ಉಡುಪಿ-ಹನೀಫ್ ಪುತ್ತುಮೋನು ಟೆನಿಸ್ಬಾಲ್ ಕ್ರಿಕೆಟ್ ರಾಜ್ಯಮಟ್ಟದಲ್ಲಿ ಆ ದಿನಗಳಲ್ಲಿ ಮೆರೆದಾಡಿದ ಓರ್ವ ಮೇರು ಆಟಗಾರ.ಹುಟ್ಟೂರಾದ ಮುಲ್ಕಿ,ಪಡುಬಿದ್ರಿ,ಮಾರುತಿ ಉಳ್ಳಾಲ ತಂಡದ ಪರವಾಗಿ ಆಡಿ ಗೆಲುವಿನ ರೂವಾರಿಯಾಗಿ ಮೂಡಿದ ಹನೀಫ್,ಐಡಿಯಲ್ ಕ್ರಿಕೆಟ್ ಶಿವಮೊಗ್ಗ ತಂಡದಲ್ಲಿ ಹಲವಾರು ವರ್ಷಗಳ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದರು ಕಳೆದ 5 6 ತಿಂಗಳಿಂದ ತೀವ್ರ ಸ್ವರೂಪದ ಮಧುಮೇಹಕ್ಕೆ ಒಳಗಾಗಿ ಸಂಕಷ್ಟದ ಜೀವನ ನಡೆಸುತ್ತಿರುವ ಹನೀಫ್ ಪುತ್ತುಮೋನು ನೆರವಿಗಾಗಿ ಧಾವಿಸಿರೋದು ಅದೇ ಐಡಿಯಲ್ ಗೋಪಿ ಸಾರಥ್ಯದ ಐಡಿಯಲ್ ಕ್ರಿಕೆಟ್ ಶಿವಮೊಗ್ಗ ತಂಡ.
ಶಿವಮೊಗ್ಗ ನಗರ ಮಾಜಿ ಮಹಾನಗರ ಪಾಲಿಕೆ ಸದಸ್ಯ ಗೋಪಾಲಕೃಷ್ಣ.ಜಿ(ಐಡಿಯಲ್ ಗೋಪಿ) ನಾಯಕತ್ವದಲ್ಲಿ ತಂಡದ ಸದಸ್ಯರೆಲ್ಲರಿಂದ ದೇಣಿಗೆ ಸಂಗ್ರಹಿಸಿ,ಇಂದು ಕಾರ್ಕಳ ಕಾಬೆಟ್ಟಿನ ಹನೀಫ್ ನಿವಾಸಕ್ಕೆ ಆಗಮಿಸಿ ಹನೀಫ್ ರವರ ತಾಯಿಗೆ ಸುಮಾರು 1ಲಕ್ಷದ 17 ಸಾವಿರ ರೂ ನಗದು ಹಸ್ತಾಂತರಿಸಿದರು.
ಈ ಹಿಂದೆ ಕೂಡ ಐಡಿಯಲ್ ಕ್ರಿಕೆಟ್ ಶಿವಮೊಗ್ಗ ತಂಡ ತಮ್ಮೊಂದಿಗೆ ಆಡಿದ್ದ ಕಿಶೋರ್ ಅಕಾಲಿಕ ಮರಣದ ಸಂದರ್ಭದಲ್ಲೂ ಕೂಡ ಅವರ ಕುಟುಂಬಕ್ಕೆ ಆಧಾರವಾಗಿದ್ದರು.
ಐಡಿಯಲ್ ಕ್ರಿಕೆಟ್ ಶಿವಮೊಗ್ಗದ ಈ ನಡೆ ಎಲ್ಲಾ ತಂಡಗಳಿಗೂ ಮಾದರಿಯಾಗಬೇಕು,ತಂಡಕ್ಕಾಗಿ ಜೀವ ಸವೆಸುವ ಸದಸ್ಯರ ಕಷ್ಟ,ಸುಖದಲ್ಲಿ ತಂಡ ಭಾಗಿಯಾಗಬೇಕು ಎಂದು ಐಡಿಯಲ್ ಗೋಪಿ ತಿಳಿಸಿದರು.
ಈ ಸಂದರ್ಭ ಶಿವಮೊಗ್ಗ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಗೋಪಾಲಕೃಷ್ಣ ಜಿ (ಐಡಿಯಲ್ ಗೋಪಿ),
ಐಡಿಯಲ್ ಶಿವಮೊಗ್ಗ ತಂಡದ ಹಾಲಿ ಆಟಗಾರರಾದ
ಶೇಖ್ ಜಫ್ರುಲ್ಲಾ(ವಿಕ್ಕಿ),ವಕೀಲರು ಶ್ರೀನಿವಾಸ್,
ಜಗದೀಶ್ ಶೆಟ್ಟಿ, ಪುರುಷೋತ್ತಮ್ ,ಪರಮೇಶ್ ,
ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ ಉಪಸ್ಥಿತರಿದ್ದರು.