ಬಹ್ರೇನ್-ಅಲ್-ಹಿಲಾಲ್(ಹೆಲ್ತ್ ಕೇರ್) ಇವರು ಪ್ರಸ್ತುತ ಪಡಿಸುವ,ಸಲ್ಮಾನ್ ಫಾರಿಸ್,ಮಿಗ್ದಾದ್,ಮುಸ್ಥಾ ಇವರ ಸಾರಥ್ಯದಲ್ಲಿ ಹೊನಲು ಬೆಳಕಿನ ಅದ್ಧೂರಿಯ “ಮಂಗಳೂರು ಸೂಪರ್ ಲೀಗ್” ಕ್ರಿಕೆಟ್ ಪಂದ್ಯಾಟ ಇಂದು ಆಗಸ್ಟ್ 4 ಮತ್ತು ಆಗಸ್ಟ್ 11ರಂದು ರಿಫಾ ಕ್ಲಬ್ ಗ್ರೌಂಡ್ ನಲ್ಲಿ ನಡೆಯಲಿದೆ.
ಇಂದು ರಾತ್ರಿ 7.30 ಗಂಟೆಗೆ ಸರಿಯಾಗಿ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಅದ್ಧೂರಿಯ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಲಿದೆ.
ಈ ಪಂದ್ಯಾಟದಲ್ಲಿ ಉಡುಪಿ,ಮಂಗಳೂರು ಮತ್ತು ಕಾಸರಗೋಡಿನ ಆಟಗಾರರು ಭಾಗವಹಿಸಲಿದ್ದು,
ಬಿಡ್ಡಿಂಗ್ ಮೂಲಕ 10 ತಂಡಗಳನ್ನು ರಚಿಸಲಾಗಿದೆ.
10 ತಂಡಗಳ ವಿವರ-ಕ್ಲಸ್ಟರ್ ಸೂಪರ್ ಕಿಂಗ್ಸ್, ಯು.ಕೆ.ಸಿ.ಸಿ,ಯುನೈಟೆಡ್ ಬ್ಯಾರೀಸ್,ನಮ್ಮ ಕುಡ್ಲ,ಕರಾವಳಿ ಕಿಂಗ್ಸ್,ಸ್ಪೋರ್ಟಿಂಗ್ ವಳಚ್ಚಿಲ್,ಯು ಶೈನ್ ಸ್ಟಾರ್ಸ್,ಹಿಲಾಲ್ ಹಿಟ್ಟರ್ಸ್,ಪಿಚ್ ಸ್ಮ್ಯಾಶರ್ಸ್,ರಿಫಾ ಇಂಡಿಯನ್ ಸ್ಟಾರ್.