ಉದ್ಯಾವರದಲ್ಲಿ ಕ್ರೀಡಾ ಸಂಘಟನೆಗಳ ಜೊತೆಗೆ ಸಾಮಾಜಿಕ ಸೇವೆಯಲ್ಲೂ ಮಾದರಿಯಾಗಿ ಮೆರೆದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿ
ಮನುಕುಲವೇ ಕೊರೋನ ಹೊಡೆತಕ್ಕೆ ಸಿಲುಕಿದೆ. ಇಡೀ ವಿಶ್ವವನ್ನೇ ತಲ್ಲಣ ಉಂಟು ಮಾಡಿದ ಕೊರೋನ ವಿರುದ್ಧ ನಿರಂತರ ಹೋರಾಟ ನಡೆಯುತ್ತಲೇ ಇದೆ. ಇದೀಗ ಲಾಕ್ ಡೌನ್ ಜಾರಿಗೆ ಬಂದಿರುವ ಈ ಹಿನ್ನೆಲೆಯಲ್ಲಿ ಅನೇಕ ಬಡ ಕುಟುಂಬಗಳು ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು ಸಹಾಯ ಮಾಡುವ ಮೂಲಕ ಕೈ ಜೋಡಿಸಿದ್ದಾರೆ.
ಈ ನಿಟ್ಟಿನಲ್ಲಿ ಸಭಾ ಕ್ರಿಕೆಟರ್ಸ್ ನ ವ್ಯವಸ್ಥಾಪಕರು, ಮೊತ್ತ ಮೊದಲ ಬಾರಿಗೆ ಉದ್ಯಾವರದಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ಪಂದ್ಯಾವಳಿ ಹಾಗೂ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ ಸಂಘಟಿಸಿದ ಸಂಘಟಕ, ಕರ್ನಾಟಕ ಕೋವಿಡ್ 19 ಇದರ ಟಾಸ್ಕ್ ಫೋರ್ಸ್ ಇದರ ಸದಸ್ಯ ಉದ್ಯಾವರ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರು ಆಗಿರುವ ರಿಯಾಜ್ ಪಳ್ಳಿ ನೇತೃತ್ವದಲ್ಲಿ
ಉದ್ಯಾವರದ ಖ್ಯಾತ ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ತನ್ನ ಹಲಿಮಾ ಸಾಬ್ಜು ಅಡಿಟೋರಿಯಂ ಟ್ರಸ್ಟ್ ಮತ್ತು ಮುಸ್ಲಿಂ ಯುನಿಟಿ ದುಬಾಯಿ ಸಂಸ್ಥೆಯ ವತಿಯಿಂದ ಅತಿ ಅಗತ್ಯ ಇರುವ ಎಲ್ಲಾ ವರ್ಗದ ಜನರಿಗೆ ಮನೆ ಮನೆಗೆ ತೆರಳಿ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಊಟದ ವ್ಯವಸ್ಥೆಯನ್ನು ಗುಡ್ಡೆ ಅಂಗಡಿ ಫ್ರೆಂಡ್ಸು ಉದ್ಯಾವರ ಇವರ ವತಿಯಿಂದ ಹಮ್ಮಿಕೊಂಡಿದ್ದ ಈ ಸೇವೆ ಬೆಳಿಗ್ಗೆ 7 ಘಂಟೆಯಿಂದ 11 ಘಂಟೆಯವರೆಗೆ ಲಭ್ಯವಿದೆ.
ಈ ಸೇವೆಯ ಜೊತೆಗೆ ಸ್ವತಃ ರಿಯಾಜ್ ಅವರ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಊರಿನ ಅಂಗಡಿ ಮಾಲೀಕರಿಗೆ ಹಾಗೂ ಗ್ರಾಹಕರಿಗೆ ಕೊರೋನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗುಂಪು ಗುಂಪಾಗಿ ಸೇರುವ ಜನರಿಗೆ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದಾರೆ .
ಸುಮಾರು 60 ಕ್ಕೂ ಹೆಚ್ಚು ಕುಟುಂಬಗಳಿಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ವೆಚ್ಚದ ಗ್ರಹಬಳಕೆ ವಸ್ತುಗಳನ್ನು ಮನೆ ಮನೆಗೆ ತೆರಳಿ ನೀಡುವಲ್ಲಿ ಈ ಟ್ರಸ್ಟ್ ನ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಸ್ವತಃ ಸಮಾಜ ಸೇವಕರಾಗಿರುವ ರಿಯಾಜ್ ಪಳ್ಳಿ, ಸಾಧಿಕ್ ಹಂಝ, ಇಮ್ತಿಯಾಜ್ ಭಾಷಾ, ಆಬಿದ್ ಅಲಿ, ಅನ್ವರ್ ಹುಸೇನ್ ಮುಂತಾದವರು ಉಪಸ್ಥಿತರಿದ್ದರು.