Categories
ಕ್ರಿಕೆಟ್

ಏಷ್ಯಾ ಕಪ್-ಭಾರತ Vs ಪಾಕಿಸ್ತಾನ ಪಂದ್ಯದ ಮುನ್ನೋಟ

ಕ್ರಿಕೆಟ್ ಲೋಕದ ಬದ್ದ ವೈರಿಗಳ ಮಹಾ ಕದನ, 166 ಕೋಟಿ ಜನಕ್ಕೆ ಕಿಕ್ಕೇರಿಸುವ ಹೈ ವೋಲ್ಟೇಜ್ ಇಂಡೋ ಪಾಕ್ ಪಂದ್ಯ ಕೊನೆಗೂ ಬಂದಿದೆ. ಬಹಳಾ ದಿನಗಳ ನಂತರ ಕ್ರಿಕೆಟ್ ನ ಸ್ಟಾರ್ ಗಳಾದ ಬುಮ್ರಾ, ಬಾಬರ್, ಕೊಹ್ಲಿ, ರೌಫ್,ಶಾಹೀನ್ , ರೋಹಿತ್ ಮುಖಾಮುಖಿ ಆಗೋದನ್ನ  ಕ್ರಿಕೆಟ್ ಲೋಕ ಕಣ್ತುಂಬಿ ಕೊಳ್ಳುತ್ತೆ. ಕ್ರಿಕೆಟ್ ನ ಶಿಶು ನೇಪಾಳವನ್ನ ಈಜಿಯಾಗಿ ಸೋಲಿಸಿ ಪಾಕ್ ಬರ್ತಾ ಇದ್ದಾರೆ.  ಕಳೆದ ಬಾರಿ ಗ್ರೂಪ್ ಹಂತದಲ್ಲಿ ಹೊರ ಬಿದ್ದಿದ್ದಕ್ಕೆ ಸೇಡು ತೀರಿಸೋಕೆ ರೋಹಿತ್ ಪಡೆ ಕೂಡ ಕಾಯ್ತಾ ಇದೆ.
ಹಾಗಿದ್ರೆ ದಾಯಾದಿಗಳ ಈ ಮಹಾ ಕದನ ಹೇಗಿರುತ್ತೆ, ಎರಡು ಟೀಮ್ ಗಳು ಹೇಗಿರಲಿವೆ, ಸ್ಟ್ರಾಟರ್ಜಿ ಏನಾಗಿರಲಿವೆ, ಪಿಚ್ ಹೇಗಿರುತ್ತೆ, ಮ್ಯಾಚ್ ನಡೆಯುತ್ತಾ ಇಲ್ವಾ
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇವತ್ತಿನ ಮ್ಯಾಚ್ ಸಾಕ್ಷಿಯಾಗಲಿದೆ.
