ಕೆ.ಟಿ.ಪಿ.ಎಲ್ 13 ನೇ ಪಂದ್ಯದಲ್ಲಿ ನಾಗಾ ಇಲೆವೆನ್,ತ್ರಿಶೂಲ್ ಸೇನಾ ಮಡಿಕೇರಿ ತಂಡವನ್ನು ಸೋಲಿಸುವ ಮೂಲಕ ತನ್ನ 2 ನೇ ಗೆಲುವನ್ನು ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ತ್ರಿಶೂಲ್ ಸೇನಾ,ನಸ್ರು 12,ಮೊಹ್ಸಿನ್ 10,ರಮೇಶ್ ಥಾಪಾ 13 ರನ್ ಸಹಾಯದಿಂದ ನಿಗದಿತ 8 ಓವರ್ ಗಳಲ್ಲಿ 53 ರನ್ ಪೇರಿಸಿತ್ತು.
ಚೇಸಿಂಗ್ ವೇಳೆ ನಾಗಾ ಇಲೆವೆನ್ ಆರಂಭಿಕ ಆಟಗಾರ ಡೇವಿಡ್ 4 ಬೌಂಡರಿಗಳ ಸಹಿತ 32 ರನ್,ಯಾಸಿನ್ 12 ರನ್ ನೆರವಿನಿಂದ 8 ವಿಕೆಟ್ ಗಳ ಜಯ ದಾಖಲಿಸಿದೆ.
ಡೇವಿಡ್ ಅರ್ಹವಾಗಿ ಪಂದ್ಯಶ್ರೇಷ್ಟ ಗೌರವಕ್ಕೆ ಪಾತ್ರರಾದರು.