ಕುಮಟಾದಲ್ಲಿ ಮಿಡ್‌ಮ್ಯಾಕ್ ಟ್ರೋಫಿ–2026 ಟಿ–20 ಕ್ರಿಕೆಟ್ ಟೂರ್ನಿ

ಕುಮಟಾದಲ್ಲಿ ಮಿಡ್‌ಮ್ಯಾಕ್ ಟ್ರೋಫಿ–2026 ಟಿ–20 ಕ್ರಿಕೆಟ್ ಟೂರ್ನಿ

ಕುಮಟಾದಲ್ಲಿ ಮಿಡ್‌ಮ್ಯಾಕ್ ಟ್ರೋಫಿ–2026 ಟಿ–20 ಕ್ರಿಕೆಟ್ ಟೂರ್ನಿ

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾದ ವತಿಯಿಂದ ಮಿಡ್‌ಮ್ಯಾಕ್ ಟ್ರೋಫಿ–2026 ಟಿ–20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಇದು ಈ ಪ್ರತಿಷ್ಠಿತ ಟೂರ್ನಿಯ ದ್ವಿತೀಯ ಆವೃತ್ತಿ (Season–2) ಆಗಿದ್ದು, ಮಿಡ್‌ಮ್ಯಾಕ್ ಗ್ರೂಪ್ ಅವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ.

ಇದು ಉತ್ತರ ಕನ್ನಡ ಜಿಲ್ಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಾಗಿದ್ದು, ಪಂದ್ಯಗಳು ಫೆಬ್ರವರಿ 4ರಿಂದ 8ರವರೆಗೆ ಕುಮಟಾದ ಜಿಐಬಿಬಿ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆಯಲಿವೆ.

ಟೂರ್ನಿಯ ಪ್ರಥಮ ಬಹುಮಾನ ₹40,000 ಹಾಗೂ ದ್ವಿತೀಯ ಬಹುಮಾನ ₹25,000 ನಿಗದಿಪಡಿಸಲಾಗಿದೆ. ಈ ಟೂರ್ನಿಗೆ ನಿಹಾಲ್ ಎಕ್ಸ್‌ಐ ಮತ್ತು ಖಾಜಿ ಸ್ಟೋರ್ಸ್ ಸಹಕಾರ ನೀಡುತ್ತಿದ್ದು, ಟೂರ್ನಿಯನ್ನು ಸ್ಪೋರ್ಟ್ಸ್ ಕನ್ನಡ ವಾಹಿನಿಯ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಕ್ರಿಕೆಟ್ ಆಟಗಾರರಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಈ ಟೂರ್ನಿಯನ್ನು ಆಯೋಜಿಸಲಾಗಿದ್ದು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಗಳನ್ನು ವೀಕ್ಷಿಸಿ ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *