
ಮಲ್ಪೆಯಲ್ಲಿ ಗಾರ್ಡನ್ ಫ್ರೆಂಡ್ಸ್ ಮತ್ತು ಪಿಂಕ್ ಪ್ಯಾಂಥರ್ಸ್ ಕಲ್ಮಾಡಿ ಆಯೋಜಿಸುವ ಕಲ್ಮಾಡಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ
ಉಡುಪಿ: ಮಲ್ಪೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅಂತರ್ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಟೆನಿಸ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಯೋಜಿಸಲಾಗಿದೆ. ಇಲ್ಲಿನ ಗಾಂಧಿ ಶತಾಬ್ದಿ ಮೈದಾನದಲ್ಲಿ ಇಂದು ಶುಕ್ರವಾರ, ನಾಳೆ ಶನಿವಾರ ಹಾಗೂ ಭಾನುವಾರ ಕ್ರಿಕೆಟ್ ಪಂದ್ಯ ನಡೆಯಲಿದೆ.
ಪುರುಷರ ವಿಭಾಗದಲ್ಲಿ ಆಹ್ವಾನಿತ ತಂಡಗಳ ಪಂದ್ಯಾಕೂಟದಲ್ಲಿ ಮೊದಲ ಬಹುಮಾನ 2ಲಕ್ಷ ರೂ. 2ನೇ ಬಹುಮಾನ 1ಲಕ್ಷ ನಿಗದಿ ಮಾಡಲಾಗಿದೆ.


ಮಹಿಳೆಯರ ಟೂರ್ನಿಯಲ್ಲಿ 12 ತಂಡಗಳು ಭಾಗವಹಿಸಿದ್ದು, ಮಲ್ಪೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಯುವತಿಯರಿಗಾಗಿಯೇ ಪ್ರತ್ಯೇಕ ಕ್ರಿಕೆಟ್ ಆಯೋಜನೆಗೊಂಡಿದೆ. ರಾಜ್ಯ, ಹೊರರಾಜ್ಯದ ನಾನಾ ಭಾಗಗಳಿಂದ ಮಹಿಳಾ ಆಟಗಾರರು ಟೂರ್ನಮೆಂಟ್ ಆಡಲು ಆಗಮಿಸಿದ್ದಾರೆ.
ಸ್ಥಳೀಯವಾಗಿ ಈವರೆಗೂ ಮಹಿಳೆಯರಿಗೆ ಎಲ್ಲೂ ಈ ತರಹದ ಟೂರ್ನಮೆಂಟ್ ಆಯೋಜಿಸಿರಲಿಲ್ಲ. ಹಾಗಾಗಿ, ಇದೇ ಮೊದಲ ಬಾರಿಗೆ ಬ್ರಹತ್ ಪಂದ್ಯಾವಳಿ ಆಯೋಜಿಸಲಾಗಿದೆ. ಮಹಿಳಾ ಕ್ರಿಕೆಟಿಗರಿಗೂ ತಮ್ಮ ಕ್ರಿಕೆಟ್ ಕೌಶಲ್ಯಗಳನ್ನು ತೋರ್ಪಡಿಸಲು ಈ ಟೂರ್ನಿ ಆಯೋಜಿಸಲಾಗಿದೆ ಎನ್ನುವುದು ಆಯೋಜಕರ ಮಾತಾಗಿದೆ. ಇನ್ನೂ ಆಟಗಾರ್ತಿಯರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿ ಮಿಂಚುತ್ತಿದ್ದಾರೆ.

ಕರ್ನಾಟಕ ತಂಡಗಳ ಜೊತೆ ತೆಲಂಗಾಣ, ತಮಿಳುನಾಡು, ಗುಜರಾತ್ , ಮುಂಬೈ ತಂಡಗಳೂ ಭಾಗವಹಿಸಿವೆ. ಯುವತಿಯರು, ಮಹಿಳೆಯರು ತಂಡ ಮಾಡಿಕೊಂಡು ಪಂದ್ಯದಲ್ಲಿ ಪಾಲ್ಗೊಂಡಿದ್ದಾರೆ.
ಮಹಿಳೆಯರ ಟೂರ್ನಿಯಲ್ಲಿ ಮೊದಲ ಬಹುಮಾನ 1,11,111 ರೂ. 2ನೇ ಬಹುಮಾನ 55,555 ರೂ. ಇರಲಿದೆ. ಎರಡೂ ವಿಭಾಗದಲ್ಲಿ ಮ್ಯಾನ್ ಆ ದಿ ಸೀರೀಸ್ ಪ್ಲೇಯರ್ ಗೆ ಮೋಟಾರ್ ಬೈಕ್ ಸಿಗಲಿದೆ.
ಸುಮಾರು ಅಂದಾಜು 32 ಲಕ್ಷ ವೆಚ್ಚದಲ್ಲಿ 3 ದಿನಗಳ ಫ್ಲಡ್ ಲೈಟ್ ಟೂರ್ನಿಯು ಮಲ್ಪೆಯಲ್ಲಿ ಸಾಗಿ ಬರಲಿದೆ





