಕೇವಲ 12 ರನ್ ಗಳಿಸಿ ಔಟಾಗಿದ್ದರು.
ಆದರೆ ನಂತರ ಕೊಹ್ಲಿ ತಿರುಗಿ ನೋಡಿದ್ದೇ ಇಲ್ಲ. ಕಳೆದ 16 ವರ್ಷಗಳಲ್ಲಿ ವಿರಾಟ್ ಕೊಹ್ಲಿಯ ಆಟ ಎಂಥವರನ್ನಾದರೂ ಬೆರಗುಗೊಳಿಸುತ್ತದೆ. ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ ಬಾರಿಸಿರುವ ವಿಶ್ವದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 49 ಶತಕಗಳನ್ನ ಬಾರಿಸಿದ್ದರೆ, ವಿರಾಟ್ ಕೊಹ್ಲಿ 50 ಸೆಂಚುರಿಗಳನ್ನು ಸಿಡಿಸಿದ್ದಾರೆ. ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಡಿರುವ 295 ರನ್’ಗಳಿಂದ ವಿರಾಟ್ ಕೊಹ್ಲಿ 50 ಶತಕಗಳ ಸಹಿತ 58.18ರ ಸರಾಸರಿಯಲ್ಲಿ 13,906 ರನ್ ಗಳಿಸಿದ್ದಾರೆ. ಅತೀ ವೇಗವಾಗಿ 14 ಸಾವಿರ ಏಕದಿನ ರನ್’ಗಳ ಗಡಿ ತಲುಪಲು ವಿರಾಟ್ ಕೊಹ್ಲಿಗೆ ಇನ್ನು ಕೇವಲ 94 ರನ್’ಗಳ ಅವಶ್ಯಕತೆಯಿದೆ.
ಟೆಸ್ಟ್ ಕ್ರಿಕೆಟ್’ನಲ್ಲಿ 113 ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ 29 ಶತಕ ಹಾಗೂ 30 ಶತಕಗಳ ಸಹಿತ 8848 ರನ್ ಕಲೆ ಹಾಕಿದ್ದಾರೆ. ಟಿ20 ಕ್ರಿಕೆಟ್’ನಲ್ಲೂ ಲೆಜೆಂಡ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ 125 ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ 4188 ರನ್ ಗಳಿಸಿದ್ದಾರೆ.
ಒಟ್ಟಾರೆ ಕಳೆದ 16 ವರ್ಷಗಳಲ್ಲಿ ಆಡಿರುವ 533 ಅಂತರಾಷ್ಟ್ರೀಯ ಪಂದ್ಯಗಳಿಂದ ವಿರಾಟ್ ಕೊಹ್ಲಿ 80 ಶತಕಗಳೊಂದಿಗೆ 26,942 ರನ್ ಕಲೆ ಹಾಕಿದ್ದಾರೆ.
ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ನಂತರ..
ಅತೀ ಹೆಚ್ಚು ರನ್: ವಿರಾಟ್ ಕೊಹ್ಲಿ (26942)
ಅತೀ ಹೆಚ್ಚು ಅರ್ಧಶತಕ: ವಿರಾಟ್ ಕೊಹ್ಲಿ (140)
ಅತೀ ಹೆಚ್ಚು ಶತಕ: ವಿರಾಟ್ ಕೊಹ್ಲಿ (80)
ಅತೀ ಹೆಚ್ಚು 150s: ವಿರಾಟ್ ಕೊಹ್ಲಿ (16)
ಅತೀ ಹೆಚ್ಚು ದ್ವಿಶತಕ: ವಿರಾಟ್ ಕೊಹ್ಲಿ (7)
ಅತೀ ಹೆಚ್ಚು ಬೌಂಡರಿ: ವಿರಾಟ್ ಕೊಹ್ಲಿ (2963)
ಅತೀ ಹೆಚ್ಚು ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ (67)
ಅತೀ ಹೆಚ್ಚು ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ (21)
ಅತೀ ಹೆಚ್ಚು ಐಸಿಸಿ ರನ್: ವಿರಾಟ್ ಕೊಹ್ಲಿ (3736)
ಅತೀ ಹೆಚ್ಚು ಐಸಿಸಿ 50s: ವಿರಾಟ್ ಕೊಹ್ಲಿ (32)
ಅತೀ ಹೆಚ್ಚು ಐಸಿಸಿ ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ (13)
ಅತೀ ಹೆಚ್ಚು ಐಸಿಸಿ ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ (3)
ಅತೀ ಹೆಚ್ಚು ಐಸಿಸಿ ಪ್ರಶಸ್ತಿ: ವಿರಾಟ್ ಕೊಹ್ಲಿ (10)
ಅತೀ ಹೆಚ್ಚು ಐಸಿಸಿ ನಾಕೌಟ್ ರನ್: ವಿರಾಟ್ ಕೊಹ್ಲಿ (939)
ಅತೀ ಹೆಚ್ಚು ಐಸಿಸಿ ನಾಕೌಟ್ 50s: ವಿರಾಟ್ ಕೊಹ್ಲಿ (9)
ಅತೀ ಹೆಚ್ಚು ಐಸಿಸಿ ಫೈನಲ್ ರನ್: ವಿರಾಟ್ ಕೊಹ್ಲಿ (410)
ನಾಯಕನಾಗಿ ಅತೀ ಹೆಚ್ಚು ರನ್: ವಿರಾಟ್ ಕೊಹ್ಲಿ (12883)
ನಾಯಕನಾಗಿ ಅತೀ ಹೆಚ್ಚು ಶತಕ: ವಿರಾಟ್ ಕೊಹ್ಲಿ (41)
ನಾಯಕನಾಗಿ ಅತೀ ಹೆಚ್ಚು 150s: ವಿರಾಟ್ ಕೊಹ್ಲಿ (11)
ನಾಯಕನಾಗಿ ಅತೀ ಹೆಚ್ಚು ದ್ವಿಶತಕ: ವಿರಾಟ್ ಕೊಹ್ಲಿ (7)
ನಾಯಕನಾಗಿ ಅತೀ ಹೆಚ್ಚು ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ (27)
ನಾಯಕನಾಗಿ ಅತೀ ಹೆಚ್ಚು ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ (12)
ಅತೀ ಹೆಚ್ಚು ಬಾರಿ ಐಸಿಸಿ ಟೀಮ್ ನಾಯಕ: ವಿರಾಟ್ ಕೊಹ್ಲಿ (08)