ಸ್ಪೋರ್ಟ್ಸ್ ಕೌನ್ಸಿಲ್ ಮಾಹೆ, ಮಣಿಪಾಲ ವತಿಯಿಂದ ಮ್ಯಾಜಿಕ್ ಕೋರ್ಸ್ ಮತ್ತು ಯೋಗ ಕ್ಯಾಂಪ್

ಸ್ಪೋರ್ಟ್ಸ್ ಕೌನ್ಸಿಲ್ ಮಾಹೆ, ಮಣಿಪಾಲ ವತಿಯಿಂದ ಮ್ಯಾಜಿಕ್ ಕೋರ್ಸ್ ಮತ್ತು ಯೋಗ ಕ್ಯಾಂಪ್

ಸ್ಪೋರ್ಟ್ಸ್ ಕೌನ್ಸಿಲ್ ಮಾಹೆ, ಮಣಿಪಾಲ ಇವರ ಆಶ್ರಯದಲ್ಲಿ ಮಕ್ಕಳಿಗಾಗಿ ಮಣಿಪಾಲದಲ್ಲಿ ಮ್ಯಾಜಿಕ್ ಕೋರ್ಸ್ ಮತ್ತು ಯೋಗ ಕ್ಯಾಂಪ್ ಆಯೋಜಿಸಲಾಗಿದೆ 2024 ರ ಅಕ್ಟೋಬರ್ 3 ರಿಂದ 5 ರವರೆಗೆ ಮ್ಯಾಜಿಕ್ ಕೋರ್ಸ್ ಶಿಬಿರ ಹಾಗೂ ಯೋಗ ಕ್ಯಾಂಪ್ 2024 ಅಕ್ಟೋಬರ್ 7 ರಿಂದ 18 ರವರೆಗೆ ನಡೆಯಲಿರುವುದು. ಈ ಎರಡೂ ಶಿಬಿರಗಳು ಮರೆನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮಣಿಪಾಲದಲ್ಲಿ ನಡೆಯಲಿವೆ.

ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಇವರಿಂದ ‘ಅಬ್ರಕಡಬ್ರ’ ಹೆಸರಿನ ಮ್ಯಾಜಿಕ್ ಕೋರ್ಸ್ ಅಕ್ಟೋಬರ್ 3 ರಿಂದ ಅಕ್ಟೋಬರ್ 5 ರವರೆಗೆ ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ. ಭಾಗವಹಿಸಲು ಇಚ್ಚಿಸುವ ಮಕ್ಕಳು ರೂಪಾಯಿ 2000 ಪಾವತಿಸಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.

ಅಕ್ಟೋಬರ್ 7 ರಿಂದ ಅಕ್ಟೋಬರ್ 18 ರವರೆಗೆ ಬೆಳಗ್ಗೆ 10:00 ಗಂಟೆಯಿಂದ 11:30 ಯವರೆಗೆ ಯೋಗ ಕ್ಯಾಂಪ್ ಏರ್ಪಡಿಸಲಾಗುವುದು. ಡಾ. ಲಾವ್ಯಾ ಶೆಟ್ಟಿ ಈ ಶಿಬಿರ ಮತ್ತು ತರಬೇತಿ ಕಾರ್ಯಕ್ರಮದ ಸಂಯೋಜಿಕರಾಗಿರುತ್ತಾರೆ. ಈ ಶಿಬಿರದಲ್ಲಿ ಭಾಗವಹಿಸುವವರು ಪ್ರವೇಶ ಶುಲ್ಕ 600 ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಪೋಸ್ಟರ್ ನಲ್ಲಿರುವ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *