ಬೆಂಗಳೂರು-ಐತಿಹಾಸಿಕ ಕೆ.ಟಿ‌.ಪಿ.ಎಲ್ ಕಿರೀಟ ಯಾರ ಮುಡಿಗೆ……..!!!

ಬೆಂಗಳೂರು-ಐತಿಹಾಸಿಕ ಕೆ.ಟಿ‌.ಪಿ.ಎಲ್ ಕಿರೀಟ ಯಾರ ಮುಡಿಗೆ……..!!!
K.T.P.L ಅಂತಿಮ ದಿನ-ರೋಚಕ ಹಣಾಹಣಿ
ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಐತಿಹಾಸಿಕ ಕೆ‌.ಟಿ‌.ಪಿ‌.ಎಲ್ ಅರ್ಹತಾ ಸುತ್ತಿನ ಪಂದ್ಯಗಳು ಇಂದು ಮಧ್ಯಾಹ್ನದಿಂದ ಪ್ರಾರಂಭವಾಗಲಿದೆ‌.
ಮಳೆಯ ನಡುವೆಯೂ ಆಯೋಜಕರ ಶ್ರಮದಿಂದ ಲೀಗ್ ಹಂತದ ಪಂದ್ಯಾಟಗಳು ಮುಕ್ತಾಯ ಕಂಡಿದ್ದು.ರಾಕರ್ಸ್ ರಾಗಿಗುಡ್ಡ,ಮಟ್ಕಲ್ ತುಮಕೂರು,ಕ್ರಿಶಾ ಕುಂದಾಪುರ ಮತ್ತು ನಾಗಾ ಇಲೆವೆನ್ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ.
ಚಾಂಪಿಯನ್ಸ್ ಲೀಗ್ ಅರ್ಹತಾ ಸುತ್ತಿನ ಪಂದ್ಯಗಳು ಇಂದು  ಸೋಮವಾರ ಬೆಳಿಗ್ಗೆ ನಡೆಯುತ್ತಿದ್ದು,ಮಧ್ಯಾಹ್ನದ ಬಳಿಕ 1 ಕ್ವಾಲಿಫೈಯರ್,2 ಎಲಿಮಿನೇಟರ್ ಬಳಿಕ ಕೆ‌.ಟಿ‌.ಪಿ.ಎಲ್ ಫೈನಲ್ ಮತ್ತು ಚಾಂಪಿಯನ್ಸ್ ಲೀಗ್ ಫೈನಲ್ ನಡೆಯಲಿದೆ.
ಅದ್ಧೂರಿಯ ಸಮಾರೋಪ ಸಮಾರಂಭದ ವೇದಿಕೆಯಲ್ಲಿ,ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

Leave a Reply

Your email address will not be published. Required fields are marked *