ಭಾರತ ಪಾಕ್ ಪಂದ್ಯ ಯಾಕೆ  ಹೈ ವೋಲ್ಟೇಜ್ ಪಂದ್ಯ ಅನಿಸುತ್ತೆ ಅಂದ್ರೆ ನೀವು ಎರಡೂ ತಂಡ ಲಾಸ್ಟ್ ಟೈಮ್ ಯಾವಾಗ ODI ಆಡಿದ್ರು ನೋಡಿ.  2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫಖರ್ ಜಮಾನ್ ಸೆಂಚುರಿ ಹೊಡೆದು ಬುಮ್ರಾ ನೋಬಾಲ್ ಹಾಕಿದ್ದು ನಮಗೆ 6 ವರ್ಷಗಳ ಹಿಂದೆ ಅನಿಸಬಹುದು. ಆದ್ರೆ ಅದಾದ್ ಮೇಲೆ ODI ನಲ್ಲಿ ಎರಡು ಟೀಮ್ ಗಳು ಮುಖಾಮುಖಿಯಾಗಿದ್ದು ಕೇವಲ ಮೂರೇ ಸಲ. ಆದ್ರೆ ಕಳೆದ ಮೂರು ಮ್ಯಾಚ್ ಭಾರತ ಗೆದ್ದಿತ್ತು ಅದು ಬೇರೆ ವಿಚಾರ. ಕೊನೆ ಮ್ಯಾಚ್ ನಡೆದಿದ್ದು 2019ರ ವಿಶ್ವಕಪ್ ನಲ್ಲಿ. ಅಲ್ಲೂ ರೋಹಿತ್ ಸೆಂಚುರಿ ಹೊಡೆದು ಭುವನೇಶ್ವರ್ ಕುಮಾರ್ ಇಂಜುರಿ ಆದಾಗ ಬಂದಂತಹ  ವಿಜಯ್ ಶಂಕರ್ ಫಸ್ಟ್ ಬಾಲ್ ವಿಕೆಟ್ ತೆಗೆದು ಭಾರತ ಗೆದ್ದಿತ್ತು. ಸೊ ಈ ರೇರಿಟಿ ಪ್ಲಸ್ ಐಕಾನಿಕ್ ಮೊಮೆಂಟ್ ಗಳಿಂದಾಗಿ . ಜೊತೆಗೆ ಎರಡು ದೇಶಗಳ ನಡುವಿನ ಹಿಸ್ಟರಿಯಿಂದಾಗಿ ಇಂಡೋ ಪ್ಯಾಕ್ ಮ್ಯಾಚ್ ಎಲ್ಲಾ ಮ್ಯಾಚ್ ಗಳಿಗಿಂತ ಇಂಪಾರ್ಟೆಂಟ್ ಮ್ಯಾಚ್ ಆಗತ್ತೆ. ಬೇರೆಲ್ಲಾ ಟೀಮ್ ಗಳು ಮುಖಾಮುಖಿಯಾದಾಗ ಕ್ರಿಕೆಟ್ ಪ್ಲೇಯರ್ಸ್ ಆಡ್ತಾ ಇರ್ತಾರೆ. ಆದ್ರೆ ಇಲ್ಲಿ ಕೇವಲ
ಕ್ರಿಕೆಟ್ ಪ್ಲೇಯರ್ಸ್ ಆಡ್ತಾ ಇರೋದಿಲ್ಲ. ಆ  ಕ್ರಿಕೆಟ್ ಪ್ಲೇಯರ್ಸ್ ಆಯಾ ದೇಶಗಳನ್ನ ಪ್ರತಿನಿಧಿಸೋ ಸೋಲ್ಜರ್ ಗಳಂತೆ ಆಡ್ತಾ ಇರ್ತಾರೆ. ಅವರು ಕ್ರಿಕೆಟೆ ಆಡ್ತಾ ಇರ್ತಾರೆ. ನೋಡುವವರ ಕಣ್ಣಿಗೆ ಅವರು ಸೋಲ್ಜರ್ಸ್ ತರಹ ಕಾಣ್ತಾ ಇರ್ತಾರೆ. ಎರಡು ರಾಷ್ಟ್ರಗಳ ನಡುವಿನ ಯುದ್ಧದಂತೆ ಜನ ಇದನ್ನ ಫೀಲ್ ಮಾಡ್ಕೋತಿರ್ತಾರೆ.
ಸದ್ಯ ಇವತ್ತು ಅಲ್ಲಿ ನಡಿತಾ ಇರೋದು ಹದಿನಾರನೇ ಆವೃತ್ತಿಯ ಏಷ್ಯಾ ಕಪ್ ನ ಮೂರನೇ ಮ್ಯಾಚ್. ಈ ಹಿಂದೆ ಏಷ್ಯಾ ಕಪ್ 14 ಬಾರಿ ಏಕದಿನ ಫಾರ್ಮ್ಯಾಟ್ ನಲ್ಲಿ, ಎರಡು ಬಾರಿ T20 ಫಾರ್ಮ್ಯಾಟ್ ನಲ್ಲಿ ನಡೆದಿತ್ತು. ಮತ್ತೆ ಈ ಬಾರಿ ಏಕದಿನ ಫಾರ್ಮ್ಯಾಟ್ ನಲ್ಲಿ ನಡಿತಾ ಇದೆ. ಗ್ರೂಪ್ Aನ ಈ ಪಂದ್ಯ ಪಾಕಿಸ್ತಾನದಿಂದ ಆತಿಥ್ಯವನ್ನ ಗುತ್ತಿಗೆ ಪಡೆದಿರುವಂತಹ ಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಮೈದಾನದಲ್ಲಿ ಮಧ್ಯಾಹ್ನ 3:00 ಗಂಟೆಗೆ ನಡಿತಾ ಇದೆ. ಪಾಕಿಸ್ತಾನಕ್ಕೆ ಇದು ಎರಡನೇ ಮ್ಯಾಚ್. ಈಗಾಗಲೇ ಹೇಳಿದ ಹಾಗೆ ಉದ್ಘಾಟನಾ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೇಪಾಳವನ್ನ ಪಾಕ್ ಈಸಿಯಾಗಿ ಸೋಲಿಸಿ ಬರ್ತಾ ಇದೆ. ಆದರೆ ಭಾರತಕ್ಕೆ ಇದು ಫಸ್ಟ್ ಮ್ಯಾಚ್. ಈ ಹಿಂದೆ ಭಾರತ ಪಾಕ್ ಪಂದ್ಯ ಅಂದ್ರೆ ಭಾರತದ ಬ್ಯಾಟರ್ಸ್ ವರ್ಸಸ್ ಪಾಕ್ ಬೌಲರ್ಸ್ ಅಂತ ಇರ್ತಾ ಇತ್ತು. ಆದ್ರೆ ಈಗ ಹಾಗಲ್ಲ. ಭಾರತದಲ್ಲಿ ಭಯಂಕರ ವೇಗಿಗಳು ಬಂದಿದ್ದಾರೆ. ಭಾರತದಲ್ಲೂ ಒಳ್ಳೆಯ ಬ್ಯಾಟರ್ಸ್ ಗಳು ಇದ್ದಾರೆ. ಜೊತೆಗೆ ಇನ್ನೊಂದು ತಿಂಗಳಲ್ಲೇ ವರ್ಲ್ಡ್ ಕಪ್ ಕೂಡ ಇರೋದ್ರಿಂದ ಈ ಮ್ಯಾಚ್ ನ ಹೀಟ್, ಮಹತ್ವ ಇನ್ನಷ್ಟು ಜಾಸ್ತಿಯಾಗಿದೆ.
ಟೀಮ್ ಇಂಡಿಯಾ ವನ್ನ ನೋಡೋದಾದ್ರೆ ಬಹಳ ದಿನಗಳ ನಂತರ ಭಾರತ ತನ್ನ ಪೂರ್ಣ ಪ್ರಮಾಣದ ಟೀಮ್ ಅನ್ನ ಇಲ್ಲಿ ಕಣಕ್ಕೆ ಇಳಿಸ್ತಾ ಇದೆ. ಗಾಯದ ನಂತರ ಬುಮ್ರಾ , ಅಯ್ಯರ್ ಮೊದಲ ಬಾರಿಗೆ ಟೀಮ್ ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಆರಂಭಿಕನಾಗಿ ಶುಭಮನ್ ಗಿಲ್ ಇರ್ತಾರೆ. ಪಾಕಿಸ್ತಾನ ವಿರುದ್ಧ ಭಾರತ ಮೇಲುಗೈ ಸಾಧಿಸಬೇಕು ಅಂತ ಹೇಳಬೇಕಾದರೆ ಫಾಕ್ ವೇಗದ ಬೌಲರ್ ಗಳ ವಿರುದ್ಧ ಕಂಟ್ರೋಲ್ ಸಾಧಿಸಬೇಕು. ಅದರಲ್ಲೂ ಪವರ್ ಪ್ಲೇ ಅವಧಿಯಲ್ಲಿ ಭಾರತ ಪಾಕ್ ಬೌಲರ್ ಗಳನ್ನ ಹೇಗೆ ಫೇಸ್ ಮಾಡುತ್ತೆ ಅನ್ನೋದು ನಿರ್ಣಾಯಕ ವಾಗುತ್ತೆ. ಹಾಗಾಗಿ ಆರಂಭಿಕರಾಗಿ ರೋಹಿತ್ ಶರ್ಮಾ ಗೆ ಸಾಥ್ ನೀಡಲಿರೋ ಶುಭಮನ್ ಗಿಲ್ ಈ ಪಂದ್ಯದಲ್ಲಿ ಪಾಕ್ ನ ಮಾರಕ ವೇಗಿಗಳಿಗೆ ಭರ್ಜರಿ ಪ್ರತ್ಯುತ್ತರ ಕೊಡೋ ಆತ್ಮವಿಶ್ವಾಸ ದಲ್ಲಿದ್ದಾರೆ. ಉತ್ತಮ ಲಯದಲ್ಲಿರೋ  ಗಿಲ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಎಲ್ಲಾ ಸಾಮರ್ಥ್ಯವನ್ನ ಹೊಂದಿದ್ದಾರೆ. ಇವರ ಜೊತೆಗೆ ಹಿಂದೆ ಎಡಗೈ ವೇಗಿಗಳ ವಿರುದ್ಧ ಸ್ವಲ್ಪ ವೀಕ್ ನೆಸ್ ತೋರಿಸ್ತಾ ಇದ್ದ ರೋಹಿತ್ ಈ ಬಾರಿ ಪಾಕ್ ನ ಶಾಹೀನ್ ಶಾ ಅಫ್ರಿದಿ  ವಿರುದ್ಧ ಹೇಗೆ ಆಡ್ತಾರೆ ಅಂತ ನೋಡಬೇಕಾಗಿದೆ. ರೋಹಿತ್ ಫಾರ್ಮ್ ಕಳ್ಕೊಂಡ್ರೆ ಉಳಿದ ಬ್ಯಾಟರ್ಸ್ ಗಳ ಬಗ್ಗೆ ನಾವು ನೋಡದೆ ಬೇಡ. ಇನ್ನು ಪಾಕ್ ವಿರುದ್ಧ ಕೊಹ್ಲಿಯ ಪರ್ಫಾರ್ಮೆನ್ಸ್ ಬಗ್ಗೆ ಅಂತೂ ನಿಮಗೆ ಗೊತ್ತೇ ಇದೆ. ಅದರ ಬಗ್ಗೆ ಜಾಸ್ತಿ ಹೇಳೋ ಅಗತ್ಯ ಇಲ್ಲ. ವಿರಾಟ್ ಕೊಹ್ಲಿ ಪಾಕ್ ವಿರುದ್ಧ ನಿಂತಾಗ ಪ್ರತಿ ಸಾರಿ ಚಿಂಧಿ ಉಡಾಯಿಸುತ್ತಾರೆ. ಇನ್ನು ಈ ಏಷ್ಯಾ ಕಪ್ ಶ್ರೇಯಸ್ ಅಯ್ಯರ್ ಮತ್ತು ಕೆ ಎಲ್ ರಾಹುಲ್ ಅವರ ಕಮ್ ಬ್ಯಾಕ್ ಗೆ ವೇದಿಕೆ ಆಗಬೇಕಾಗಿತ್ತು. ಆದರೆ ರಾಹುಲ್ ಇನ್ನೂ ಫಿಟ್ ಆಗದೆ ಇರೋದ್ರಿಂದ ಎರಡು ಪಂದ್ಯಗಳಲ್ಲಿ ಕಾಣಿಸಿಕೊಳ್ತಾ ಇಲ್ಲ. ಆದರೇ ಶ್ರೇಯಸ್ ಶ್ರೇಯಸ್ ಅಯ್ಯರ್  ಆಡ್ತಾರೆ. ಭಾರತಕ್ಕೆ ನಂಬರ್ ಫೋರ್ ಯಾವಾಗ್ಲೂ ಕಾಡ್ತಾ ಇದೆ. ಆದ್ರೆ ಶ್ರೇಯಸ್ ಅಯ್ಯರ್ ಇರೋದ್ರಿಂದ ಆ ಚಿಂತೆ ಇಲ್ಲ.  