ಪ್ರತಿಷ್ಠಿತ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳಿಗೆ ನಾಲ್ಕು ತಂಡಗಳನ್ನು ಪ್ರಕಟಿಸಲಾಗಿದೆ. ಅಚ್ಚರಿಯ ವಿಷಯ ಏನೆಂದರೆ, ನಾಲ್ಕು ತಂಡಗಳಲ್ಲಿ ಒಂದರಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ನಾಯಕತ್ವ ನೀಡಲಾಗಿಲ್ಲ.
32 ವರ್ಷದ ಕೆ.ಎಲ್ ರಾಹುಲ್, ಪಂಜಾಬ್’ನ ಶುಭಮನ್ ಗಿಲ್ ನಾಯಕತ್ವದ ಟೀಮ್ ‘ಎ’ನಲ್ಲಿ ಸ್ಥಾನ ಪಡೆದಿದ್ದಾರೆ. ಟೀಮ್ ‘ಬಿ’ ತಂಡದ ನಾಯಕರಾಗಿ ಅಭಿಮನ್ಯು ಈಶ್ವರನ್, ಟೀಮ್ ‘ಸಿ’ ನಾಯಕರಾಗಿ ರುತರಾಜ್ ಗಾಯಕ್ವಾಡ್ ಮತ್ತು ಟೀಮ್ ‘ಡಿ’ ನಾಯಕರಾಗಿ ಶ್ರೇಯಸ್ ಅಯ್ಯರ್ ನೇಮಕಗೊಂಡಿದ್ದಾರೆ.
ಭಾರತ ಏಕದಿನ ತಂಡದ ಉಪನಾಯಕರಾಗಿದ್ದ ರಾಹುಲ್ ಅವರನ್ನು ಆ ಜವಾಬ್ದಾರಿಯಿಂದಲೂ ಮುಕ್ತಗೊಳಿಸಲಾಗಿದೆ. ಇದೀಗ ದುಲೀಪ್ ಟ್ರೋಫಿಯಲ್ಲೂ ನಾಯಕತ್ವ ನೀಡದಿರುವುದನ್ನು ನೋಡಿದರೆ, ರೋಹಿತ್ ಶರ್ಮಾ ಅವರ ನಂತರ ಟೆಸ್ಟ್ ತಂಡದ ನಾಯಕತ್ವವೂ ರಾಹುಲ್ ಕೈ ತಪ್ಪುವ ಸಾಧ್ಯತೆಯಿದೆ.
ದುಲೀಪ್ ಟ್ರೋಫಿ ಆಯ್ಕೆ ಮಾಡಲಾಗಿರುವ ನಾಲ್ಕು ತಂಡಗಳಲ್ಲಿ ಕರ್ನಾಟಕ ಒಟ್ಟು ಆರು ಆಟಗಾರರಿಗೆ ಸ್ಥಾನ ಸಿಕ್ಕಿದೆ. ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ ಕೃಷ್ಣ ಮತ್ತು ವಿದ್ವತ್ ಕಾವೇರಪ್ಪ ಟೀಮ್ ‘ಎ’ನಲ್ಲಿ ಸ್ಥಾನ ಪಡೆದಿದ್ದರೆ, ಟೀಮ್ ‘ಸಿ’ನಲ್ಲಿ ವೈಶಾಖ್ ವಿಜಯ್ ಕುಮಾರ್ ಮತ್ತು ಟೀಮ್ ‘ಡಿ’ನಲ್ಲಿ ದೇವದತ್ತ್ ಪಡಿಕ್ಕಲ್ ಸ್ಥಾನ ಪಡೆದಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿ ಸೆಪ್ಟೆಂಬರ್ 5ರಂದು ಆರಂಭವಾಗಲಿದ್ದು, ಆಂಧ್ರಪ್ರದೇಶದ ಅನಂತಪುರದಲ್ಲಿ ಮತ್ತು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.
ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳಿಗೆ ಆಯ್ಕೆ ಮಾಡಲಾಗಿರುವ ತಂಡಗಳು ಹೀಗಿವೆ:
ಟೀಮ್ A: ಶುಭಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ ಜುರೆಲ್, ಕೆ.ಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಆವೇಶ್ ಖಾನ್, ವಿದ್ವದ್ ಕಾವೇರಪ್ಪ, ಕುಮಾರ್ ಕುಶಾಗ್ರ, ಶಾಶ್ವತ್ ರಾವತ್
ಟೀಮ್ B: ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಮುಕೇಶ್ ಕುಮಾರ್, ರಾಹುಲ್ ಚಹರ್, ಆರ್.ಸಾಯಿ ಕಿಶೋರ್, ಮೋಹಿತ್ ಅವಸ್ಥಿ, ಎನ್.ಜಗದೀಶನ್.
ಟೀಮ್ C: ರುತುರಾಜ್ ಗಾಯಕ್ವಾಡ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್, ಸೂರ್ಯಕುಮಾರ್ ಯಾದವ್, ಬಾಬಾ ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತರ್, ಉಮ್ರಾನ್ ಮಲಿಕ್, ವೈಶಾಖ್ ವಿಜಯ್ ಕುಮಾರ್, ಅನ್ಶುಲ್ ಖಂಬೋಜ್, ಹಿಮಾನ್ಶು ಚೌಹಾಣ್, ಮಯಾಂಕ್ ಮಾರ್ಕಂಡ, ಆರ್ಯನ್ ಜುಯಲ್, ಸಂದೀಪ್ ವಾರಿಯರ್.
ಟೀಮ್ D: ಶ್ರೇಯಸ್ ಅಯ್ಯರ್ (ನಾಯಕ), ಅಥರ್ವ ತೈದೆ, ಯಶ್ ದುಬೆ, ದೇವದತ್ತ್ ಪಡಿಕ್ಕಲ್, ಇಶಾನ್ ಕಿಶನ್, ರಿಕಿ ಭುಯಿ, ಸರಾನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್ ಗುಪ್ತ, ಕೆ.ಎಸ್ ಭರತ್, ಸೌರಭ್ ಕುಮಾರ್.