14.6 C
London
Monday, September 9, 2024
Homeಕ್ರಿಕೆಟ್ಕೀನ್ಯಾ ಕ್ರಿಕೆಟ್ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ಹೆಡ್ ಕೋಚ್

ಕೀನ್ಯಾ ಕ್ರಿಕೆಟ್ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ಹೆಡ್ ಕೋಚ್

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಕರ್ನಾಟಕದ ಅಪ್ರತಿಮ ರಣಜಿ ಹೀರೋ, ರಾಜ್ಯದ ಕ್ರಿಕೆಟ್ ದಿಗ್ಗಜ, ಭಾರತ ಪರ ಐದು ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕನ್ನಡಿಗ ದೊಡ್ಡ ನರಸಯ್ಯ ಗಣೇಶ್, ಕೀನ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಕೀನ್ಯಾ ತಂಡವನ್ನು ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಂತೆ ಮಾಡುವುದು ತಮ್ಮ ಮೊದಲ ಗುರಿ ಎಂದು ದೊಡ್ಡ ಗಣೇಶ್ ಹೇಳಿದ್ದಾರೆ.

ಕೀನ್ಯಾ ತಂಡ ಇದುವರೆಗೆ ಒಟ್ಟು 4 ಏಕದಿನ ವಿಶ್ವಕಪ್ ಹಾಗೂ ಒಂದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದೆ. 1996, 1999, 2003 ಮತ್ತು 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದ ಕೀನ್ಯಾ, 2007ರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಭಾಗವಹಿಸಿತ್ತು. ಆದರೆ ಕಳೆದ 13 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಗಳಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗುತ್ತಾ ಬಂದಿದೆ. ಇದೀಗ ಕೀನ್ಯಾ ತಂಡದ ಕೋಚ್ ಆಗಿ ನೇಮಕಗೊಂಡಿರುವ ಕನ್ನಡಿಗ ದೊಡ್ಡ ಗಣೇಶ್, ಕೀನ್ಯಾ ತಂಡವನ್ನು ವಿಶ್ವಕಪ್ ಟೂರ್ನಿಗೆ ಮುನ್ನಡೆಸುವ ಗುರಿ ಹೊಂದಿದ್ದಾರೆ.

“1996, 1999, 2003, 2007 ಹಾಗೂ 2011ರ ವಿಶ್ವಕಪ್ ಟೂರ್ನಿಗಳಲ್ಲಿ ಕೀನ್ಯಾ ಆಡಿದ್ದನ್ನು ನಾನು ನೋಡಿದ್ದೇನೆ. ಆ ತಂಡದ ಆಟಗಾರರ ಬದ್ಧತೆ ಮತ್ತು ಪರಿಶ್ರಮವನ್ನೂ ನೋಡಿರುವೆ. ಕಳೆದ 10 ವರ್ಷಗಳಲ್ಲಿ ಏನಾಯಿತೋ ನನಗೆ ತಿಳಿಯದು. ಆದರೆ ಇತಿಹಾಸದ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಕೀನ್ಯಾದವರು ಯಾವಾಗಲೂ ಚಾಂಪಿಯನ್’ಗಳು” ಎಂದು 51 ವರ್ಷದ ದೊಡ್ಡ ಗಣೇಶ್ ಹೇಳಿದ್ದಾರೆ.

ಕರ್ನಾಟಕದ ರಣಜಿ ಹೀರೋಗಳಲ್ಲಿ ಒಬ್ಬರಾಗಿರುವ ದೊಡ್ಡ ಗಣೇಶ್, ಕರ್ನಾಟಕ ತಂಡ 1996, 1998 ಹಾಗೂ 1999ರಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ವೃತ್ತಿಜೀವನದಲ್ಲಿ ಒಟ್ಟು 104 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಬಲಗೈ ವೇಗಿ ದೊಡ್ಡ ಗಣೇಶ್ 365 ವಿಕೆಟ್’ಗಳನ್ನು ಪಡೆದಿದ್ದಾರೆ. ಲಿಸ್ಟ್ ಎ ಕ್ರಿಕೆಟ್’ನಲ್ಲಿ 89 ಪಂದ್ಯಗಳಿಂದ 128 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

1997ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದ ದೊಡ್ಡ ಗಣೇಶ್ 4 ಟೆಸ್ಟ್ ಪಂದ್ಯಗಳನ್ನಾಡಿದ್ದು 5 ವಿಕೆಟ್ ಪಡೆದಿದ್ದಾರೆ. ಅಲ್ಲದೆ, ಒಂದು ಏಕದಿನ ಪಂದ್ಯವಾಡಿ ಒಂದು ವಿಕೆಟ್ ಕೂಡ ಪಡೆದಿದ್ದಾರೆ.

ದೊಡ್ಡ ಗಣೇಶ್ ಅಂತರಾಷ್ಟ್ರೀಯ ಕ್ರಿಕೆಟ್ ತಂಡವೊಂದರ ಪ್ರಧಾನ ಕೋಚ್ ಆಗಿ ನೇಮಕಗೊಳ್ಳುತ್ತಿರುವುದು ಇದೇ ಮೊದಲು. ಈ ಹಿಂದೆ ಗಣೇಶ್ ಗೋವಾ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

ಕೀನ್ಯಾದ ನೈರೋಬಿಯಲ್ಲಿ ಸೆಪ್ಟೆಂಬರ್ 10ರಿಂ 23ರವರೆಗೆ ಐಸಿಸಿ ವಿಶ್ವಕಪ್ ಚಾಲೆಂಜ್ ಲೀಗ್ ನಡೆಯಲಿದ್ದು, ಕೀನ್ಯಾ ಕೋಚ್ ಆಗಿ ದೊಡ್ಡ ಗಣೇಶ್ ಅವರ ಅಭಿಯಾನ ಈ ಟೂರ್ನಿಯಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಕೀನ್ಯಾ ತಂಡದ ಜೊತೆ ಪಪುವಾ ನ್ಯೂಗಿನಿ, ಡೆನ್ಮಾರ್ಕ್, ಕುವೈಟ್, ಜೆರ್ಸಿ ಮತ್ತು ಕತಾರ್ ತಂಡಗಳು ಆಡಲಿದ್ದು, ಇದು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.

Latest stories

LEAVE A REPLY

Please enter your comment!
Please enter your name here

twelve + thirteen =