
ಐಡಿಯಲ್ ಟ್ರೋಫಿ 2026 – ಸೀಸನ್ 3: ಕುಂದಾಪುರದಲ್ಲಿ 40 ಯಾರ್ಡ್ ಕ್ರಿಕೆಟ್
ಕುಂದಾಪುರ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ! ಕುಂದಾಪುರ ಪರಿಸರದ ಹಿರಿಯ ಸಂಸ್ಥೆ ಐಡಿಯಲ್ ಕುಂದಾಪುರ ವತಿಯಿಂದ,ಅನಿಲ್ ಖಾರ್ವಿ ಇವರ ಮುಂದಾಳತ್ವದಲ್ಲಿ “ಐಡಿಯಲ್ ಟ್ರೋಫಿ 2026 – ಸೀಸನ್ 3” ಹೆಸರಿನ 40 ಯಾರ್ಡ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.

ಈ ವಿಶಿಷ್ಟ ಟೂರ್ನಮೆಂಟ್ ಏಪ್ರಿಲ್ 4 ಮತ್ತು 5, 2026 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ 10 ಓವರ್ ನಾಕ್‌ಔಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ ಎಂಬುದು ವಿಶೇಷವಾಗಿದೆ.

ಟೂರ್ನಮೆಂಟ್‌ನಲ್ಲಿ ಮೊದಲ ಬಹುಮಾನವಾಗಿ ₹66,666/- ಮತ್ತು ದ್ವಿತೀಯ ಬಹುಮಾನವಾಗಿ ₹44,444/- ನಿಗದಿಪಡಿಸಲಾಗಿದ್ದು, ಆಟಗಾರರಲ್ಲಿ ಉತ್ಸಾಹ ಹೆಚ್ಚಿಸಿದೆ.
ಮೊದಲ ದಿನ (ಏಪ್ರಿಲ್ 4) ಪ್ರದೇಶವಾರು ಆಯ್ಕೆ ಮಾಡಿದ 8 ತಂಡಗಳು ಸ್ಪರ್ಧಿಸಲಿದ್ದು, ಎರಡನೇ ದಿನ (ಏಪ್ರಿಲ್ 5) ಓಪನ್ ವಿಭಾಗದಲ್ಲಿ ಮತ್ತೊಂದು 8 ತಂಡಗಳು ಭಾಗವಹಿಸಲಿವೆ.
ಈ ಪಂದ್ಯಾವಳಿಯು ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಪಂದ್ಯಗಳ ಮೇಳವನ್ನು ನೀಡಲಿದೆ.
ಹೆಚ್ಚಿನ ಮಾಹಿತಿಗಾಗಿ: 7760005783 ಅನ್ನು ಸಂಪರ್ಕಿಸಬಹುದು.




