
ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್
ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಸೀಸನ್ 01” ಪಂದ್ಯಾವಳಿ ಇದೇ ಮೇ 29, 30 ಮತ್ತು 31ರಂದು ಅರಸೀಕೆರೆ ರೈಲ್ವೆ ಮೈದಾನದಲ್ಲಿ ನಡೆಯಲಿದೆ. ಕ್ರೀಡಾ ಸಂಘಟಕರಾದ ಶಿವಾನಂದ, ಚೇತನ್ ಹಾಗೂ ಸ್ನೇಹಿತರೆಲ್ಲರ ಒಗ್ಗೂಡುವಿಕೆಯಲ್ಲಿ ಈ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದ್ದು, ಪಂದ್ಯಾವಳಿಯಲ್ಲಿ ಒಟ್ಟು 8 ಅರಸೀಕೆರೆ ಫ್ರಾಂಚೈಸಿ ತಂಡಗಳು, 8 ಅಧಿಕಾರಿ (ಆಫೀಸಿಯಲ್ಸ್) ತಂಡಗಳು ಹಾಗೂ ಹಾಸನ ಮತ್ತು ಟಿಪ್ಟೂರು ಭಾಗದ ಐಕಾನ್ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮೇ 29ರಂದು ಲೀಗ್ ಪಂದ್ಯಗಳು, ಮೇ 30ರಂದು ಅಧಿಕಾರಿ ತಂಡಗಳ ಪಂದ್ಯಗಳು ಹಾಗೂ ಮೇ 31ರಂದು ಕ್ವಾರ್ಟರ್ ಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.

ಟೂರ್ನಿಯ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ₹1,00,000 ನಗದು ಬಹುಮಾನ ನೀಡಲಾಗುತ್ತದೆ. ರನ್ನರ್-ಅಪ್ ತಂಡಕ್ಕೆ ಟ್ರೋಫಿಯೊಂದಿಗೆ ₹50,000 ಬಹುಮಾನ ಘೋಷಿಸಲಾಗಿದೆ. ಜೊತೆಗೆ ಸೆಮಿಫೈನಲ್ ತಲುಪಿದ ಎರಡು ತಂಡಗಳಿಗೆ ತಲಾ ₹10,000 ಮತ್ತು ಟ್ರೋಫಿ ನೀಡಲಾಗುತ್ತದೆ.

ಪ್ರತಿ ಪಂದ್ಯದಲ್ಲಿಯೂ “ಮ್ಯಾನ್ ಆಫ್ ದಿ ಮ್ಯಾಚ್” ಆಟಗಾರನಿಗೆ ಬೆಳ್ಳಿಯ ಕಾಯಿನ್ ಪ್ರಶಸ್ತಿ ನೀಡಲಾಗುತ್ತಿದ್ದು, ಅತ್ಯುತ್ತಮ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗೆ ವಿಶೇಷ ಬಹುಮಾನಗಳ ವ್ಯವಸ್ಥೆ ಮಾಡಲಾಗಿದೆ. ಟೂರ್ನಿಯ “ಪ್ಲೇಯರ್ ಆಫ್ ದಿ ಸೀರೀಸ್” ಆಟಗಾರರಿಗೆ ಸೈಕಲ್ ಬಹುಮಾನವಾಗಿ ನೀಡಲಾಗುತ್ತದೆ.
ಪಂದ್ಯಾವಳಿಯ ವಿಶೇಷ ಆಕರ್ಷಣೆಯಾಗಿ ಎಲ್ಲಾ ಪಂದ್ಯಗಳನ್ನು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡಲಾಗುತ್ತದೆ. ಆಟಗಾರರಿಗೆ ಆಯೋಜಕರ ವತಿಯಿಂದ ಟಿ-ಶರ್ಟ್ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ಊಟದ ಸೌಲಭ್ಯವೂ ಕಲ್ಪಿಸಲಾಗಿದೆ.
“ಅರಸೀಕೆರೆ ಚಾಂಪಿಯನ್ಸ್ ಲೀಗ್” ಬಿಡ್ಡಿಂಗ್ ಪ್ರಕ್ರಿಯೆ ಮೇ 19ರಂದು ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743714994 / 7259196223.




