
ಮಂಗಳಾಪುರ ಟ್ರೋಫಿ 2025 ಆಟಗಾರರ ಹರಾಜು – ಅಕ್ಟೋಬರ್ 5ರಂದು ಭರ್ಜರಿ ಆಯೋಜನೆ
ಮಣಿಪಾಲ: ಕರಾವಳಿಯ ಜಿಎಸ್ಬಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಡಗರದ ಕ್ಷಣ ಎದುರಾಗಿದೆ. ಬಹು ನಿರೀಕ್ಷಿತ ಮಂಗಳಾಪುರ ಟ್ರೋಫಿ 2025 ಈ ಬಾರಿ ಆಟಗಾರರ ಹರಾಜು ವಿಧಾನದಲ್ಲಿ ನಡೆಯಲಿದ್ದು, ಅದರ ಪ್ಲೇಯರ್ ಆಕ್ಷನ್ ಕಾರ್ಯಕ್ರಮವನ್ನು ಅಕ್ಟೋಬರ್ 5, 2025 ರಂದು ಸಂಜೆ 3 ಗಂಟೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮವು ಮಣಿಪಾಲದ ಅಶ್ಲೇಶ್ ಕಟ್ಟಡದಲ್ಲಿರುವ ವಜ್ರ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು, ಹೋಟೆಲ್ ಅಶ್ಲೇಶ್ ಹರಾಜು ಪಾಲುದಾರರಾಗಿ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ.


ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು, ಎರಡು ದಿನಗಳಲ್ಲಿ ತೀವ್ರ ಹೋರಾಟ ನಡೆಸಲಿದ್ದು, ವಿಶೇಷವಾಗಿ GSB ಸಮುದಾಯದ ಆಟಗಾರರಿಗೆ ಅವಕಾಶ ನೀಡಲಾಗಿದೆ. ಓವರ್ಆರ್ಮ್ ಫಾರ್ಮ್ಯಾಟ್ನಲ್ಲಿ ನಡೆಯುವ ಈ ಟೂರ್ನಿಯು ಕರಾವಳಿಯ ಜಿಎಸ್ಬಿ ಕ್ರಿಕೆಟ್ ಪ್ರೇಮಿಗಳಿಗೆ ಹೊಸ ಉತ್ಸಾಹ ತುಂಬಲಿದೆ.
ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳಲ್ಲಿ V Strikers, Rising Stars Mangalore, GSB Real Fighters, BP Thunders, Kings Ullal, Indo Super Warriors, Enjoy Titans, Irvathuru Sports Club Manipal, Kodial Strikers , Veeranjaneya Cricketers Kaup, Bhuvan cricketers- Koladapete, Konkan Express Koteshwara ಸೇರಿದಂತೆ ಶಕ್ತಿಶಾಲಿ ತಂಡಗಳಿವೆ.
ಆಟಗಾರರ ಹರಾಜು ಕಾರ್ಯಕ್ರಮದಲ್ಲಿ ಪ್ರತಿ ತಂಡ ತಮ್ಮ ತಂಡದ ಶಕ್ತಿ ಹೆಚ್ಚಿಸಲು ತೀವ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಇದು ರೋಚಕ ಕ್ಷಣವಾಗಲಿದೆ.
ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗೆ ಇದು ಕೇವಲ ಹರಾಜು ಮಾತ್ರವಲ್ಲ, ಭವಿಷ್ಯದ ಮಂಗಳಾಪುರ ಟ್ರೋಫಿ ಚಾಂಪಿಯನ್ಗಳನ್ನು ರೂಪಿಸುವ ಮಹತ್ವದ ಕ್ಷಣವಾಗಲಿದೆ. ಮಂಗಳಾಪುರ ಟ್ರೋಫಿ ಸಂಘಟಕರು ಎಲ್ಲ ಕ್ರಿಕೆಟ್ ತಂಡದ ಮಾಲೀಕರನ್ನು ಮತ್ತು ಐಕಾನ್ ಆಟಗಾರರನ್ನು ಈ ಹರಾಜು ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನಿಸಿದ್ದಾರೆ.




