ಕ್ರೀಡಾ ಲೋಕದಲ್ಲಿ ತೂಫಾನಿ ಮೈಲುಗಲ್ಲನ್ನು ಸ್ಥಾಪಿಸಿದ,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ(ರಿ)ಇದರ ಸಂಸ್ಥಾಪಕರು,ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಗೌತಮ್ ಶೆಟ್ಟಿ ಯವರ ಸಾರಥ್ಯದಲ್ಲಿ ಮೇ 1 ರಿಂದ ಮೇ 10 ರ ತನಕ 10 ದಿನಗಳ ಕಾಲ ಹೊನಲು ಬೆಳಕಿನ ಅದ್ಧೂರಿಯ ಕ್ರೀಡಾ ಜಾತ್ರೆ ಟೊರ್ಪೆಡೋಸ್ ಚಾಂಪಿಯನ್ಸ್ ಲೀಗ್-ಸ್ಪೋರ್ಟ್ಸ್ ಕಾರ್ನಿವಲ್-2021″ ಹಮ್ಮಿಕೊಳ್ಳಲಾಗಿದೆ.

*ಕರ್ನಾಟಕ ರಾಜ್ಯದ ಕ್ರೀಡಾ ಲೋಕದ ಇತಿಹಾಸದಲ್ಲೇ ದಾಖಲೆಯ ಕ್ರೀಡಾಕೂಟ.*

ಉಡುಪಿ-ಮಂಗಳೂರು ಉಭಯ ಜಿಲ್ಲೆಗಳ 5 ವಿವಿಧ ಸ್ಥಳಗಳಲ್ಲಿ ನಡೆಯುವ ಈ ಕ್ರೀಡಾ ಜಾತ್ರೆಯಲ್ಲಿ ಲೆದರ್ ಬಾಲ್,ಟೆನ್ನಿಸ್ಬಾಲ್,ಬಾಕ್ಸ್ ಕ್ರಿಕೆಟ್,ಫುಟ್ಬಾಲ್, ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್,ಚೆಸ್ ಪಂದ್ಯಾಟಗಳು ನಡೆಯಲಿದ್ದು,ಗ್ರಾಮೀಣ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಭಾಗವಹಿಸಲಿದೆ ಹಾಗೂ ವಿಜೇತ ತಂಡಗಳು ಅತೀ ಗರಿಷ್ಟ ನಗದು ಹಾಗೂ ಆಕರ್ಷಕ ಬಹುಮಾನಗಳನ್ನು ಪಡೆಯಲಿದ್ದಾರೆಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ ಕುಂದಾಪುರ ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ 10 ದಿನಗಳ ಅದ್ಧೂರಿಯ ಕ್ರೀಡಾಕೂಟದ ನೇರ ಪ್ರಸಾರವನ್ನು ಬಿತ್ತರಿಸಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.