ಕ್ರಿಕೆಟ್ಸಂಘಟಿತ ಹೋರಾಟ-ಜೈ ಕರ್ನಾಟಕ ಬೆಂಗಳೂರು ಮುಡಿಗೆ ಎಸ್.ಆರ್.ವಿ ಕಪ್-2022 ಕಿರೀಟ

ಸಂಘಟಿತ ಹೋರಾಟ-ಜೈ ಕರ್ನಾಟಕ ಬೆಂಗಳೂರು ಮುಡಿಗೆ ಎಸ್.ಆರ್.ವಿ ಕಪ್-2022 ಕಿರೀಟ

-

- Advertisment -spot_img
ಬೆಂಗಳೂರು-ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿ.ಡಿ.ಎ) ಅಧ್ಯಕ್ಷರು ಎಸ್.ಆರ್.ವಿಶ್ವನಾಥ್ ರವರ ಜನ್ಮ‌ದಿನದ ಪ್ರಯುಕ್ತ ಯಲಹಂಕದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಎಸ್.ಆರ್.ವಿ ಕಪ್-2022 ಪ್ರಶಸ್ತಿಯನ್ನು ಜೈ ಕರ್ನಾಟಕ ಬೆಂಗಳೂರು ತಂಡ ತನ್ನ ಮುಡಿಗೇರಿಸಿಕೊಂಡಿದೆ.
ಹೊರರಾಜ್ಯದ ಬಲಿಷ್ಠ ತಂಡಗಳಾದ ಕುಮ್ಮಳ್ಳಿ ಇಲೆವೆನ್ ಛತ್ತೀಸ್ಗಢ, ರಾಯಘಡ್,ಶಶಿ ಇಲೆವೆನ್ ಚೆನ್ನೈ, ಹಿಂದೂ ಮುಸ್ಲಿಂ ಏಕತಾ ಮಧ್ಯಪ್ರದೇಶ ಈ 4 ತಂಡಗಳು ಮತ್ತು ಕರ್ನಾಟಕದ 12 ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಪ್ರಬಲ ಪೈಪೋಟಿ ನಡೆದಿತ್ತು.
ಲೀಗ್ ಹಂತದ ರೋಚಕ ಸೆಣಸಾಟದ ಬಳಿಕ ಉಪಾಂತ್ಯ ಪಂದ್ಯಗಳಲ್ಲಿ ಜೈ ಕರ್ನಾಟಕ ಬೆಂಗಳೂರು-ನ್ಯಾಶ್ ಬೆಂಗಳೂರು ತಂಡವನ್ನು ಮತ್ತು ಅವಿಘ್ನ ಸೃಷ್ಟಿ ಜಾನ್ಸನ್-ಕುಮ್ಮಳ್ಳಿ ಇಲೆವೆನ್ ಛತ್ತೀಸ್ಗಢದ ತಂಡವನ್ನು ಸೋಲಿಸಿ ಫೈನಲ್ ಎಂಟ್ರಿ ಪಡೆದಿದ್ದರು.
ಫೈನಲ್ ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಜೈಕರ್ನಾಟಕ ಬೆಂಗಳೂರು ತಂಡದ ಆರಂಭಿಕ‌ ಆಟಗಾರ ಡೇವಿಡ್ ಅರಸೀಕೆರೆ ಬಿರುಸಿನ ಹೊಡೆತಗಳ‌ 22 ರನ್ ಸಹಿತ ಎದುರಾಳಿ ತಂಡಕ್ಕೆ 6 ಓವರ್ ಗಳಲ್ಲಿ 72 ರನ್ ಗಳ ಕಠಿಣ ಸವಾಲನ್ನು ನೀಡಿತ್ತು‌.
ಇದಕ್ಕುತ್ತರವಾಗಿ ಅವಿಘ್ನ ಸೃಷ್ಟಿ ಜಾನ್ಸನ್ ತಂಡ ಜೈ ಕರ್ನಾಟಕದ ದರ್ಶನ್  ಕರಾರುವಾಕ್ಕಾದ ಬೌಲಿಂಗ್ ದಾಳಿ(2 ಓವರ್ 15 ರನ್ 3 ವಿಕೆಟ್) ಗೆ ಕುಸಿತ ಕಂಡು 7 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಈ ಋತುವಿನಲ್ಲಿ ಅತ್ಯುತ್ತಮ  ಸಂಯೋಜಿತ ತಂಡವಾಗಿ ಜೈ ಕರ್ನಾಟಕ ಬಹುತೇಕ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಜಯಿಸಿ ದಾಖಲೆ ಬರೆದಿದೆ.
ವಿಶೇಷವಾಗಿ ಈ ಪಂದ್ಯಾಟದಲ್ಲಿ ಒಟ್ಟು 5 ಅರ್ಧ ಶತಕ ದಾಖಲಾಗಿದ್ದು ಜಾನ್ ನ್ಯಾಶ್,ಅಮಿತ್ ಛತ್ತೀಸ್ಗಢ, ವಿನೋದ್ ಜೈ ಕರ್ನಾಟಕ, ನಸ್ರುದ್ದೀನ್(ಫ್ರೆಂಡ್ಸ್ ಬೆಂಗಳೂರು), ಮ್ಯಾಡಿ(ಫ್ರೆಂಡ್ಸ್ ಬೆಂಗಳೂರು) ಇವರ ಬ್ಯಾಟ್ ನಿಂದ ಸಿಡಿದಿದ್ದವು.
ಪ್ರಥಮ ಪ್ರಶಸ್ತಿ ವಿಜೇತ ಜೈ ಕರ್ನಾಟಕ ತಂಡ 5 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಬೆಳ್ಳಿಯ ಟ್ರೋಫಿ,ದ್ವಿತೀಯ ಸ್ಥಾನಿ ಅವಿಘ್ನ ಸೃಷ್ಟಿ ಜಾನ್ಸನ್ 3 ಲಕ್ಷ ನಗದು ಸಹಿತ ಆಕರ್ಷಕ ಬೆಳ್ಳಿಯ ಟ್ರೋಫಿಗಳನ್ನು ಪಡೆದಕೊಂಡರು.ಫೈನಲ್ ನ ಪಂದ್ಯಶ್ರೇಷ್ಟ ದರ್ಶನ್ ಸ್ಮಾರ್ಟ್ ಫೋನ್ ಮತ್ತು 1 ಸ್ಪೋಟಕ ಅರ್ಧ ಶತಕ ಸಹಿತ ಸರಣಿ ಯುದ್ದಕ್ಕೂ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೈ ಕರ್ನಾಟಕದ ವಿನೋದ್ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉಡುಗೊರೆ ರೂಪದಲ್ಲಿ ಪಡೆದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕರ್ನಾಟಕ ಸರಕಾರದ ಗೃಹ ಸಚಿವರಾದ ಶ್ರೀಯುತ ಅರಗ ಜ್ಞಾನೇಂದ್ರ,ಶಾಸಕರು,ಬಿ.ಡಿ.ಎ ಅಧ್ಯಕ್ಷರಾದ ಶ್ರೀಯುತ ಎಸ್.ಆರ್‌.ವಿಶ್ವನಾಥ್,ರಣಜಿ‌ ಆಟಗಾರ ಕೌಶಿಕ್,ಟೂರ್ನಮೆಂಟ್ ನ ಪ್ರಮುಖ ಆಯೋಜಕರಾದ ಬಾಬು ರಾಜೇಂದ್ರ ಪ್ರಸಾದ್ ಸಹಿತ ಬಿ.ಜೆ.ಪಿ ಯುವಮೋರ್ಚಾದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಎಸ್.ಆರ್.ಬಿ ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಲಕ್ಷಾಂತರ ಕ್ರೀಡಾಪ್ರೇಮಿಗಳು ಪಂದ್ಯಾಟದ ನೇರ ಪ್ರಸಾರವನ್ನು ವೀಕ್ಷಿಸಿದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