ಯಾಕಂದ್ರೆ ನಂಬರ್ ಫೋರ್ ಜಾಗದಲ್ಲಿ ಶ್ರೇಯಸ್ ಅಯ್ಯರ್ ಕೇವಲ ಭಾರತ ಬ್ಯಾಟರ್ಸ್ ಗಳಿಗೆ ಅಷ್ಟೇ ಅಲ್ಲ,  ವಿಶ್ವಕಪ್ ಆಡೋ 10 ತಂಡಗಳಲ್ಲಿ ಬೆಸ್ಟ್ ನಂಬರ್ಸ್ ಹೊಂದಿದ್ದಾರೆ. 2019ರ ವಿಶ್ವಕಪ್ ನಂತರ ಅಯ್ಯರ್ ಈ ಸ್ಥಾನದಲ್ಲಿ 47.35ರ ಆವರೇಜ್ ನಲ್ಲಿ 94.37ರ ಸ್ಟ್ರೈಕ್ ರೇಟ್ ನಲ್ಲಿ 805 ರನ್ ಗಳಿಸಿದ್ದಾರೆ. ಬೇರೆ ಯಾರು ಈ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ರಷ್ಟು ಒಳ್ಳೆಯ ಎವರೇಜ್, ಹೆಚ್ಚು ಸೆಂಚುರಿ ಹೊಂದಿಲ್ಲ. ಇನ್ನು  ರಾಹುಲ್ ಅಬ್ಸೆಂಟ್ ಆಗಿರೋದ್ರಿಂದ ಇಶಾನ್ ಕಿಶನ್ ರವರ ಜವಾಬ್ದಾರಿ ಹೆಚ್ಚಾಗುತ್ತೆ.
ಕೆ ಎಲ್ ರಾಹುಲ್ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗೋ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಸ್ಥಾನ ಪಡಿಯೋದು ಖಚಿತ. ವೈಟ್ ಬಾಲ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿರೋ ಇಶಾನ್ ಕಿಶನ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನವೇ ಇಲ್ಲ. ಹಾಗಾಗಿ ಪಾಕಿಸ್ತಾನದ ವಿರುದ್ಧ ಹೈ ವೋಲ್ಟೇಜ್ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಾಗ ಅದನ್ನು ಎರಡು ಕೈಯಲ್ಲಿ ಬಾಚಿ ಕೊಳ್ಳುವ ಸಾಮರ್ಥ್ಯ ಈ ಯುವ ಆಟಗಾರನಿಗೆ ಇದೆ. ಅದನ್ನು ಯೂಸ್ ಮಾಡಬೇಕು ಅಷ್ಟೇ. ಭಾರತದ ಸ್ಟಾರ್ ಆಟಗಾರರ ವಿರುದ್ಧ ಪಾಕ್ ಬೌಲರ್ ಗಳು  ವಿಶೇಷ ರಣತಂತ್ರಗಳನ್ನು ಹೆಣೆಯುತ್ತಿರುವಾಗ ಅವುಗಳಿಗೆ ಟಕ್ಕರ್ ಕೊಟ್ಟು ನಿದ್ದೆಗೆಡಿಸುವ ಸಾಮರ್ಥ್ಯ ಇಶಾನ್ ಕಿಶನ್ ಅವರಿಗೆ ಇದೆ, ಎಕ್ಸ್ ಫ್ಯಾಕ್ಟರ್ ತರಹ ಇವರು ಕ್ಲಿಕ್ ಆಗಿಬಿಟ್ರೆ. ಹಾಗಾಗಿ ಈ ಪಂದ್ಯದಲ್ಲಿ ಇಶಾನ್ ಕಿಶನ್ ಮೇಲೆ ಅಭಿಮಾನಿಗಳು ಕೂಡ ಬಹಳ ಹೋಪ್ ಇಟ್ಟುಕೊಂಡಿದ್ದಾರೆ.
