“ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ” ಎಂಬ ಮಾತಿದೆ. ಹಣದ ಮುಂದೆ ಯಾವ ಆದರ್ಶಗಳೂ ನಿಲ್ಲುವುದಿಲ್ಲ ಎಂಬ ಕಾಲದಲ್ಲಿ ಇಲ್ಲೊಬ್ಬರು ಹಣಕ್ಕಿಂತ ನನಗೆ ನಾನು ನಂಬಿದ ಆದರ್ಶವೇ ಮುಖ್ಯ ಎಂಬುದನ್ನು ಮತ್ತೆ ಮತ್ತೆ ಸಾರಿ ಹೇಳುತ್ತಿದ್ದಾರೆ. ಅವರು ರಾಹುಲ್ ದ್ರಾವಿಡ್.
ಕೋಟಿ ಹಣ ಮತ್ತು ನಂಬಿದ ಆದರ್ಶ.. ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದರೆ ರಾಹುಲ್ ದ್ರಾವಿಡ್ ಅವರ ಆಯ್ಕೆ ಆದರ್ಶ.
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ₹125 ಕೋಟಿ cash prizeನ್ನು ಬಿಸಿಸಿಐ ಘೋಷಣೆ ಮಾಡಿತ್ತು. ಇದರಲ್ಲಿ 15 ಮಂದಿ ಆಟಗಾರರಿಗೆ ತಲಾ ₹5 ಕೋಟಿ, ಹೆಡ್ ಕೋಚ್ ದ್ರಾವಿಡ್ ಅವರಿಗೂ ₹5 ಕೋಟಿ; ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್’ಗೆ ತಲಾ ₹2.5 ಕೋಟಿ ಕೊಡುವುದೆಂದು ಬಿಸಿಸಿಐ ತೀರ್ಮಾನ ಮಾಡಿತ್ತು.
ವಿಶ್ವಕಪ್ ಗೆದ್ದ ಮರುದಿನ.. ಅಂದರೆ ಜೂನ್ 30..
ಬಾರ್ಬೆಡೋಸ್’ನ ಹಿಲ್ಟನ್ ಹೋಟೆಲ್’ನಲ್ಲಿ prize money ಬಗ್ಗೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಬಳಿ ಬಿಸಿಸಿಐ secretary ಜಯ್ ಶಾ ಮಾತುಕತೆ ನಡೆಸುತ್ತಾನೆ. ಆಗ ರಾಹುಲ್ ದ್ರಾವಿಡ್ ಏನು ಹೇಳಿದರು ಗೊತ್ತೇ..
“ನನ್ನ ಸಪೋರ್ಟಿಂಗ್ ಸ್ಟಾಫ್’ಗೆ (ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್) ಎಷ್ಟು ಕೊಡುತ್ತಿರೋ, ನನಗೂ ಅಷ್ಟೇ ಕೊಡಿ. ನಮ್ಮ ಮಧ್ಯೆ discrimination ಮಾಡುವುದು ನನಗೆ ಇಷ್ಟವಿಲ್ಲ”.
ಆದರೆ ಸಪೋರ್ಟಿಂಗ್ ಸ್ಟಾಫ್’ಗೆ ₹5 ಕೋಟಿ ಕೊಡಲು ಜಯ್ ಶಾ ಸುತಾರಾಂ ಒಪ್ಪಲೇ ಇಲ್ಲ. ಕೊನೆಗೆ ರಾಹುಲ್ ದ್ರಾವಿಡ್ ಅವರೇ ನನಗೆ ಎರಡೂವರೆ ಕೋಟಿ ರೂಪಾಯಿಗಳೇ ಸಾಕು ಅಂದು ಬಿಟ್ಟರು. ಹೀಗೆ ತಮ್ಮ ಪಾಲಿಗೆ ಬಂದಿದ್ದ ಎರಡೂವರೆ ಕೋಟಿಗಳನ್ನು ತಮ್ಮ ಜೊತೆ ಕೆಲಸ ಮಾಡಿದವರ ಕಾರಣಕ್ಕೆ ದ್ರಾವಿಡ್ ತಿರಸ್ಕರಿಸಿ ಬಿಟ್ಟಿದ್ದಾರೆ.
2018ರಲ್ಲಿ ಭಾರತ ತಂಡ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಅಂಡರ್-19 ವಿಶ್ವಕಪ್ ಗೆದ್ದಾಗಲೂ ಇಂಥದ್ದೇ ಘಟನೆ ನಡೆದಿತ್ತು. ಅವತ್ತು ಕೋಚ್ ದ್ರಾವಿಡ್ ಅವರಿಗೆ ₹50 ಲಕ್ಷ, ಆಟಗಾರರಿಗೆ ₹30 ಲಕ್ಷ ಕೊಡಲು ಬಿಸಿಸಿಐ ನಿರ್ಧರಿಸಿತ್ತು. “ಆಟಗಾರರಿಗೆ ಕೊಡುವಷ್ಟೇ ನನಗೂ ಕೊಡಿ, ನನಗೆ ಹೆಚ್ಚು, ಅವರಿಗೆ ಕಡಿಮೆ ಬೇಡವೇ ಬೇಡ” ಎಂದು ಕಡ್ಡಿ ಮುರಿದಂತೆ ದ್ರಾವಿಡ್ ಹೇಳಿದ್ದರು.
ಬೇರೆಯವರಿಗಿಂತ ರಾಹುಲ್ ದ್ರಾವಿಡ್ different ಅನ್ನಿಸಿಕೊಳ್ಳುವುದು ಇಂಥದ್ದೇ ಕಾರಣಗಳಿಗೆ