nine + sixteen =

Latest news

Roobet Casino : Machines à sous haute énergie et jeux à rythme rapide pour le joueur moderne

Aperçu et jeux rapides chez RoobetRoobet Casino offre une bibliothèque étendue de plus de six mille titres, mais le...

Mr Bit Casino – Quick‑Hit Slot Action und Mehr

Ein Schnellfeuer-Willkommensangebot bei Mr Bit CasinoDas Betreten von Mr Bit Casino fühlt sich an, als würde man ein Neonzeichen...

NV5 Casino – Quick‑Play Slots voor Snelle Winsten

NV5 Casino heeft een niche gevonden voor degenen die verlangen naar adrenaline‑gevulde game‑momenten die in minuten in plaats van...

Polestar Casino: Schnelles Spiel für den Quick‑Hit Enthusiasten

1. Das Polestar Erlebnis im HandumdrehenPolestar Casino stellt Geschwindigkeit und Sofortigkeit in den Mittelpunkt. In einer Welt, in der...
- Advertisement -spot_imgspot_img

BassBet Casino : Machines à sous Quick‑Hit, Gains rapides et le rythme des sessions courtes

1. Le rythme de BassBet CasinoLorsque vous vous connectez à BassBet, la première chose que vous remarquez est l’éclat...

Chicken Roach Official : Machines à sous en ligne rapides pour des gains rapides

Bienvenue dans un univers où chaque spin compte et chaque seconde est précieuse. Si vous recherchez un casino en...

Must read

- Advertisement -spot_imgspot_img

You might also likeRELATED
Recommended to you