ಉಳಿದಂತೆ ನಂಬರ್ 6, ನಂಬರ್ 7 ನಲ್ಲಿ ಆಲ್ ರೌಂಡರ್ ಗಳಾದಂತಹ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿಯುತ್ತಾರೆ. ಪಾಕಿಸ್ತಾನ ತಂಡ ಬೌಲಿಂಗ್ ನಲ್ಲಿ ಎಷ್ಟು ಸ್ಟ್ರಾಂಗ್ ಆಗಿದೆಯೋ ಬ್ಯಾಟಿಂಗ್ ವಿಭಾಗದಲ್ಲೂ ಅಷ್ಟೇ ಬ್ಯಾಲೆನ್ಸ್ಡ್ ಆಗಿದೆ. ಟೀಮ್ ನಲ್ಲಿ ಸ್ಥಿರ ಪ್ರದರ್ಶನ ಕೊಡೊ ಸಾಮರ್ಥ್ಯ  ಇರೋ ಹಲವು ಆಟಗಾರರು ಇದ್ದಾರೆ ಪಾಕಿಸ್ತಾನದಲ್ಲಿ. ಪಾಕ್ ನ ಲೆಕ್ಕಾಚಾರ ತಲೆಕೆಳಗೆ ಆಗಿಸೋ ಸಾಮರ್ಥ್ಯವಿರೋ ಬೌಲರ್ ಗಳ ಪಡೆಯೇ ಇದ್ರು ಸದ್ಯ ಸದ್ದಿಲ್ಲದೆ ಆಘಾತ ಕೊಡೊ  ಆಟಗಾರ ಅಂದ್ರೆ ಅದು ಕುಲದೀಪ್ ಯಾದವ್. ಇತ್ತೀಚಿನ ದಿನಗಳಲ್ಲಿ ತಮ್ಮ ಅಮೋಘ ಬೌಲಿಂಗ್ ಮೂಲಕ ಗ ಮನ ಸೆಳೆದಿದ್ದಾರೆ.  ಪಾಕ್ ಗೆ ದೊಡ್ಡ ಆಘಾತ ಕೊಟ್ರೆ ಆಶ್ಚರ್ಯ ಇಲ್ಲ. ಪಲ್ಲೆಕೆಲೆಯ ನಿಧಾನಗತಿಯ ಪಿಚ್ ನ ಲಾಭವನ್ನು ಬಳಸಿಕೊಂಡು ಮ್ಯಾಚ್ ಗೆಲ್ಲಿಸೋ ಸಾಮರ್ಥ್ಯವನ್ನು ಕುಲದೀಪ್ ಯಾದವ್  ಡೆಫಿನೇಟ್ಲಿ ಹೊಂದಿದ್ದಾರೆ. ಅದರಂತೆ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಕೆ ಪ್ಲೇಯರ್ ಆಗ್ತಾರೆ.
