ಟೋರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021-ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ)ವತಿಯಿಂದ 06-11-2021&07-11-2021 ರಂದು ನಡೆದ ಟೇಬಲ್ ಟೆನ್ನಿಸ್ ಪಂದ್ಯಾವಳಿಯು ಕ್ರೀಡಾ ಕ್ಷೇತ್ರದಲ್ಲೊಂದು ವಿಭಿನ್ನ ಮೈಲಿಗಲ್ಲನ್ನು ಸೃಷ್ಟಿಸಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಗೌತಮ್ ಶೆಟ್ಟಿ ಮಾತನಾಡಿ ” ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗದೆ ಕ್ರೀಡಾ ಮನೋಭಾವವನ್ನು ಹೆಚ್ಚಿಸಿಕೊಂಡರೆ ಮಾನಸಿಕ ,ದೈಹಿಕವಾಗಿ ಸದೃಢರಾಗಿರಲು ಸಾಧ್ಯ.ಇಂದು ಕ್ರೀಡಾ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಗಳಿದೆ.ಸಿಗುವ ಪ್ರತಿ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು “ಎಂದು ಕಿವಿಮಾತು ನೀಡಿದರು.
ನವೆಂಬರ್ 6 ರ ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉಳ್ಳಾಲದ ಶಾಸಕರಾದ ಯು.ಟಿ.ಖಾದರ್,ಮಾಜಿ ಶಾಸಕರಾದ ರಮಾನಾಥ ರೈ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿಸೋಜಾ, ಮಂಗಳೂರು ಉತ್ತರದ ಸಹಾಯಕ ಪೊಲೀಸ್ ಆಯುಕ್ತರಾದ ಮಹೇಶ್ ಕುಮಾರ್, ಝರಾ ಕನ್ವೆನ್ಷನ್ ಹಾಲ್ ನ ಮುಖ್ಯಸ್ಥರಾದ ಜಾಹೀರ್ ಝಕ್ರೀಯಾ, ಚಾರ್ಟೆಡ್ ಅಕೌಂಟೆಂಟ್ ಆಗಿರುವ ಎಸ್ ಎಸ್ ನಾಯಕ್, ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಆಟಗಾರರಾಗಿರುವ ಕೃನಾಲ್ ತೆಲಂಗ್, ಪದುಪಣಂಬೂರ್ ಪಂಚಾಯತ್ ನ ಸದಸ್ಯರಾಗಿರುವ ಮೋಹನ್ ದಾಸ್ ರವರು ಉಪಸ್ಥಿತರಿದ್ದರು.ನವೆಂಬರ್ 7 ರಂದು ನಡೆದ ಸಮಾರೋಪ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಶಾಸಕರಾಗಿರುವ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರಾಗಿರುವ ಅಭಯಚಂದ್ರ ಜೈನ್, ಮಂಗಳೂರು ಉತ್ತರದ ಮಾಜಿ ಶಾಸಕರಾಗಿರುವ ಮೊಹಿದಿನ್ ಬಾವ, ಪದುಪಣಂಬೂರ್ ಪಂಚಾಯತ್ ನ ಅಧ್ಯಕ್ಷೆಯಾಗಿರುವ ಮಂಜುಳಾ, ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿರುವ ಕಸ್ತೂರಿ ಪಂಜ, ಜಿಲ್ಲಾ ಪಂಚಾಯತ್ ನ ಸದಸ್ಯರಾಗಿರುವ ವಿನೋದ್ ಬೋಳೂರು, ಯುವ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಮಿಥುನ್ ರೈ, ಉದ್ಯಮಿಯಾಗಿರುವ ನಾಗಭೂಷಣ್ ರೆಡ್ಡಿ ಹಾಗೂ ರಾಷ್ಟ್ರೀಯ ತರಬೇತುದಾರರಾದ ಕೃಣಾಲ್ ತೇಲಂಗ್,ತಂಡಗಳ ಮಾಲೀಕರಾದ ಪ್ರತಿಭಾ ಕುಳಾಯಿ,ಜಯರಾಮ ಶೆಟ್ಟಿ,ಡಾ.ಅರವಿಂದ್ ಭಟ್,ರಾಜೀವ್ ಕುಡ್ಲ,ರಮೇಶ್ ಶೆಟ್ಟಿ,ಝಕ್ರೀಯಾ ಬಜ್ಪೆ,ಗಣೇಶ್ ಕಿಣಿ, ಝಾರ ಝಕ್ರೀಯಾ,ಅಜಿತ್ ಕೋಟ,ಉದ್ಯಮಿ ನಾಗಭೂಷಣ್ ಉಪಸ್ಥಿತರಿದ್ದರು.
