ಕ್ರಿಕೆಟ್ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

-

- Advertisment -spot_img

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

 

2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮೇಲುಗೈ ಸಾಧಿಸಿದ ಆರ್‌ಸಿಬಿ ಚಾಂಪಿಯನ್ ತಂಡದ ಪ್ರದರ್ಶನ ನೀಡಿತು.

ಗುಜರಾತ್ ನಾಯಕ ಶುಭ್‌ಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಎರಡನೇ ಇನ್ನಿಂಗ್ಸ್‌ನಲ್ಲಿ ಪರಿಣಾಮ ಬೀರುತ್ತದೆ ಎನ್ನುವ ನಿರೀಕ್ಷೆಯಲ್ಲಿ ತೆಗೆದುಕೊಂಡ ಈ ನಿರ್ಧಾರ ಬಳಿಕ ತಪ್ಪು ಲೆಕ್ಕಾಚಾರವಾಗಿ ಪರಿಣಮಿಸಿತು.

ಆರ್‌ಸಿಬಿಗೆ ವೆಂಕಟೇಶ್ ಅಯ್ಯರ್ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿ 7 ಎಸೆತಗಳಲ್ಲಿ 19 ರನ್ ಸಿಡಿಸಿದರು. ವಿರಾಟ್ ಕೊಹ್ಲಿ ಕೂಡ ಆರಂಭದಿಂದಲೇ ತಮ್ಮ ಛಾಪು ಮೂಡಿಸಿ 25 ಎಸೆತಗಳಲ್ಲಿ 43 ರನ್ ಗಳಿಸಿದರು. ದೇವದತ್ ಪಡಿಕ್ಕಲ್ ಕೂಡ ವೇಗವಾಗಿ ರನ್ ಕಲೆಹಾಕಿದರು. ಆದರೆ ಜೇಸನ್ ಹೋಲ್ಡರ್ ಒಂದೇ ಓವರ್‌ನಲ್ಲಿ ಕೊಹ್ಲಿ ಹಾಗೂ ಪಡಿಕ್ಕಲ್ ಅವರನ್ನು ಔಟ್ ಮಾಡಿ ಗುಜರಾತ್‌ಗೆ ಸ್ವಲ್ಪ ನೆಮ್ಮದಿ ನೀಡಿದರು.

ಆದರೆ ನಂತರ ನಾಯಕ ರಜತ್ ಪಾಟಿದಾರ್ ಹಾಗೂ ಕೃಣಾಲ್ ಪಾಂಡ್ಯ ಜೋಡಿ ಗುಜರಾತ್ ಬೌಲರ್‌ಗಳ ಮೇಲೆ ದಾಳಿ ನಡೆಸಿತು. ಕೃಣಾಲ್ 28 ಎಸೆತಗಳಲ್ಲಿ 43 ರನ್ ಗಳಿಸಿದರೆ, ಪಾಟಿದಾರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಯ ನಡುವೆ ಗುಜರಾತ್ ಬೌಲರ್‌ಗಳು ಸಂಪೂರ್ಣ ಕಂಗೆಟ್ಟರು.

ವಿಶೇಷವಾಗಿ ರಜತ್ ಪಾಟಿದಾರ್‌ ಅವರ ಸಿಕ್ಕಿದ್ದ ಹಲವು ಕ್ಯಾಚ್ ಅವಕಾಶಗಳನ್ನು ಗುಜರಾತ್ ಕೈಚೆಲ್ಲಿದ್ದು ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಆಯಿತು. ಕೊನೆಯವರೆಗೂ ಅಜೇಯರಾಗಿ ಉಳಿದ ಪಾಟಿದಾರ್ ಕೇವಲ 33 ಎಸೆತಗಳಲ್ಲಿ 93 ರನ್ ಸಿಡಿಸಿದರು. ಇದರಲ್ಲಿ 5 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಕೊನೆಯಲ್ಲಿ ಜಿತೇಶ್ ಶರ್ಮಾ 5 ಎಸೆತಗಳಲ್ಲಿ 15 ರನ್ ಸೇರಿಸಿದ ಪರಿಣಾಮ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಪರ್ವತದಂತ ಗುರಿ ನಿರ್ಮಿಸಿತು.

255 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ ಆರಂಭದಲ್ಲೇ ಆಘಾತ ಅನುಭವಿಸಿತು. ಸಾಯಿ ಸುದರ್ಶನ 14 ರನ್ ಗಳಿಸಿ ಔಟ್ ಆದರು. ನಂತರದ ಓವರ್‌ಗಳಲ್ಲಿ ಶುಭ್‌ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡ ಪರಿಣಾಮ ಗುಜರಾತ್ ಆರಂಭಿಕ ಕುಸಿತಕ್ಕೆ ಒಳಗಾಯಿತು.

ಪ್ರಮುಖ ಆಟಗಾರರು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರೆ, ರಾಹುಲ್ ತೆವಾಟಿಯಾ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಅವರು 43 ಎಸೆತಗಳಲ್ಲಿ 68 ರನ್ ಗಳಿಸಿದರೂ ಇತರರಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಗುಜರಾತ್ ತಂಡ 162 ರನ್‌ಗಳಿಗೆ ಆಲೌಟ್ ಆಯಿತು.

ಆರ್‌ಸಿಬಿ ಬೌಲಿಂಗ್‌ನಲ್ಲಿ ಜೇಕಬ್ ಡಫಿ ಪ್ರಮುಖ ಪಾತ್ರವಹಿಸಿದರು. ತಂಡಕ್ಕೆ ಮರು ಸೇರ್ಪಡೆಯಾದ ಬಳಿಕ ಪರಿಣಾಮಕಾರಿ ಪ್ರದರ್ಶನ ನೀಡಿದ ಅವರು 4 ಓವರ್‌ಗಳಲ್ಲಿ 3 ವಿಕೆಟ್ ಕಬಳಿಸಿದರು. ಭುವನೇಶ್ವರ್ ಕುಮಾರ್, ರಝಿಕ್ ಸಲಾಂದಾರ್ ಹಾಗೂ ಕೃಣಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಜೋಸ್ ಬಟ್ಲರ್ ಅವರ ಮಹತ್ವದ ವಿಕೆಟ್ ಅನ್ನು ಜೋಶ್ ಹೇಜಲ್‌ವುಡ್ ಪಡೆದರು.

ಈ ಗೆಲುವಿನೊಂದಿಗೆ ಆರ್‌ಸಿಬಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಗುಜರಾತ್ ಟೈಟನ್ಸ್‌ಗೆ ಇನ್ನೂ ಒಂದು ಅವಕಾಶ ಉಳಿದಿದೆ. ಅವರು ಕ್ವಾಲಿಫೈಯರ್-2ರಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಎದುರಿಸಿ ಮತ್ತೆ ಫೈನಲ್ ಪ್ರವೇಶಿಸಲು ಹೋರಾಡಲಿದ್ದಾರೆ.

LEAVE A REPLY

Please enter your comment!
Please enter your name here

2 × two =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

Retro Bet Online Casino: Quick Wins for the Busy Player

Retro Bet has carved out a niche for those who crave instant gratification and fast-paced gaming. If you’re someone...

Spinch Casino: Quick Spin Thrills für Fans des schnellen Spiels

1. Quick Burst Gaming: Warum kurze Sessions wichtig sindWenn die Uhr runterzählt, steigt der Adrenalinspiegel. Spieler, die kurze, hochintensive...

LevelUp Casino: Schnelle Gewinne und rasantes Action für den modernen Spieler

In der heutigen schnelllebigen Welt ist ein Casino, das Ihre Zeit respektiert, ein echtes Juwel. LevelUp Casino hat sich...
- Advertisement -spot_imgspot_img

BildBet Casino: Fast‑Track Slots für schnelle Gewinne

Wenn Sie unterwegs sind—zwischen Meetings, beim Zugfahren oder einfach während einer Mittagspause—bietet BildBet eine Möglichkeit, das Casino-Feeling zu erleben,...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

Must read

- Advertisement -spot_imgspot_img

You might also likeRELATED
Recommended to you