
ದಾವಣಗೆರೆ ಇಲೆವೆನ್ ಕ್ರಿಕೆಟ್ ಕ್ಲಬ್, ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್, ದಾವಣಗೆರೆ ವತಿಯಿಂದ ಜಯಪ್ರಕಾಶ್ ಗೌಡರ ನೇತೃತ್ವದಲ್ಲಿ 18 ನೇ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಹೊನಲುಬೆಳಕಿನ ಕ್ರಿಕೆಟ್ ಟೂರ್ನಮೆಂಟ್
ದಾವಣಗೆರೆ : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್ – 2025ರ ಹೊನಲುಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಅದ್ಧೂರಿಯಾಗಿ ನೆರವೇರಿತು. ದಾವಣಗೆರೆ ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಈ ಟೂರ್ನಿ, ಕ್ರಿಕೆಟ್ ಅಭಿಮಾನಿಗಳಿಗೆ ಕಣ್ಮನ ಸೆಳೆಯುವ ಕ್ರೀಡಾ ಮೇಳವಾಗಿ ಪರಿಣಮಿಸಿತು.

ಕನ್ನಡಿಗರ ಟೆನಿಸ್ ಬಾಲ್ ಕ್ರಿಕೆಟ್ ಜಗತ್ತಿನಲ್ಲಿ ಈ ಟೂರ್ನಮೆಂಟ್ ‘ಕರ್ನಾಟಕ ಕ್ರಿಕೆಟ್ ವಿಶ್ವಕಪ್’ ಎಂದೇ ಖ್ಯಾತಿ ಪಡೆದಿದೆ.


ರಾಜ್ಯದ ಮತ್ತು ದೇಶದ ವಿವಿಧ ಭಾಗಗಳಿಂದ ಬಂದ ತಂಡಗಳ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ ಫ್ರೆಂಡ್ಸ್ ಬೆಂಗಳೂರು ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ವಿನ್ನರ್ಸ್ ಟ್ರೋಫಿಗೆ ಭಾಜನವಾಗಿ ಪ್ರಶಂಸೆಗೆ ಪಾತ್ರವಾಯಿತು. ವಿಭೂಷಣ್ ಅನ್ ಪ್ರೆಡಿಕ್ಟೇಬಲ್, ಕೆ.ಆರ್.ಪುರಂ, ಬೆಂಗಳೂರು ತಂಡವು ಅಪ್ರತಿಮವಾದ ಪ್ರದರ್ಶನದ ಮೂಲಕ ಉತ್ತಮ ಹೋರಾಟ ನೀಡಿ ರನ್ನರ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ರಾಜ್ಯದ ಉದಯೋನ್ಮುಖ ಆಟಗಾರರನ್ನುೊಳಗೊಂಡ ತಂಡಗಳಾದ Unpredictable KR Puram, SAP Bright Stars ಮತ್ತು ಅಥರ್ವ ಶೃಂಗೇರಿ ಟೂರ್ನಿಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ತಮ್ಮ ಅದ್ಭುತ ಆಟದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾದವು.ಈ ತಂಡಗಳು ಸ್ಪರ್ಧೆಯ ಅವಧಿಯಲ್ಲಿ ನಿರಂತರವಾಗಿ ಉನ್ನತ ಮಟ್ಟದ ಆಟ ಪ್ರದರ್ಶಿಸಿ, ತಮ್ಮ ಶೈಲಿ, ಸಾಮರ್ಥ್ಯ ಮತ್ತು ಕೌಶಲ್ಯಗಳಿಂದ ಗಮನಾರ್ಹ ಪ್ರಶಂಸೆ ಗಳಿಸಿವೆ.
SAP Bright Stars ಮತ್ತು ಅಥರ್ವ ಶೃಂಗೇರಿ ತಂಡಗಳು ಸೆಮಿ ಫೈನಲ್ ಹಂತದಲ್ಲಿ ಪರಾಭವಗೊಂಡವು. ಅದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಥರ್ವ ಶೃಂಗೇರಿ ಮತ್ತು ಜೈ ಕರ್ನಾಟಕ ತಂಡಗಳ ನಡುವೆ ನಡೆದ ಕಠಿಣ ಪೈಪೋಟಿ ಟೂರ್ನಿಯ ಅತ್ಯುತ್ತಮ ಪಂದ್ಯವೆಂದು ಕ್ರೀಡಾಭಿಮಾನಿಗಳು ಶ್ಲಾಘಿಸಿದರು. ಆಟದ ಕೊನೆಯ ಕ್ಷಣದವರೆಗೆ ಉಸಿರು ಬಿಗಿಗೊಳಿಸುವ ರೀತಿಯಲ್ಲಿ ಸಾಗಿದ ಈ ಕ್ವಾರ್ಟರ್ ಫೈನಲ್ ಪಂದ್ಯವು ಪ್ರೇಕ್ಷಕರಿಗೆ ಮರೆಯಲಾರದ ಅನುಭವ ನೀಡಿತು.

ವೈಯಕ್ತಿಕ ಕ್ರೀಡಾ ಸಾಧನೆಗಳ ವಿಭಾಗದಲ್ಲೂ ಗಮನ ಸೆಳೆಯುವಂತಹ ಪ್ರದರ್ಶನ ಕಂಡುಬಂತು.
ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿ – ಗಿಳಿಯಾರು ನಾಗ (ಫ್ರೆಂಡ್ಸ್)
ಬೆಸ್ಟ್ ಬೌಲರ್ ಪ್ರಶಸ್ತಿ – ಸಾಗರ್ (ವಿಭೂಷಣ್ ಅನ ಪ್ರೆಡಿಕ್ಟೇಬಲ್)
ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿ – ಲೋಕಿ ಪುತ್ತೂರು (ಜೈ ಕರ್ನಾಟಕ)

ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಪಂದ್ಯಾವಳಿಯಲ್ಲಿ ತೋರಿದ ಉತ್ತಮ ಕೌಶಲ್ಯ ಮತ್ತು ಕ್ರೀಡಾತ್ಮಕ ಮನೋಭಾವಕ್ಕೆ ಎಲ್ಲ ಆಟಗಾರರಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಯಿತು.

ವಾರ್ಷಿಕವಾಗಿ 18ನೇ ಬಾರಿಗೆ ಆಯೋಜಿಸಲ್ಪಟ್ಟ ಈ ಹೊನಲುಬೆಳಕಿನ ಕ್ರಿಕೆಟ್ ಸ್ಪರ್ಧೆ ಪ್ರತಿ ವರ್ಷವೂ ಕ್ರೀಡಾ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಎತ್ತುತ್ತಿದ್ದು, ರಾಜ್ಯ ಮಟ್ಟದ ಕ್ರಿಕೆಟ್ ಅಭಿಮಾನಿಗಳ ಕಣ್ಣುಗಳು ದಾವಣಗೆರೆಯತ್ತ ತಿರುಗುವಂತಾಗಿದೆ.



ಆಯೋಜಕರ ಪರವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡರು, “ಯುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಒದಗಿಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟವನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸ್ಪರ್ಧೆಯನ್ನು ಇನ್ನಷ್ಟು ವೈಭವಶಾಲಿಯಾಗಿ ನಡೆಸುವ ಯೋಜನೆಯಿದೆ” ಎಂದು ತಿಳಿಸಿದರು.





