ಇಂದು ಏಷ್ಯಾಕಪ್ ಫೈನಲ್‌ನಲ್ಲಿ ಭಾರತ–ಪಾಕಿಸ್ತಾನ ಭರ್ಜರಿ ಮುಖಾಮುಖಿ

ಇಂದು ಏಷ್ಯಾಕಪ್ ಫೈನಲ್‌ನಲ್ಲಿ ಭಾರತ–ಪಾಕಿಸ್ತಾನ ಭರ್ಜರಿ ಮುಖಾಮುಖಿ

ಇಂದು ಏಷ್ಯಾಕಪ್ ಫೈನಲ್‌ನಲ್ಲಿ ಭಾರತ–ಪಾಕಿಸ್ತಾನ ಭರ್ಜರಿ ಮುಖಾಮುಖಿ

ಏಷ್ಯನ್ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ದ ಕ್ಷಣ ಇಂದೇ ಸಾಕಾರವಾಗುತ್ತಿದೆ. ಏಷ್ಯಾಕಪ್ 2025ರ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೋರಾಟಕ್ಕೆ ವಿಶ್ವದಾದ್ಯಂತದ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾದಿದ್ದಾರೆ.

ಟೂರ್ನಿಯು ಆರಂಭವಾದಾಗಿನಿಂದಲೂ ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳು ಶ್ರೇಷ್ಠ ಪ್ರದರ್ಶನ ತೋರಿಸುತ್ತಾ ಬಂದಿದ್ದು, ಫೈನಲ್‌ಗೂ ಮುನ್ನ ನಡೆದ ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಭಾರತದ ಬ್ಯಾಟಿಂಗ್ ಕ್ರಮದಲ್ಲಿ ಅಭಿಷೇಕ್ ಶರ್ಮ, ಶುಭ್ ಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮ ಅವರ ಚುರುಕು ಬ್ಯಾಟಿಂಗ್ ಗಮನ ಸೆಳೆದಿದೆ. ಇನ್ನೊಂದೆಡೆ, ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಕುಲದೀಪ್ ಯಾದವ್ ಅವರ ಪರಿಣಾಮಕಾರಿ ಬೌಲಿಂಗ್ ಎದುರಾಳಿ ತಂಡಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಪಾಕಿಸ್ತಾನ ತಂಡವು ತಮ್ಮ ಪೇಸ್ ದಾಳಿಯಿಂದಲೇ ಪ್ರಸಿದ್ಧವಾಗಿದ್ದು, ಅವರ ಆರಂಭಿಕ ಓವರ್‌ಗಳು ನಿರ್ಣಾಯಕವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಂದಿನ ಪಂದ್ಯವು ಕೇವಲ ಫೈನಲ್ ಮಾತ್ರವಲ್ಲ, ಗೌರವದ ಹೋರಾಟವೂ ಹೌದು. ಭಾರತ–ಪಾಕಿಸ್ತಾನ ಪಂದ್ಯ ಎಂದರೆ ಕ್ರೀಡಾಂಗಣದಲ್ಲೇ ಅಲ್ಲ, ಕೋಟ್ಯಾಂತರ ಪ್ರೇಕ್ಷಕರ ಮನಸ್ಸುಗಳಲ್ಲಿ ಉಕ್ಕುವ ರಕ್ತಸಿಡಿಲಿನಂತಿದೆ. ಪಂದ್ಯ ನಡೆಯುತ್ತಿರುವ ಮೈದಾನದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಟಿಕೆಟ್‌ಗಳು ಈಗಾಗಲೇ ‘ಸೋಲ್ಡ್ ಔಟ್’ ಆಗಿವೆ.

ಅಭಿಮಾನಿಗಳು ಮೈದಾನದಲ್ಲಿ ರೋಚಕ ಹೋರಾಟ ಕಣ್ತುಂಬಿಸಿಕೊಳ್ಳಲು ಕಾಯುತ್ತಿದ್ದಾರೆ. ಯಾರೇ ಗೆದ್ದರೂ ಏಷ್ಯಾಕಪ್ ಇತಿಹಾಸದಲ್ಲಿ ಇದು ಇನ್ನೊಂದು ನೆನಪಿನ ದಿನವಾಗಿ ಉಳಿಯುವುದು ನಿಶ್ಚಿತ.

Leave a Reply

Your email address will not be published. Required fields are marked *