ಕೋಲಾರ ಶ್ರೀನಿವಾಸಪುರದ ಕ್ರೀಡಾ ಲೋಕದಲ್ಲಿ ದಾಖಲೆಯ ಇತಿಹಾಸ ಬರೆದ ಶ್ರೀನಿವಾಸಪುರ ಪ್ರೀಮಿಯರ್ ಲೀಗ್ (S.P.L) ಪಂದ್ಯಾಕೂಟಗಳ ಪ್ರಮುಖ ರೂವಾರಿ,M.K.S ಗ್ರೂಪ್ಸ್ ಮಾಲೀಕರಾದ ನದೀಮ್ ಅಖ್ತರ್ ಇವರ ದಕ್ಷ ಸಾರಥ್ಯದಲ್ಲಿ M.K.S ಕಪ್-2021 ಪಂದ್ಯಾಕೂಟ ಈ ಬಾರಿ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆಯಲಿದೆ.
ಮಾರ್ಚ್ 9,10 ಮತ್ತು 11 ರಂದು ಬೆಂಗಳೂರಿನ ಥಣಿಸಂದ್ರ ಬಳಿಯ ಸಂಪ್ರಸಿದ್ಧಿ ಸ್ಪೋರ್ಟ್ಸ್ ಎಸ್ಟಾಡಿನಿಯೋ ತಿರುಮೇನಹಳ್ಳಿಯ ಹುಲ್ಲುಹಾಸಿನ ಅಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ.
ಈ ಬಾರಿ 8 ತಂಡಗಳು ಭಾಗವಹಿಸಲಿದ್ದು ತಂಡಗಳ ವಿವರ ಹಾಗೂ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
1-ಸೈ ಬಾಯ್ಸ್
2-ಬಿ.ಹೆಚ್.ಸಿ
3-ಕೆ.ಜಿ.ಎನ್ ಟೀಮ್
4-ಆ್ಯಾಶಸ್ ಕ್ರಿಕೆಟ್ ಕ್ಲಬ್
5-ಬ್ರ್ಯಾಂಡ್ ಯುವಾ
6-ರಾಯಲ್ ಸ್ಟ್ರೈಕರ್ಸ್
7-ಹೆಚ್.ಸಿ.ಎ
8-ಹೆಚ್.ಎಮ್.ಎಸ್ ಚನ್ನಸಂದ್ರ
M.K.S ಟ್ರೋಫಿಯ ವಿಜೇತ ತಂಡ 3 ಲಕ್ಷ ನಗದು,ದ್ವಿತೀಯ ಸ್ಥಾನಿ 1.5 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರೆ,ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಟ ಪ್ರಶಸ್ತಿ ರೂಪದಲ್ಲಿ 2 ಸಾವಿರ ನಗದು,ಆಕರ್ಷಕ ವೈಯಕ್ತಿಕ ಬಹುಮಾನಗಳು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ ದ್ವಿಚಕ್ರ ವಾಹನ ನೀಡಲಾಗುತ್ತಿದೆ.
ಪಂದ್ಯಾಕೂಟಕ್ಕೆ ಚಲನಚಿತ್ರ ನಟರ ಸಹಿತ,ರಾಜಕೀಯ ಧುರೀಣರು ಹಾಗೂ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ.
M.Sports ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರೆ, ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.