ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕುಸ್ತಿ ಪಟುಗಳು ದೇಶವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ. ಕುಸ್ತಿ ಅಖಾಡದಲ್ಲಿ ಭಾರತದ ಅನ್ಶೂ ಮಲ್ಲಿಕ್ ಬೆಳ್ಳಿ ಗೆದ್ದು ಶುಕ್ರವಾರ ಶುಭ ಆರಂಭ ಮಾಡುತ್ತಿದ್ದಂತೆ ಭಾರತದ ಮಡಿಲಿಗೆ ಮೂರು ಚಿನ್ನ ಕುಸ್ತಿಪಟುಗಳ ಸಾಮರ್ಥ್ಯಕ್ಕೆ ಒಲಿದಿದೆ
ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ದೀಪಕ್ ಪೂನಿಯಾ ಚಿನ್ನ ಗೆದ್ದರೆ, ಅನ್ಶೂ ಮಲಿಕ್ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಭಾರತೀಯ ಹೆಮ್ಮೆಯ ಕುಸ್ತಿಪಟು ಅನ್ಶೂ ಮಲಿಕ್ ಬೆಳ್ಳಿ ಗೆದ್ದು ಬಿಗುತ್ತಿದ್ದಹಾಗೆ ಭಜರಂಗ್ ಪೂನಿಯಾ ಮೊದಲ ಚಿನ್ನದ ಪದಕ ಗೆದ್ದರು ಇದರ ಬೆನ್ನಿಗೆ ಭಾರತದ ಮಹಿಳಾ ಸ್ಟಾರ್ ಕುಸ್ತಿಪಟು ಸಾಕ್ಷಿ ಮಲಿಕ್ ಕೂಡ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಶುಕ್ರವಾರದ ಶುಕ್ರದೆಸೆ ಆರಂಭವಾಗಿತ್ತು ರೆಸ್ಲಿಂಗ್‌ನಲ್ಲಿ ಎರಡನೇ ಚಿನ್ನದ ಪದಕ ಪದಕದ ಪಟ್ಟಿ ಸೇರುತ್ತಿದ್ದ ಹಾಗೆ ಭಾರತದ ಯುವ ಕುಸ್ತಿಪಟು ದೀಪಕ್ ಪೂನಿಯಾ ಚಿನ್ನದ ಪದಕ ಗೆದ್ದು ಕೇಲವೆ ಕ್ಷಣಗಳ ಅಂತರದಲ್ಲಿ ಕುಸ್ತಿ ಅಖಾಡದಲ್ಲಿ ಭಾರತೀಯ ಪ್ರೇಕ್ಷಕರ ಹರ್ಷೊದ್ಗಾರ ಮುಗಿಲು ಮುಟ್ಟುವಂತೆ ಮಾಡಿದ್ದರು.
ಭಜರಂಗ್ ಪುನಿಯಾ ಚಿನ್ನ ಗೆದ್ದ ಕೆಲವೇ ಕ್ಷಣಗಳ ಅಂತರದಲ್ಲಿ ಸಾಕ್ಷಿ ಮಲಿಕ್ ಮತ್ತು ದೀಪಕ್ ಪೂನಿಯಾ ಕೂಡ ಕುಸ್ತಿಯಾ ಅಖಾಡದಲ್ಲಿ ಎದುರಾಳಿಯ ವಿರುದ್ಧ ತಮ್ಮ ಸಾಮಾರ್ಥ್ಯ ತೋರಿಸಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದು ಸಾಕ್ಷಿ ಮಲಿಕ್ ಅವರ ಇದುವರೆಗಿನ ಮೂರನೇ ಕಾಮನ್‌ವೆಲ್ತ್ ಪದಕವಾಗಿದ್ದು ಅದರೆ ಈ ಸಾಲಿನಲ್ಲಿ ತಮ್ಮ ಕನಸಿನ ಮೊದಲ ಚಿನ್ನದ ಪದಕ ಬೇಟೆ ಅಡಿದ್ದಾರೆ ಎಂಬುದು ಗಮನಾರ್ಹ. ಈ ಹಿಂದೆ ರಿಯೋ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಕಂಚಿನ ಪದಕವನ್ನು ಗೆದ್ದು ಸಾಧನೆ ಮಾಡಿದ್ದರು. ಆದರೆ ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ವಿಫಲವಾಗಿ ನಿರಾಸೆ ಅನುಭವಿಸಿದ್ದರು. ಇದೀಗ ಕಾಮನ್‌ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಕ್ರೀಡಾ ಬದುಕಿನ ಮತ್ತೊಂದು ಶ್ರೇಷ್ಠ ಸಾಧನೆ ಮಾಡಿದ್ದಾರೆ ಭಾರತದ ರೆಸ್ಲರ್ ಸಾಕ್ಷಿ.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ 20 ವರ್ಷದ ಕೆಲ್ಸಿ ಬಾರ್ನೆ ಅವರನ್ನು ಸೋಲಿಸುವ ಮೂಲಕ ಸಾಕ್ಷಿ ತಮ್ಮ ಅಭಿಯಾನವನ್ನು ಅದ್ಭುತವಾಗಿ ಆರಂಭಿಸಿದರು. ಮಹಿಳಾ ಫ್ರೀಸ್ಟೈಲ್‌ನಲ್ಲಿ ಕ್ಯಾಮರೂನ್‌ನ ಎಟಾನೆ ನ್ಗೊಲ್ಲೆ ವಿರುದ್ಧ ಸೆಮಿಫೈನಲ್‌ನಲ್ಲಿ ಸೆಣೆಸಿ ಅದೇ ಫಲಿತಾಂಶವನ್ನು ಪುನರಾವರ್ತಿಸಿ ಫೈನಲ್‌ಗೆ ಪ್ರವೇಶಿಸಿದರು. ಫೈನಲ್‌ನಲ್ಲಿ ಕೆನಡಾದ ಅನಾ ಗೊನ್ಜಾಲೇಜ್ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ ಸಾಕ್ಷಿ ಮಲಿಕ್.
2022ರ ಕಾಮನ್‌ವೆಲ್ತ್‌ನಲ್ಲಿ ಕುಸ್ತಿಯಲ್ಲಿ ಭಾರತ ಪರ ಪದಕ ಗೆದ್ದು ಬಿಗಿದ್ದಾರೆ