ಎರಡು ತಂಡಗಳಿಗೂ ಚಿಂತೆ ಇರೋದು ಅದಕ್ಕೂ ಭಾರತಕ್ಕೆ ಚಿಂತೆ  ಪಾಕ್ ಮೇಲೆ ಅಲ್ಲ. ವರುಣ ದೇವನ ಮೇಲೆ, ಯಾಕಂದ್ರೆ ಭಾರತ ಪಾಕ್ ಮಧ್ಯೆ ಮ್ಯಾಚ್ ನಡೆಯೋ  ಕ್ಯಾಂಡಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. 70 ರಿಂದ 90% ನಷ್ಟು ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ನಿರೀಕ್ಷೆ ಇದ್ದು ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ತಣ್ಣೀರು ಎರಚುವ ಜೋರು ತುಂಬಾ ಜೋರೇ ಇದೆ. ಈ ಕ್ಷಣಕ್ಕೆ ಮಳೆ ಬಂದು ಮ್ಯಾಚ್ ಹಾಳು ಆಗೋ ಚಾನ್ಸ್ ಜಾಸ್ತಿ ಕಾಣಿಸ್ತಾ ಇದೆ.  ಈಗಾಗಲೇ ಲಂಕಾದ ಮಾಧ್ಯಮಗಳು ಈ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗೋದು ಗ್ಯಾರಂಟಿ ಅಂತ ಆಲ್ ರೆಡಿ ಅವರು ಡಿಸಿಷನ್ ತಗೊಂಡು ಆಗಿದೆ.  ಆದ್ರೆ ಒಂದು ಹೋಪ್ ಹಿಡ್ಕೋಳ್ ಬಹುದು ಅಭಿಮಾನಿಗಳು. ಏನು ಅಂದ್ರೆ ಹವಾಮಾನ ಮುನ್ಸೂಚನೆ ಯಾವಾಗಲೂ ಸರಿ ಆಗೋಲ್ಲ.  ಕೆಲವೊಂದು ಸಲ ಅದು ರಾಂಗ್ ಆಗಿ ಬಿಡುತ್ತೆ. ಮಳೆ ಬಾರದೆ ಇರಲಿ,  ಹವಾಮಾನ ಮುನ್ಸೂಚನೆ ಎಡವಟ್ಟಾಗಲಿ. ತಪ್ಪಾಗಲಿ ಅನ್ನೋ ಹೋಪ್,  ಆಸೆಯನ್ನ ಫ್ಯಾನ್ಸ್ ಸದ್ಯಕ್ಕೆ ಇಟ್ ಕೊಳ್ತಾ ಇದ್ದಾರೆ. ಪಂದ್ಯ ರದ್ದಾದರೆ ಒಂದು ಅಂಕ ಪಡೆದು ಸೂಪರ್ ಫೋರ್ ಗೆ ಪಾಕಿಸ್ತಾನ ಪ್ರವೇಶ ಪಡೆಯಲಿದೆ.
ಇನ್ನು ಕೊಹ್ಲಿ ಈ ಮ್ಯಾಚ್ ನಲ್ಲಿ  ಸೆಂಚುರಿ ಹೊಡೆದು 102 ರನ್ ಗಳಿಸಿದ್ರೆ  ODIನಲ್ಲಿ 13000 ರನ್ ಗಳಿಸಿದ ವಿಶ್ವದ ಐದನೇ ಬ್ಯಾಟರ್ ಆಗ್ತಾರೆ.  ಜೊತೆಗೆ ತೆಂಡೂಲ್ಕರ್ ಗಿಂತ ಫಾಸ್ಟ್ ಆಗಿ ರೀಚ್ ಆದ ಹಾಗೆ ಆಗುತ್ತೆ.  ರವೀಂದ್ರ ಜಡೇಜಾ ಆರು ವಿಕೆಟ್ ತೆಗೆದ್ರೆ ODIನಲ್ಲಿ 200 ವಿಕೆಟ್ ತೆಗೆದ ಹಾಗೆ ಆಗ್ತಾರೆ. ಇದರ ಜೊತೆಗೆ ಕಪಿಲ್ ದೇವ್ ನಂತರ
200 ವಿಕೆಟ್ ಹಾಗೂ 2,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಆಗ್ತಾರೆ.
ಸೋ ಇದು ಭಾರತ ಪಾಕಿಸ್ತಾನ ಮ್ಯಾಚ್ ಪ್ರಿವ್ಯೂ…
– ಸುರೇಶ್ ಭಟ್ ಮುಲ್ಕಿ
ಸ್ಪೋರ್ಟ್ಸ್ ಕನ್ನಡ ವಕ್ತಾರರು

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

thirteen + 4 =