ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿಯು ಭರ್ಜರಿಯಾಗಿ ಆರಂಭಗೊಂಡಿದೆ. ಬಿಗ್ ಬಾಸ್ ತಂಡ ಈಗಾಗಲೇ ಪ್ರಕಟಿಸಿರುವಂತೆ ಈ ಆವೃತ್ತಿಯಲ್ಲಿ ಸೆಲೆಬ್ರಿಟಿಗಳೇ ಇದ್ದಾರೆ.
ಈ ಬಾರಿಯ ಬಿಗ್ ಬಾಸ್ ಸಮಸ್ತ ಕನ್ನಡಿಗರ ಕುತೂಹಲ ಕೆರಳಿಸಿರುವ ವಿಚಾರವೆಂದರೆ 16 ನೇ ನಂಬರ್ ಸ್ಪರ್ಧಿಯ ರೂಪದಲ್ಲಿ
ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ಚಲನ ಚಿತ್ರ ನಟ,
ಸಿ.ಸಿ.ಎಲ್ ಸ್ಟಾರ್ ಪ್ಲೇಯರ್ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ ತಂಡದಲ್ಲಿ ಸಾಕಷ್ಟು ಮಿಂಚಿದ ಆಟಗಾರ ರಾಜೀವ್ ಹನು.
ಚಲನಚಿತ್ರ ರಂಗದ ಜೊತೆ ಸಿ.ಸಿ.ಎಲ್ ಹಾಗೂ ಕೆ.ಪಿ.ಎಲ್ ನಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಟೆನ್ನಿಸ್ಬಾಲ್ ಕ್ರಿಕೆಟ್ ಫ್ರೆಂಡ್ಸ್ ಬೆಂಗಳೂರು ತಂಡದ ಪರವಾಗಿ ಮಿಂಚಿದ ಕ್ರಿಕೆಟಿಗ ರಾಜೀವ್ ಹನು.
ಮೂಲತಃ ಆಡುಗೋಡಿ ತಂಡದ ಮೂಲಕ ಕ್ರಿಕೆಟ್ ಜೀವನ ಪ್ರಾರಂಭಿಸಿದ ರಾಜೀವ್ ಇವರ ಪ್ರತಿಭೆಗೆ ರಾಜ್ಯ ಮಟ್ಟದ ವೇದಿಕೆಯನ್ನು ಸೃಷ್ಟಿಸಿದ ತಂಡ ಫ್ರೆಂಡ್ಸ್ ಬೆಂಗಳೂರಿನ ರೇಣು ಗೌಡರು.2004 ರಲ್ಲಿ ಪಡುಬಿದ್ರಿ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್ ಅಂಗಣಕ್ಕೆ ಪಾದಾರ್ಪಣೆಗೈದ ರಾಜೀವ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.ಎಡಗೈ ದಾಂಡಿಗ ಇಮ್ರಾನ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ರಾಜೀವ್ ಬಿರುಸಿನ ಹೊಡೆತಗಳ ಮೂಲಕ ಕ್ಷಿಪ್ರಗತಿಯಲ್ಲಿ ರನ್ ಸರಾಸರಿ ಏರಿಸಿ,ರಾಜ್ಯದ ಅತ್ಯಂತ ಯಶಸ್ವೀ ಆರಂಭಿಕ ಜೋಡಿ ಖ್ಯಾತಿಗೆ ಪಾತ್ರರಾಗಿದ್ದು ಜೊತೆಗೆ ಫ್ರೆಂಡ್ಸ್ ಬೆಂಗಳೂರು ತಂಡ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಜಯಿಸುವಲ್ಲಿ ರಾಜೀವ್ ಪಾತ್ರ ಮಹತ್ತರವಾದದ್ದು.
ಸಿ.ಸಿ.ಬಿ ಯಲ್ಲಿ ಸೇವೆಯ ನಡುವೆ ಚಿತ್ರರಂಗದತ್ತ ವಿಪರೀತ ಒಲವಿನ ಕಾರಣ ಚಲನಚಿತ್ರ ರಂಗಕ್ಕೆ ಪಾದಾರ್ಪಣೆಗೈದ ರಾಜೀವ್,ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಹಾಗೂ ಆರ್.ಎಕ್ಸ್.ಸೂರಿ,ಬೆಂಗಳೂರು-56, ಉಸಿರೇ ಉಸಿರೇ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು,ಮುಂದಿನ ದಿನಗಳಲ್ಲಿ ಬಹು ನಿರೀಕ್ಷೆಯ ಚಲನಚಿತ್ರಗಳು ಸೆಟ್ಟೇರಲಿದೆ.
