ಬ್ರಹ್ಮಾವರ ತಾಲೂಕಿನ ನಂಚಾರಿನ ಪತಂಜಲಿ ಯೋಗ ಗುರುಗಳು ಹಾಗೂ ಉತ್ತಮ ಹೈನುಗಾರರು ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಚಕ್ಕೇರ ಇವರ 6 ಎಕರೆ ಭೂಮಿಯಲ್ಲಿ ಅನಾಥ,ಅಪಘಾತಕ್ಕೀಡಾದ ಹಾಗೂ ಕಟುಕರ ಕೈಗಳಿಂದ ರಕ್ಷಿಸಲ್ಪಡುವ ಗೋವುಗಳಿಗೆ ಆಶ್ರಯ ತಾಣ ಹಾಗೂ ಆಧುನಿಕ ಪಶುಚಿಕಿತ್ಸಾಲಯ ನಿರ್ಮಾಣಕ್ಕಾಗಿ ಕಾಮಧೇನು ಗೋಶಾಲೆ ಮಹಾಸಂಘ ಟ್ರಸ್ಟ್ (ರಿ) ಸ್ಥಾಪಿಸಲಾಗಿದೆ.
ನವೆಂಬರ್ 17 ರಂದು ಗೋಶಾಲೆಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.ಈ ಬಗ್ಗೆ ಸಂಸ್ಥೆಯ ವತಿಯಿಂದ ಕುಂದಾಪುರದ ವಕ್ವಾಡಿ ಮೂಲದ ಪ್ರಸಿದ್ಧ ಹೋಟೆಲ್ ಉದ್ಯಮಿ ದುಬೈ ನ ಫಾರ್ಚೂನ್ ಸಮೂಹ ಸಂಸ್ಥೆಗಳ ಮಾಲಕರು ಮತ್ತು ಆಡಳಿತ ನಿರ್ದೇಶಕರು,ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ(ಯು.ಎ.ಇ)ಯ ಅಧ್ಯಕ್ಷರು,ಕ್ರೀಡಾ ಪ್ರೋತ್ಸಾಹಕರು ಹಾಗೂ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವನ್ನು ಭೇಟಿ ಮಾಡಿ ತಿಳಿಸಲಾಗಿತ್ತು.
ನವೆಂಬರ್ 5 ಗೋಪೂಜೆಯ ಪುಣ್ಯದಿನದಂದು ಸ್ವಗ್ರಹಕ್ಕೆ ಆಹ್ವಾನಿಸಿ ಕಾಮಧೇನು ಗೋಶಾಲೆಗೆ ಆರ್ಥಿಕ ಸಹಾಯವನ್ನು ನೀಡಿ,ಮುಂದಿನ ದಿನಗಳಲ್ಲೂ ಕೂಡ ಗೋಶಾಲೆಯ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದರು.