ತಂದೆಯನ್ನು ಮಾಲೀಕನನ್ನಾಗಿಸಿದ ಮಗ; ಯಶಸ್ಸು ಎಂದರೆ ಇದೇ!

ತಂದೆಯನ್ನು ಮಾಲೀಕನನ್ನಾಗಿಸಿದ ಮಗ; ಯಶಸ್ಸು ಎಂದರೆ ಇದೇ!

ತಂದೆಯನ್ನು ಮಾಲೀಕನನ್ನಾಗಿಸಿದ ಮಗ; ಯಶಸ್ಸು ಎಂದರೆ ಇದೇ!

ಟೀಂ ಇಂಡಿಯಾದ ಯುವ ಸೆನ್ಸೇಷನ್ , ಕೋಲ್ಕತ್ತಾ ನೈಟ್ ರೈಡರ್ಸ್ ಸ್ಟಾರ್ ಬ್ಯಾಟ್ಸ್ ಮನ್ ರಿಂಕು ಸಿಂಗ್ ದುಬಾರಿ ಮನೆ ಖರೀದಿಸಿದ್ದಾರೆ. ಐಪಿಎಲ್ 2025 ರ ಮೆಗಾ ಹರಾಜಿನ ಸಂದರ್ಭದಲ್ಲಿ, ರಿಂಕು ಸಿಂಗ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ರೂ. 13 ಕೋಟಿ ಭಾರೀ ಬೆಲೆಗೆ ಅವರನ್ನು ಉಳಿಸಿಕೊಂಡಿದ್ದು ಗೊತ್ತೇ ಇದೆ.

ರಿಟೆನ್ಶನ್ ಲಿಸ್ಟ್ ಬಿಡುಗಡೆಯಾದ ಕೆಲ ದಿನಗಳ ನಂತರ ರಿಂಕು ಸಿಂಗ್  ರೂ. 3.5 ಕೋಟಿಗೆ ಐಷಾರಾಮಿ ಮನೆ ಖರೀದಿಸಿದ್ದಾರೆ. ಅವರು ಉತ್ತರ ಪ್ರದೇಶದ ಅಲಿಘರ್‌ನಲ್ಲಿರುವ ಅತ್ಯಂತ ದುಬಾರಿ ಓಝೋನ್ ಸಿಟಿಯಲ್ಲಿ ಬಂಗಲೆಯನ್ನು ಖರೀದಿಸಿದರು. ರಿಂಕು ಸಿಂಗ್ ಅವರ ತಂದೆ ಈ ಓಝೋನ್ ನಗರದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುತ್ತಿದ್ದರು.

ಇದೀಗ ಅದೇ ಏರಿಯಾದಲ್ಲಿ ಮನೆ ಖರೀದಿಸಿರುವ ರಿಂಕು ಸಿಂಗ್, ತಂದೆಯನ್ನು ಮಾಲೀಕನನ್ನಾಗಿಸಿದ್ದಾರೆ. ಯಶಸ್ಸು ಎಂದರೆ ಇದೇ.ಅತ್ಯಂತ ಬಡ ಕುಟುಂಬದಿಂದ ಬಂದಿರುವ ರಿಂಕು ಸಿಂಗ್ ತಮ್ಮ ಸೆನ್ಸೇಷನಲ್ ಬ್ಯಾಟಿಂಗ್‌ನಿಂದ ಸ್ಟಾರ್ ಬ್ಯಾಟ್ಸ್‌ಮನ್ ಎಂದು ಗುರುತಿಸಲ್ಪಟ್ಟರು. ಐಪಿಎಲ್ 2023 ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ನಡೆದ ಪಂದ್ಯದಲ್ಲಿ ಯಶ್ ದಯಾಳ್ ಅವರ ಕೊನೆಯ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿ ಕೆಕೆಆರ್ ಅನ್ನು ಗೆಲ್ಲಿಸಿದ್ದರು.

ಈ ಇನ್ನಿಂಗ್ಸ್ ರಿಂಕು ಸಿಂಗ್ ಗೆ ಉತ್ತಮ ಮನ್ನಣೆ ತಂದುಕೊಟ್ಟಿತು. ಸ್ಟಾರ್ ಪಟ್ಟದ ಹೊರತಾಗಿಯೂ ರಿಂಕು ಸಿಂಗ್ ಕೆಕೆಆರ್ ತಂಡದಲ್ಲಿಯೇ ಉಳಿದರು. ಹಾಗಾಗಿ ಕಳೆದ ಸೀಸನ್ ನಲ್ಲಿ ರೂ. 55 ಲಕ್ಷ ಸಂಬಳ ಮಾತ್ರ ಪಡೆದಿದ್ದರು.ಇತ್ತೀಚಿನ ರಿಟೆನ್ಶನ್ ನಲ್ಲಿ  ಅವರ ಸಂಬಳ ರೂ. 13 ಪ್ಲಸ್ ಪಟ್ಟು ಹೆಚ್ಚಾಗಿದೆ.

Leave a Reply

Your email address will not be published. Required fields are marked *