ಕುಂದಾಪುರ-ಸೆಪ್ಟೆಂಬರ್ 9-2023 ರಂದು ನಡೆದ “ಜೇಸಿಐ ಕುಂದಾಪುರ ಸಿಟಿ ಜೇಸಿ ಸಪ್ತಾಹ -2023” ಅಭಿನಂಧನಾ ಕಾರ್ಯಕ್ರಮದಲ್ಲಿ ಯುವ ಉದ್ಯಮಿ,ಸಮಾಜ ಸೇವಕ ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಗಂಗೊಳ್ಳಿಯ ಝಹೀರ್ ಅಹಮದ್ ನಾಖುದಾರವರನ್ನು “ಸಾಧಕ ಸನ್ಮಾನ” ರೂಪದಲ್ಲಿ ಗುರುತಿಸಿ ಸನ್ಮಾನಿಸಿಲಾಯಿತು.
ಕುಂದಾಪುರ ದ ಶ್ರೀ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೌರವ ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಆಸ್ಪತ್ರೆಯಾ ವೈದ್ಯಾಧಿಕಾರಿ ಡಾ. ನಾಗೇಶ್ ಸರ್, ಕುಂದಾಪುರದ ಠಾಣಾಧಿಕಾರಿಯಾದ ವಿನಯ್ ಕೊರಳಹಳ್ಳಿ ಸರ್, ಜೇಸಿ ಸೌಜನ್ಯ ಹೆಗಡೆ, ಕೆ ಆರ್ ನಾಯ್ಕ್, ಜೇಸಿ ರಾಘವೇಂದ್ರ ಚರಣ ನಾವಡ, ಜೇಸಿ ನಾಗೇಶ್ ನಾವಡ, ಜೇಸಿಐ ಕುಂದಾಪುರದ ಅಧ್ಯಕ್ಷರಾದ ಡಾಕ್ಟರ್ ಸೋನಿ, ಸ್ಥಾಪಕ ಅಧ್ಯಕ್ಷ ಜೇಸಿ ಹುಸೇನ್ ಹೈಕಾಡಿ, ಕ್ರೀಡಾ ಸಾಧಕರದ ಸತೀಶ್ ಖಾರ್ವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಕ್ರೀಡಾ ಪ್ರೋತ್ಸಾಹಕರಾಗಿ ಗುರುತಿಸಿಕೊಂಡ ಜಹೀರ್ ಅಹಮದ್ ನಾಖುದಾ ಅವರಿಗೆ ಸ್ಪೋರ್ಟ್ಸ್ ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಅಭಿನಂದನೆಗಳು…