Categories
ಕ್ರಿಕೆಟ್

Spinal Cord stroke ಆಘಾತಕ್ಕೆ ಸಡ್ಡು ಹೊಡೆದು,ಮತ್ತೆ ಅಂಗಣಕ್ಕೆ ಇಳಿಯುತ್ತಿರುವ ಆದಿತ್ಯ ಪ್ರವೀಣ್

ಆದಿತ್ಯ ಓರ್ವ ಪ್ರತಿಭಾನ್ವಿತ ಕ್ರಿಕೆಟಿಗ. ಬೆಳೆಯುವ ಸಿರಿ ಮೊಳಕೆ ಎಂಬಂತೆ ಬಾಲ್ಯದಲ್ಲೇ ಕ್ರಿಕೆಟ್ ಕ್ಷೇತ್ರದ ಭವಿಷ್ಯದ ಬೆಳಕಾಗಿ ಬೆಳಗುವ ಎಲ್ಲ ರೀತಿಯ ಮುನ್ಸೂಚನೆ ನೀಡಿದ್ದ.
ತಂದೆ ಪ್ರವೀಣ್ ಚಂದ್ರ ರವರು ಮಾಜಿ ಕ್ರಿಕೆಟಿಗರು.ಉಡುಪಿ ಮೂಲದವರಾಗಿದ್ದ ಇವರು ಕಾಲೇಜು ದಿನಗಳಲ್ಲಿ ಅತ್ಯುತ್ತಮ ಆಟಗಾರರಾಗಿದ್ದು,
ಕ್ರಿಕೆಟ್ ಕ್ಷೇತ್ರಕ್ಕೆ ಯುವ ಪ್ರತಿಭೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನಡೆಯುವ ಎಮ್.ಪಿ.ಎಲ್ ಪಂದ್ಯಾವಳಿಗೆ ಮಣಿಪಾಲ್ ಹರಿಕೇನ್ಸ್ ತಂಡವನ್ನು ಕಟ್ಟಿ ಯಶಸ್ಸು ಸಾಧಿಸಿದವರು.ಡಿಡೋಸ್ ಸ್ಪೋರ್ಟ್ಸ್ವೇರ್ ಬ್ರಾಂಡ್ ಸ್ಥಾಪಿಸಿ ಅಂತರಾಷ್ಟ್ರೀಯ ಪಂದ್ಯಗಳು ಹಾಗೂ ಕೆ.ಪಿ.ಎಲ್ ಪಂದ್ಯಗಳಿಗೆ ಜೆರ್ಸಿಗಳನ್ನು ಒದಗಿಸಿದವರು.
ಹೀಗಾಗಿ ತಂದೆಯಂತೆಯೇ ಆದಿತ್ಯ ಕೂಡ ಸಣ್ಣ ವಯಸ್ಸಿನಲ್ಲೇ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ
14 ರ ಹರೆಯದ ಈ ಯುವಕ  ಬೆಂಗಳೂರಿನ KIOC ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಾ 19 ರ ಹರೆಯದ ಹುಡುಗರ ಜೊತೆ ಪಂದ್ಯಗಳನ್ನು ಆಡಲು ಆರಂಭ ಮಾಡಿದ್ದು,ತನ್ನ ಆಟದ ಚಾಣಾಕ್ಷತನವನ್ನು ಮೆರೆದು ಭವಿಷ್ಯದಲ್ಲಿ ಉತ್ತಮ ಆಟಗಾರನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ.

 ಅಕ್ಟೋಬರ್ ತಿಂಗಳ 24 ನೇ ತಾರೀಕು ಅವನ ಅಮ್ಮನ ಹುಟ್ಟು ಹಬ್ಬದ ದಿನ. ಅಕಾಡೆಮಿಯಲ್ಲಿ 3 ನೇ ಸೆಷನ್ ಗೆ ಹೊರಡುವ ಸಂದರ್ಭದಲ್ಲಿ ಒಮ್ಮೆಲೆ ತನ್ನ ಕಾಲಿನ ನಿಯಂತ್ರಣ ಕಳೆದುಕೊಂಡು ಬೀಳುತ್ತಾನೆ. ಏಳಲು ಅನಾನುಕೂಲ ಆದ ಕಾರಣ ಆತನ ತಂದೆ ತಾಯಿ ಕೂಡಲೇ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದರು . ಆತನನ್ನು ಪರೀಕ್ಷೆ ಮಾಡಿದ ವೈದ್ಯರು ಆತನ ಬೆನ್ನು ಹುರಿಗೆ ಬಲವಾದ ಪೆಟ್ಟು ಬಿದ್ದಿದ್ದು MRI ಸ್ಕ್ಯಾನ್ ಮಾಡಿಸಲು ತಿಳಿಸಿದರು.
ಅಕಸ್ಮಾತ್ತಾಗಿ ಬಂದೆರಗಿದ ಸ್ಪೈನಲ್ ಕೋರ್ಡ್ ಸ್ಟ್ರೋಕ್ (ಬೆನ್ನುಹುರಿ ಪಾರ್ಶ್ವವಾಯು) ದಿಂದಾಗಿ ಆತನು ಎದ್ದು ನಿಲ್ಲಲು, ಕೂರಲು, ನಡೆಯಲು, ಭಾರವಾದ ವಸ್ತುಗಳನ್ನು ಎತ್ತಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದರು. ಅಲ್ಲದೆ ಆತನಿಗೆ ಫಿಸಿಯೋ ಥೆರಪಿಯ ಅವಶ್ಯಕತೆಯನ್ನು ತಿಳಿಸಿದರು. ಫಿಸಿಯೋ ಥೆರಪಿಯೊಂದಿಗೆ
ಆವಾಗ ಅವರ ನೆರವಿಗೆ ಬಂದಿದ್ದು   Enlighten Life Nutrition company ಯ ಸಲಹೆಯಂತೆ Aapro Bean ಮತ್ತು Omega Chia 3 ಇದರ ಬಗ್ಗೆ ತಿಳಿಸಿದರು.
ಒಬ್ಬ ಉತ್ತಮ ಆಟಗಾರ ಇದನ್ನು ಖಂಡಿತವಾಗಿಯೂ ಪ್ರತಿ ದಿನ ಸೇವಿಸುವ ಬಗ್ಗೆ ತಿಳಿಸಿ ಹೇಳಿದರು.
ಅದರಂತೆ ಆದಿತ್ಯ ಕೂಡ ಇದನ್ನು ಸೇವಿಸಲು ಆರಂಭ ಮಾಡಿದ್ದು ಅಲ್ಲದೆ ಕೆಲವೇ ದಿನಗಳಲ್ಲಿ ಮೊದಲಿನಂತೆ ನಡೆಯುವ ಸಾಮರ್ಥ್ಯ ಪಡೆದು ಕೊಂಡ.
ಇದನ್ನು ಸೇವಿಸಲು ಆರಂಭ ಮಾಡಿದ ನಂತರ ತನ್ನಲ್ಲಿ ಹೆಚ್ಚಿನ ಶಕ್ತಿ ಸಾಮರ್ಥ್ಯ ತುಂಬಿದೆ ಅನ್ನುತ್ತಾನೆ ಆದಿತ್ಯ.
ಆರೈಕೆ,ಆತ್ಮ ವಿಶ್ವಾಸದ ಒಡನಾಟ,ವೈದ್ಯರ ನೆರವು ಮತ್ತು ತನ್ನ ಚೇತರಿಕೆಗಾಗಿ ಪ್ರಾರ್ಥಿಸಿದ ಅಭಿಮಾನಿಗಳ ಆಶೀರ್ವಾದದಿಂದ ಹಂತ ಹಂತವಾಗಿ ತನ್ನ ಕಾಲಿನ ಮೇಲೆ ತಾನು ನಡೆಯುವಷ್ಟು ಸಾಮರ್ಥ್ಯವನ್ನು 2 ವಾರದಲ್ಲಿ ಕಂಡುಕೊಂಡ.
ತನ್ನ ಈ ಚೇತರಿಕೆಯಲ್ಲಿ ನನ್ನ ತಾಯಿಯ ಪಾತ್ರ ತುಂಬಾ ದೊಡ್ಡದು. ಅಮ್ಮನ ಚೈತನ್ಯದ ಮಾತುಗಳು ಸದಾ ನನ್ನ ಮನಸ್ಸನ್ನು ಜಾಗೃತಗೊಳಿಸುವಲ್ಲಿ ನನ್ನ ಜೊತೆಗಿದ್ದಿತು. ಬೆಳಗ್ಗೆ ಎದ್ದಾಗಿನಿಂದ ವ್ಯಾಯಾಮ ಸ್ನಾನ ತಿಂಡಿ ಊಟ ಜ್ಞಾನ ಇವುಗಳನ್ನು ನನ್ನೊಡನಿದ್ದು ಆರೈಕೆ ಮತ್ತು ಹಾರೈಕೆ ಎರಡೂ ನೀಡಿದ ಅಮ್ಮ ಅಪ್ಪನ ಸ್ನೇಹಪರತೆಯ ಪಾತ್ರವೇ ದೊಡ್ಡದು’ ಎನ್ನುತ್ತಾನೆ ಆದಿತ್ಯಾ.
