ಉಡುಪಿ-ಸ್ಪೋರ್ಟ್ಸ್ ಕೌನ್ಸಿಲ್ ಮಾಹೆ ಮಣಿಪಾಲ,ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ & ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ, ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮಾಹೆ ಮಣಿಪಾಲದಲ್ಲಿ ” ಎ ರಿಫ್ರೆಶರ್ ಕ್ಲಿನಿಕ್ ಆನ್ ಅಥ್ಲೆಟಿಕ್ಸ್ ಮತ್ತು ಕ್ರಿಕೆಟ್ ಅಂಡ್ ಐಕ್ಯೂ ” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಉದ್ಘಾಟನಾ ಸಮಾರಂಭದಲ್ಲಿ ”ಕ್ರೀಡೆಯು ಜೀವನಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ, ಯಾವ ರೀತಿಯ ಕೌಶಲ್ಯಗಳನ್ನು ಕಲಿಸುತ್ತದೆ. ಕ್ರೀಡಾ ಕೌಶಲ್ಯಗಳು, ಸ್ಥಿತಿಸ್ಥಾಪಕತ್ವ, ನಾಯಕತ್ವ, ಹೊಣೆಗಾರಿಕೆ, ಗೌರವ ಮತ್ತು ತಾಳ್ಮೆಯಂತಹ ವಿಷಯಗಳನ್ನು ಕಲಿಯಲು ನಮಗೆ ಸಹಾಯ ಮಾಡುತ್ತದೆ ಹಾಗೂ ವೈಯಕ್ತಿಕ ಅಭಿವೃದ್ಧಿ ಮತ್ತು ಒಟ್ಟಾರೆ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ,ಜೀವನದ ಯಶಸ್ಸಿನ ಆಧಾರವೇ ಕ್ರೀಡೆ ” ಎಂದರು.
ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಹೆಚ್.ವಿದ್ಯಾಕುಮಾರಿ,ಮಾಹೆ ಮಣಿಪಾಲ ಮುಖ್ಯಸ್ಥರಾದ ಹೆಚ್.ಎಸ್.ಬಳ್ಳಾಲ್,ಬಿ.ಸಿ.ಸಿ.ಐ ಕೋಚ್ ಮತ್ತು ಅಂಪಾಯರ್ ಅರುಣ್ ಭಾರದ್ವಾಜ್,ಕೆ.ಎಂ.ಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ,ಕೆ.ಎಂ.ಸಿ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ಉಪಸ್ಥಿತರಿದ್ದರು