ಸಿನಿಮಾ ರಂಗದ ಮೂಲಕ ಕಿಚ್ಚ ಸುದೀಪ್ ನೆಚ್ಚಿನ ಆಟಗಾರರೆನಿಸಿಕೊಂಡು,ಕರ್ನಾಟಕ ಬುಲ್ಡೋಜರ್ ನ ಪರವಾಗಿ ವೇಗದ ಶತಕ ಸಹಿತ,ಅನೇಕ ಗೆಲುವಿನ ಇನ್ನಿಂಗ್ಸ್ ಕಟ್ಟಿ,ಸಿ.ಸಿ.ಎಲ್ ನ ಕ್ರಿಸ್ ಗೇಲ್ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕೆ.ಪಿ.ಎಲ್ ನಲ್ಲೂ ಅತ್ಯುತ್ತಮ ನಿರ್ವಹಣೆ ನೀಡಿದ್ದಾರೆ.
ಫ್ರೆಂಡ್ಸ್ ಬೆಂಗಳೂರು ತಂಡದಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಾಜೀವ್ ಹನು ಇವರು ರೇಣುಗೌಡರ ಮನೆಯ ಸದಸ್ಯರಂತೆ ಕಷ್ಟ,ಸುಖಗಳಲ್ಲಿ ಭಾಗಿಯಾಗುತ್ತಾರೆ.
ತನ್ನ ಒಡನಾಡಿಗಳನ್ನು,ಹಿರಿಯ ಕ್ರಿಕೆಟಿಗರನ್ನು ಗೌರವಿಸುವ ಪರಿಪಾಠವನ್ನು ಮೈಗೂಡಿಸಿಕೊಂಡಿದ್ದು,
ಸಮಾಜಮುಖಿಯಾಗಿ ಬದುಕನ್ನು ಸಾಗಿಸುತ್ತಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದ ರಾಜೀವ್ ಹನು ಇವರು ಚಲನಚಿತ್ರ ರಂಗ,ಸಿ.ಸಿ.ಎಲ್ ಹಾಗೂ ಕರ್ನಾಟಕ ಟೆನ್ನಿಸ್ಬಾಲ್ ಕ್ರಿಕೆಟ್ ನ ಗೌರವದ ಪ್ರತೀಕ.
ಬಿಗ್ ಬಾಸ್ ಮನೆಯಲ್ಲಿ ನಿಮ್ಮೆಲ್ಲಾ ಪ್ರತಿಭೆಗಳ ಅನಾವರಣಗೊಳ್ಳಲಿ
ಬಿಗ್ ಬಾಸ್ ನಿಮಗೆ ಮತ್ತಷ್ಟು ಯಶಸ್ಸನ್ನು ತಂದುಕೊಡಲಿ.ಸಿ.ಸಿ.ಎಲ್ ಹಾಗೂ ಟೆನ್ನಿಸ್ಬಾಲ್ ಕ್ರಿಕೆಟ್ ರಂಗದಲ್ಲಿ ನಿಮ್ಮ ಸೇವೆಯ ಮೂಲಕ ಕರ್ನಾಟಕ ರಾಜ್ಯವಲ್ಲದೇ ದೇಶ,ವಿದೇಶದೆಲ್ಲೆಡೆ ಅಪಾರ ಅಪಾರ ಅಭಿಮಾನಿ ಬಳಗ ಸಂಪಾದಿಸಿದ ನೀವು ಬಿಗ್ ಬಾಸ್ ನಲ್ಲಿ ಗೆದ್ದುಬನ್ನಿ,ಕನ್ನಡಿಗರ ಹೃದಯ ತುಂಬಿದ ಹಾರೈಕೆ ನಿಮ್ಮೊಂದಿಗಿದೆ.ನಿಮಗೆ ರಾಜ್ಯ ಟೆನ್ನಿಸ್ ಕ್ರಿಕೆಟ್ ಹಾಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಶುಭ ಹಾರೈಕೆಗಳು….