ತಾನು ಆಸ್ಪತ್ರೆಗೆ ದಾಖಲು ಆದ ದಿನದಿಂದ ತಾನು ಶೀಘ್ರವಾಗಿ ಗುಣವಾಗಲು ಹರಸಿದ  ಮಾರ್ಗದರ್ಶನ ನೀಡಿದ ಮೆಂಟರ್ ಇಯಾನ್ ಫಾರಿಯ ಮತ್ತು ಅನೇಕ ಗೆಳೆಯನ್ನು ಭೇಟಿಯಾಗಿ ತನ್ನ ಅನುಭವವನ್ನು ಹಂಚಿಕೊಂಡದ್ದು ಹೀಗೆ
“ಜೀವನದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳು ಕೂಡ ಒಂದು ಕಾರಣಕ್ಕಾಗಿ ನಡೆಯುತ್ತದೆ. ಹಾಗಾಗಿ ನಾನು ನನ್ನನ್ನು ಮತ್ತು ಡಾಕ್ಟರ್ ನ್ನು ತುಂಬಾ ನಂಬಿದೆ. ಇದು ಜೀವನದ ಒಂದು ಹಂತ. ಈ ಹಂತದಲ್ಲಿ ನಾವು ಅದರಿಂದ ಗೆಲುವು ಸಾಧಿಸಿ ಬರಬೇಕು. ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದರು ಜೀವನದಲ್ಲಿ ಏನೇ ಆದರೂ ಅದನ್ನು ನಾವು ಒಳ್ಳೆಯ ಮನಸ್ಸಿನಿಂದ ಸ್ವೀಕರಿಸಿದರೆ ಬೇಗ ಅದರಿಂದ ಹೊರಬರಲು ಸಾಧ್ಯ ಅಂತ. ಅವರ ಮಾತಿನಂತೆ ನಿರಂತರ ಪರಿಶ್ರಮದಿಂದ, ಜನರ ಪ್ರೇರಣೆಯಿಂದ, ನಾನು ಇಟ್ಟಿರುವ ನಂಬಿಕೆ ಮತ್ತು ಭರವಸೆಯಿಂದ ಬೇಗ ಗುಣಮುಖನಾಗಿದ್ದೇನೆ.”
ಧೋನಿ ಮತ್ತು ಸುರೇಂದ್ರ ಸಿಂಗ್ ಅವರಂತಹ ಮಹಾನ್ ವ್ಯಕ್ತಿಗಳ ಪ್ರೇರಣೆ ನಾನು ಈ ಮಟ್ಟಕ್ಕೆ ಬರಲು ಸಾಧ್ಯ ಆಗಿದೆ ಯಾಕೆಂದರೆ ಅವರಿಂದ ಸಾಧ್ಯ ಆದದ್ದು ತನಗೂ ಸಾಧ್ಯ ಅನ್ನುವ ಭರವಸೆಯ ಮಾತುಗಳನ್ನು ಆಡುವ ಆದಿತ್ಯ
ಮತ್ತೆ ತನ್ನ ಸಾರ್ಥಕ್ಯ ಕ್ಷಣದಲ್ಲಿ ಮಿಂಚಬೇಕು ಅಂತ ತುದಿಗಾಲಲ್ಲಿ ಕಾಯುತ್ತಿದ್ದ ಆದಿತ್ಯ ಎರಡು ವರ್ಷಗಳ ನಂತರ ಮತ್ತೆ ಭರವಸೆಯ ಆಟಗಾರನಾಗಿ ಹೊರ ಹೊಮ್ಮಲಿದ್ದಾರೆ ಅನ್ನುವುದು ಸಂತಸದ ವಿಷಯ.
Enlightlife ನ ಪ್ರಮೋಟರ್ ಆದ
M.L.ಅಮರನಾಥ್ ಹೇಳುವ ಹಾಗೆ ಪ್ರತಿಯೊಬ್ಬ ಆಟಗಾರರಿಗೆ ಕೂಡ ಇದರ ಅವಶ್ಯಕತೆ ಇದೆ. Aapro Bean ಮತ್ತು Chia Plant Omega ತರಹದ  ಪೌಷ್ಟಿಕ ಆಹಾರ ಪ್ರತಿ ಆಟಗಾರರಿಗೆ ಅವಶ್ಯಕ. ಅಲ್ಲದೆ ಇದರ ಬಗ್ಗೆ ಮಾಹಿತಿ ನೀಡುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಉತ್ತಮ
ಪ್ರತಿಯೊಬ್ಬ ಆಟಗಾರರು ಕೂಡ ತಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಇದನ್ನು ಸೇವಿಸುವುದು ಉತ್ತಮ. ಆದಿತ್ಯ ಮತ್ತೊಮ್ಮೆ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅನ್ನುವುದು ನಮ್ಮ ನಿಮ್ಮೆಲ್ಲರ ಹಾರೈಕೆ.
ವಿ.ಸೂ-Aaprobean Omega 3  Chia ಉತ್ಪನ್ನಗಳಿಗಾಗಿ
ಕೆ.ಆರ್.ಕೆ ಆಚಾರ್ಯ ರವರ ಉಡುಪಿಯ ಸ್ಪೋರ್ಟ್ಸ್ ಕನ್ನಡ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
Mob-6363022576.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

11 + three =