14.6 C
London
Monday, September 9, 2024
Homeಕ್ರಿಕೆಟ್ಗ್ರಾಮೀಣ ಪ್ರತಿಭೆಗೆ ಬೇಕಿದೆ ನೆರವಿನ ಹಸ್ತ', ಇಂಡಿಯನ್ ಡಾಡ್ಜ್ ಬಾಲ್ ಯುವ ಆಟಗಾರ ಸಂದೀಪ!

ಗ್ರಾಮೀಣ ಪ್ರತಿಭೆಗೆ ಬೇಕಿದೆ ನೆರವಿನ ಹಸ್ತ’, ಇಂಡಿಯನ್ ಡಾಡ್ಜ್ ಬಾಲ್ ಯುವ ಆಟಗಾರ ಸಂದೀಪ!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಭಾರತೀಯ ಹಿರಿಯರ ಡಾಡ್ಜ್‌ಬಾಲ್ ಪುರುಷರ ತಂಡಕ್ಕೆ ಆಯ್ಕೆಯಾಗಿರುವ  ಉಡುಪಿ ಮೂಲದ ಸಂದೀಪ , ಹಲವು ಡಾಡ್ಜ್ ಬಾಲ್  ಟೂರ್ನಿಗಳಲ್ಲಿಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.  ರಾಜ್ಯ, ರಾಷ್ಟ್ರೀಯ ತಂಡಗಳ  ಪರ ಆಡಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಆಯ್ಕೆಗಾರರನ್ನು ಸೆಳೆದಿದ್ದಾರೆ. ಇದೀಗ ಇದೇ ಬರುವ  ಆಗಸ್ಟ್ 11 ರಿಂದ 17 ರವರೆಗೆ ಆಸ್ಟ್ರಿಯಾದಲ್ಲಿ  ನಡೆಯಲಿರುವ ಡಾಡ್ಜ್ ಬಾಲ್ ವಿಶ್ವಕಪ್ 2024 ರಲ್ಲಿ ಭಾರತೀಯ ಹಿರಿಯರ ಡಾಡ್ಜ್ ಬಾಲ್ ಪುರುಷರ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಕ್ರೀಡಾಕ್ಷೇತ್ರದಲ್ಲಿ ಆಸಕ್ತಿಗೊಂಡು ಪರಿಶ್ರಮಪಟ್ಟು ಅಭ್ಯಾಸ ಮಾಡಿ ಸ್ವ ಪ್ರತಿಭೆಯಿಂದ ಆಯ್ಕೆಯಾಗಿರುವ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಚೆಗ್ರಿಬೆಟ್ಟು ವಿನ  ಉದಯೋನ್ಮುಖ ಡಾಡ್ಜ್ ಬಾಲ್ ಆಟಗಾರ ಸಂದೀಪ  ಹಣದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.  ಸೂಕ್ತ ಪ್ರೋತ್ಸಾಹಕ್ಕಾಗಿ ಎದುರು ನೋಡುತ್ತಿದ್ದಾರೆ.  ಚೆಗ್ರಿಬೆಟ್ಟು ಪುಟ್ಟ ಗ್ರಾಮದ ಯುವ ಪ್ರತಿಭೆ ಅತ್ಯುತ್ತಮವಾಗಿ  ಡಾಡ್ಜ್ ಬಾಲ್ ಆಡುವ  ಸಾಮರ್ಥ್ಯ‌ ಹೊಂದಿದ್ದು,  ಕಳೆದ ಎರಡು ವರ್ಷಗಳಿಂದ ವಿವಿಧ  ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ವಿಶ್ವ ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್ ನಲ್ಲಿ ಭಾರತೀಯ ಹಿರಿಯ ಡಾಡ್ಜ್‌ಬಾಲ್ ಪುರುಷರ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿ ಭಾಗವಹಿಸುವ ಸಿದ್ಧತೆಯಲ್ಲಿದ್ದು, ಪ್ರಾಯೋಜಕರ ಪ್ರೋತ್ಸಾಹಕ್ಕೆ ಸಹಾಯಸ್ತ ಚಾಚಿದ್ದಾರೆ.
ಇವರ ಕ್ರೀಡಾ ಸಾಧನೆಗಳು:
• ಫೆಬ್ರವರಿ 2022 ರಲ್ಲಿ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಒಂದನೇ ಹಿರಿಯ ರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್ ನಲ್ಲಿ ಕರ್ನಾಟಕ ರಾಜ್ಯ ಹಿರಿಯ ಡಾಡ್ಜ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು ಚಾಂಪಿಯನ್ ಆಗಿದ್ದು ಸಂದೀಪ ಚಿನ್ನದ ಪದಕವನ್ನು ಪಡೆದಿದ್ದಾರೆ.
• ಮಲೆೀಶಿಯಾದ ಷಾ  ಆಲಂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್  ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್ ನಲ್ಲಿ ಭಾರತೀಯ ಹಿರಿಯರ ತಂಡದಲ್ಲಿ ಸ್ಥಾನ ಗಳಿಸಿ, ಶ್ರೇಷ್ಠ  ಪ್ರದರ್ಶನ ನೀಡಿದ್ದಾರೆ.
• ಅಕ್ಟೋಬರ್ 2023 ರಲ್ಲಿ ಮಹಾರಾಷ್ಟ್ರದ ಎಲ್ಲೋರ ದಲ್ಲಿ ನಡೆದ ಎರಡನೇ ಹಿರಿಯರ ರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಉಪನಾಯಕನಾಗಿ ಪ್ರತಿನಿಧಿಸಿದ್ದರು. ಈ ಟೂರ್ನಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿದ್ದು, ಸಂದೀಪ ಚಿನ್ನದ ಪದಕವನ್ನು ಗಳಿಸಿದ್ದರು.
• ನವೆಂಬರ್ 2023 ರಲ್ಲಿ ಟ್ಯಾಂಪಿನ್ಸ್ ಹಬ್ ಸಿಂಗಾಪುರದಲ್ಲಿ ನಡೆದ ಏಷ್ಯಾ ಕಪ್ ನಲ್ಲಿ ಭಾರತೀಯ ಹಿರಿಯರ ಪುರುಷರ ತಂಡಕ್ಕೆ ನಾಯಕರಾಗಿ  ಆಯ್ಕೆಯಾಗಿ, ಉತ್ತಮವಾಗಿ ಆಡಿ ಇವರ ನೇತೃತ್ವದ ಭಾರತೀಯ ತಂಡ ಫೈನಲ್ ಪ್ರವೇಶಿಸಿತ್ತು. ಈ ಟೂರ್ನಿಯಲ್ಲಿ ಸಂದೀಪ ಅವರ ಅದ್ಭುತ ನಾಯಕತ್ವದ ಫಲವಾಗಿ ಮೊದಲ ಬಾರಿಗೆ ಭಾರತ ತಂಡವು ಇವರ ನಾಯಕತ್ವದಲ್ಲಿ ಆಸ್ಟ್ರಿಯಾದಲ್ಲಿ  ನಡೆಯುವ ಡಾಡ್ಜ್ ಬಾಲ್ ವಿಶ್ವಕಪ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ.
• ಮೇ 2024 ರಲ್ಲಿ ತೆಲಂಗಾಣದಲ್ಲಿ ನಡೆದ ಮೊದಲ ಭಾರತೀಯ ಡಾಡ್ಜ್ ಬಾಲ್ ಫೆಡರೇಷನ್ ಕಪ್ 2024 ರಲ್ಲಿ ಉಪನಾಯಕನಾಗಿ ಕರ್ನಾಟಕ ರಾಜ್ಯ ಹಿರಿಯರ  ಡಾಡ್ಜ್ ಬಾಲ್ ತಂಡವನ್ನು ಪ್ರತಿನಿಧಿಸಿ, ಈ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು ಮೂರನೇ ಸ್ಥಾನವನ್ನು ಗಳಿಸಿ ಕಂಚಿನ ಪದಕವನ್ನು ಗೆದ್ದಿದ್ದಾರೆ.
• ಇದೀಗ ಆಗಸ್ಟ್ 2024 ರಲ್ಲಿಆಸ್ಟ್ರಿಯಾದಲ್ಲಿ ನಡೆಯುವ ಡಾಡ್ಜ್ ಬಾಲ್  ವಿಶ್ವಕಪ್ 2024 ರಲ್ಲಿ ಭಾರತೀಯ ಹಿರಿಯರ ಡಾಡ್ಜ್ ಬಾಲ್  ಪುರುಷರ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಡಿಯನ್ ಡಾಡ್ಜ್ ಬಾಲ್ ತಂಡವನ್ನು ಪ್ರತಿನಿಧಿಸಬೇಕೆಂಬ ಛಲ ಇವರಲ್ಲಿ ಬೇರೂರಿದೆ.  ಆದರೆ ಬಡತನದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂದೀಪ ಈ ಟೂರ್ನಿಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ.  ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿಮಾನ ಪ್ರಯಾಣ, ವೀಸಾ,ಇನ್ಶೂರೆನ್ಸ್, ಪ್ರವೇಶ ಶುಲ್ಕ ಕಿಟ್ ಸೇರಿದಂತೆ ಅಂದಾಜು ಎರಡೂವರೆ ಲಕ್ಷ ಖರ್ಚು ವೆಚ್ಚಗಳಿದ್ದು ಅಷ್ಟು ಹಣ ಭರಿಸಲು ಶಕ್ತರಿಲ್ಲ.  ಹೀಗಾಗಿ ನೆರವಿನ ನೀರಿಕ್ಷೆಯಲ್ಲಿ ಸಂದೀಪ ಇದ್ದಾರೆ. ಸೂಕ್ತ ಪ್ರೋತ್ಸಾಹದ ನಿರೀಕ್ಷೆಯಲ್ಲಿಯಲ್ಲಿರುವ  ಈ  ಪ್ರತಿಭೆಗೆ ಈಗ ಆರ್ಥಿಕ ನೆರವಿನ ಅಗತ್ಯವಿದೆ. ಆತ್ಮವಿಶ್ವಾಸ, ಛಲದಿಂದ ಕ್ರೀಡಾಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಆತನ  ಕನಸು ಮತ್ತು ಕ್ರೀಡಾ ಬದುಕು ಮುಂದೆ ಸಾಗಲು  ಸಾರ್ವಜನಿಕರು, ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ಹಸ್ತ ಚಾಚಬೇಕಿದೆ.  ಹೃದಯವಂತ  ಸಾರ್ವಜನಿಕರು ಸಹಾಯ ಮಾಡಿದಲ್ಲಿ ಅನುಕೂಲವಾಗಲಿದೆ.
ದಾನಿಗಳು ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್, ಕೊಕ್ಕರ್ಣೆ ಖಾತೆ ಸಂಖ್ಯೆ 89126248597 IFSC code KVGB0008203 ಗೆ ಹಣ ನೀಡಬಹುದು. ಮೊ.ಸಂ. 72598 49241 ಸಂಪರ್ಕಿಸಬಹುದು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

four × two =