ಸ್ಪೋರ್ಟ್ಸ್ ಕನ್ನಡ ವರದಿ
ಬಹ್ರೇನ್- ಅಲ್-ಹಿಲಾಲ್(ಹೆಲ್ತ್ ಕೇರ್)ಪ್ರಸ್ತುತ ಪಡಿಸುವ ಮಂಗಳೂರು ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಗುರುವಾರ ರಾತ್ರಿ ಅದ್ಧೂರಿಯ ಚಾಲನೆ ದೊರಕಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು
ಮೆಟಾಲ್ಕೋ ಗ್ರೂಪ್ಸ್ ಆಫ್ ಕಂಪೆನಿಯ ಮಾಲೀಕರಾದ ಅಬ್ದುಲ್ ರಜಾಕ್ ಹಾಜಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಲ್-ಹಿಲಾಲ್ ಗ್ರೂಪ್ಸ್ ನ ರೀಜನಲ್ ಬ್ಯುಸಿನೆಸ್ ಮೆನೇಜರ್ ಆಸಿಫ್ ಅಲ್-ಹಿಲಾಲ್, ವೆಸ್ಟ್ ಎಂಡ್ ಅರೇಬಿಯಾದ ಮಾಲೀಕರಾದ ಸಮೀರ್ ಮೊಯ್ದಿನ್,ಪ್ರಸಿದ್ಧ ಕನ್ನಡ ಆರ್.ಜೆ ಕಮಲಾಕ್ಷ,ಇಲ್ಮಾಸ್ ಟ್ರೇಡಿಂಗ್ ಕಂಪೆನಿಯ ಲತೀಫ್ ಶಿಫಾ,ಸಿವಿಲ್ ಇಂಜಿನಿಯರ್ ಡಾ.ರಾಜೇಶ್.ಬಿ.ಶೆಟ್ಟಿ,ನ್ಯೂ ಇಂಡಿಯಾ ಇನ್ಸುರೆನ್ಸ್ ಕ್ಲೈಮ್ಸ್ ಮೆನೇಜರ್ ಶಮ್ಶುದ್ದೀನ್ ಅಬ್ಬಾಸ್,ಕಾಸಾ ಅರೇಬಿಯಾ ಮಾಲೀಕರಾದ ರಿಯಾಝ್ ಬಿ.ಕೆ,ಕೆ.ಎಸ್ ಗ್ರೂಪ್ಸ್ ಮಾಲೀಕರಾದ ಶಮೀಮ್ ಕಲಂದರ್,
ವೆಸ್ಟ್ ಎಂಡ್ ಅರೇಬಿಯಾದ ಮಾಲೀಕರಾದ
ಸಲಾಂ ಮೊಹಮ್ಮದ್,ವಾಟರ್ ಬಿ.ಎಂ.ಎಸ್ ನ ಡಿವಿಜನ್ ಮೆನೇಜರ್ ನಿತಿನ್ ಶೆಟ್ಟಿ,ಮೆಟಲ್ಕೋ ಗ್ರೂಪ್ಸ್ ನ ಬ್ಯುಸಿನೆಸ್ ಡೆವೆಲಪ್ಮೆಂಟ್ ಮೆನೇಜರ್ ಸಯ್ಯದ್ ಭಾಯ್,ಫೈನ್ ಫ್ರುಟ್ಸ್ ನ ಮಾರ್ಕೆಟಿಂಗ್ ಮೆನೇಜರ್ ಜತ್ತನ್ನ ಶಂಕರ್,ಆರ್.ಪಿ ಕನ್ಸ್ಟ್ರಕ್ಷನ್ ಸೇಫ್ಟಿ ಆಫೀಸರ್ ಅಬ್ದುಲ್ ಕರೀಮ್, ಪಂದ್ಯಾಟದ ಆಯೋಜಕರು,
ಆಟಗಾರರು ಉಪಸ್ಥಿತರಿದ್ದರು.
ಶಾಫಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.