ಸತತವಾಗಿ ಎರಡು ದಿನಗಳಲ್ಲಿ ನಡೆದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಶ್ರೀರಾಮ್ ಕೌಡೂರ್ ಮಾಲಕತ್ವದ ಉಡುಪಿ ಪೆಡ್ಲರ್ಸ್ ತಂಡವು 4-1 ಅಂತರದಿಂದ ವಿಜಯ್ ಹೆಗ್ಡೆ ಮಾಲಕತ್ವದ ಸವ್ಯಸಾಚಿ ಫಾಸ್ಟ್ ಫೀಟ್ ತಂಡವನ್ನು ಸೋಲಿಸಿ ಚಾಂಪಿಯನ್ ಕಿರೀಟ ಹಾಗೂ ಎರಡು ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಉಡುಪಿ ಪೆಡ್ಲರ್ಸ್ ತಂಡದಲ್ಲಿ
ತಂಡದ ನಾಯಕನಾಗಿ ಮೈಸೂರಿನ
ಅಕ್ಷಯ್ ಮಹಂತ ಹಾಗೂ ಸಹ ಆಟಗಾರರಾಗಿ ದೀವಿತ್ ಯಕ್ಕುಂಡಿ,ಕಿಶನ್ ಶೆಟ್ಟಿ,ನಹ್ಲಾ ಫಾತೀಮ,ಕುಶಾಲ್. ಪಿ.ನಾಯಕ್,ಷಣ್ಮುಖ,ಅರ್ಪಿತ್,ಅರುಷ್ ಶೆಟ್ಟಿ,ಪೂರ್ಣಿಮಾ ರಾಜ್,ಸಂದೀಪ್.ಎಸ್ ಕ್ರೀಡಾ ಅಂಕಣದಲ್ಲಿ ಮಿಂಚಿದ್ದರು. ರನ್ನರ್ಸ್ ಟ್ರೋಫಿ ಹಾಗೂ ಒಂದು ಲಕ್ಷ ನಗದು ಬಹುಮಾನವನ್ನು ಬಾಚಿಕೊಂಡ ಸವ್ಯಸಾಚಿ ಫಾಸ್ಟ್ ಫೀಟ್ ತಂಡದ ನಾಯಕನಾಗಿ ಅಶ್ವಿನ್ ಹನಗೋಡು ತಂಡವನ್ನು ಮುನ್ನಡೆಸಿ ಸಹ ಆಟಗಾರರಾದ ಮಂಜುನಾಥ್ ರಾಥೋಡ್,ತೃಷಾ ಹಮ್ಮನವರ್,ನರೇಂದ್ರ ಕಿಣಿ,ಶಶಾಂಕ್ ಅಜಿತ್ ಭಟ್,ವಿನಯ್ ಎಸ್.ಕೆ,
ಹಿಮಾಂಕ್ ಪಾಂಡೆ,ಪಿ.ಆರ್ ಪ್ರೇಮ್ ಕುಮಾರ್,ಹರ್ಷವರ್ಧನ್ ಟಿ.ಕೆ ಅತ್ಯದ್ಭುತವಾಗಿ ಕ್ರೀಡಾ ಪ್ರದರ್ಶನವನ್ನಿತ್ತರು.ವೈಯುಕ್ತಿಕ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ರಕ್ಷಿತ್ ಆರ್. ಬಿ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ತೆಲಂಗಾಣದ ಅಲಿ ಮೊಹಮ್ಮದ್ ಪಡೆದುಕೊಂಡರು
.ಈ ಪಂದ್ಯದ ಅಂಕ 3-2 ಆಗಿತ್ತು.ವೈಯುಕ್ತಿಕ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಶ್ಚಿಮ ಬಂಗಾಳದ ಕೌಶಿನಿನಾಥ್ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಮಹಾರಾಷ್ಟ್ರದ ಸೆನ್ಹೋರ ಸೋಸ್ಟರ್ ಡಿ ಸೋಜಾ ಪಡೆದುಕೊಂಡರು. ಈ ಪಂದ್ಯದ ಅಂಕ 3-0 ಆಗಿತ್ತು.