20.6 C
London
Tuesday, June 18, 2024
Home#covid19ಸಮಾಜಸೇವೆಯೇ ಜೀವನ-ನಾಗಾರ್ಜುನ

ಸಮಾಜಸೇವೆಯೇ ಜೀವನ-ನಾಗಾರ್ಜುನ

Date:

Related stories

ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ...

ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….???

ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು...

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...
spot_imgspot_img
ನಾಗಾರ್ಜುನ್.ಡಿ.ಪೂಜಾರಿಯವರು ದಿನೇಶ್. ಪೂಜಾರಿ ಹಾಗೂ ಜಯ. ಡಿ. ಪೂಜಾರಿ. ರವರ ಪುತ್ರನಾಗಿದ್ದು, ಉಡುಪಿಯ ಗುಂಡಿಬೈಲಿನಲ್ಲಿ ನೆಲೆಸಿದ್ದಾರೆ. ಉಡುಪಿ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಸತತವಾಗಿ 405 ಕೋರೋನಾ ಸೋಂಕಿತ ಮೃತದೇಹವನ್ನು ದಹನ ಮಾಡುವ ಕಾರ್ಯದಲ್ಲಿ,ಸ್ನೇಹಿತರಾದ ಮನೋಹರ್ ಹಾಗೂ ಸುಮಂತ್ ಈರ್ವರಿಗೂ ಸಾರಥಿಯಂತೆ ಇದ್ದು ಅವರಿಗೂ ಧೈರ್ಯ ನೀಡುತ್ತ ಮಾನವೀಯತೆಯಿಂದ ನಿಸ್ವಾರ್ಥವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಇಂತಹ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.
*ಕ್ರಿಕೆಟ್ ಲೋಕದ ಅತ್ಯದ್ಭುತ ಪ್ರತಿಭೆ ಕೂಡಾ ಹೌದು ನಾಗಾರ್ಜುನ್*
ತನ್ನ ಹದಿಮೂರನೆಯ ವಯಸ್ಸಿಗೇ ದೊಡ್ಡಣಗುಡ್ಡೆ ಫ್ರೆಂಡ್ಸ್ ತಂಡದ ಮೂಲಕವಾಗಿ ಟೆನಿಸ್ ಕ್ರಿಕೆಟ್ ಗೆ ಪರಿಚಯ ಕಂಡು ನಂತರ ಗುರುಶ್ರೀ ಗುಂಡಿಬೈಲು ಹಾಗೂ ವಿಷ್ಣುಮೂರ್ತಿ ದೊಡ್ಡಣಗುಡ್ಡೆ, ಸಾಟರ್ಡೇ ಪ್ಯಾಂಥರ್ಸ್ ಇಂದ್ರಾಳಿ ಹಾಗೂ ಲೋಕಲ್ ಬಾಯ್ಸ್ ಉಡುಪಿ ತಂಡದ ಪರವಾಗಿ ಬಹಳಷ್ಟು ಪಂದ್ಯಾಟವನ್ನು ಗೆಲ್ಲಿಸಿಕೊಟ್ಟ ಕ್ರಿಕೆಟಿಗ.
*ಜಿಲ್ಲೆ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಆಲ್-ರೌಂಡರ್ ಆಟಗಾರನಾಗಿ ಗುರುತಿಸಿಕೊಂಡರು*. ಟೆನಿಸ್ ಕ್ರಿಕೆಟ್‌ನ ಜನಪ್ರಿಯ ತಂಡಗಳಾದ ಉಡುಪಿಯ ಎ.ಕೆ. ಸ್ಪೋರ್ಟ್ಸ್, ಉಡುಪಿ ಫ್ರೆಂಡ್ಸ್, ಬಿಬಿಸಿ ಅಗ್ರಹಾರ, ಸೈಮಂಡ್ಸ್ ಕಡಿಯಾಳಿ, ರಿಯಲ್ ಫೈಟರ್ಸ್ ನಂತಹ ತಂಡಗಳನ್ನು ಪ್ರತಿನಿಧಿಸಿ ಅಪಾರ ಯಶಸ್ಸನ್ನು ಕೂಡಾ ತನ್ನದಾಗಿಸಿಕೊಂಡಿದ್ದಾರೆ.
ಕರಾವಳಿಯ ಭಾಗದಲ್ಲಿ ಜನಪ್ರಿಯತೆಯನ್ನು ಪಡೆದಿರುವ 40 ಗಜಗಳ ಮಾದರಿಯ ಪಂದ್ಯಾಕೂಟಗಳಲ್ಲಿ ಆ ಪಂದ್ಯಾಕೂಟಗಳ ಶ್ರೇಷ್ಠ ತಂಡಗಳೆನಿಸಿಕೊಂಡ ನಿಸರ್ಗ ಕಿದಿಯೂರು,ಬಗ್ಗಾ ಫ್ರೆಂಡ್ಸ್ ಕುರ್ಕಲ್,ಜಾನ್ಸನ್ ಕುಂದಾಪುರ, ಚಾಲೆಂಜ್ ಕುಂದಾಪುರ , ಈಗಲ್ಸ್ ಕುಂಭಾಶಿಯ ಪರವಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ.
2011 ರಿಂದ ಈಚೆಗೆ ತನ್ನನ್ನು ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಇಲ್ಲಿಯವರೆಗೆ ತನ್ನ ಸಾಧನೆಗಾಗಿ 350 +ಕ್ಕೂ ಮಿಗಿಲಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ, 170ಕ್ಕೂ ಹೆಚ್ಚು ಉತ್ತಮ ದಾಂಡಿಗ ಹಾಗೂ ಉತ್ತಮ ಬೌಲರ್ ಪ್ರಶಸ್ತಿ ಮತ್ತು 45 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಇವರ ಮುಡಿಗೇರಿದೆ.
ಉಡುಪಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ತಂಡಕ್ಕೆ ಸತತ ಮೂರು ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್ ತರಬೇತಿ ನೀಡಿ ಒಟ್ಟು ನಾಲ್ಕು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ ತನ್ನ ಉತ್ತಮ ರೀತಿಯ ದಾಂಡಿಗ ಹಾಗೂ ನಿಖರವಾಗಿ ಚೆಂಡನ್ನು ತಿರುಗಿಸಬಲ್ಲ ಚಾಣಾಕ್ಷ ಎಸೆತಗಾರನಾಗಿ ತನ್ನನ್ನು ಗುರುತಿಸಿಕೊಂಡು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿಕೊಂಡಿದ್ದಾರೆ.
“ಕೋರೋನಾ ಪ್ರಾರಂಭವಾದಾಗ ಪಾಸಿಟಿವ್ ಬಂದ ಪ್ರಕರಣದ ಶವವನ್ನು ಬೀಡಿನಗುಡ್ಡೆಯಲ್ಲಿ ಸುಡಲಾಗಿತ್ತು . ಇದು ಅಲ್ಲಿಗೆ ಬರುವ ಸಾರ್ವಜನಿಕರಿಗೆ ಆತಂಕ ಹುಟ್ಟಿಸಿತ್ತು. ಆದ್ದರಿಂದ ಇಂದ್ರಾಳಿಯಲ್ಲಿರುವ ಶವಾಗಾರವನ್ನು ಸ್ವಚ್ಛ ಗೊಳಿಸಿ ಅಲ್ಲಿ ಸುಡುವ ಕೆಲಸ ಆರಂಭಿಸಿದ್ದೆ. ಐವತ್ತು ಶವಗಳನ್ನ ಸಂಸ್ಕಾರ ಮಾಡುವವರೆಗೆ ಮನೆಯವರಿಗೂ ಗೊತ್ತಿರಲಿಲ್ಲ. ಇಲ್ಲಿ ಎರಡು ಹೆಣ ಸುಡುವ ಪೆಟ್ಟಿಗೆ ಇದೆ. ಈ ಹಿಂದೆ ಕೋವಿಡ್ ನಿಂದ ಮರಣ ಹೊಂದಿದವರನ್ನು ಹೂಳಲಾಗ್ತಾ ಇತ್ತು.
ಆದರೆ ಅದು ಹಿಂದುಗಳ ಕ್ರಮವಲ್ಲ. ಸತ್ತ ಮೇಲೆ ಮನೆಯವರು ಬೂದಿಯೂ ಸಿಕ್ಕಿಲ್ಲ ಎಂಬ ಪಶ್ಚಾತ್ತಾಪ ಪಡಬಾರದಲ್ಲ. ಪಿಪಿಇ ಕಿಟ್ ಬಳಸಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ, ಮನೆಯ ಒಳಗೆ ಹೋಗುವ ಮೊದಲು ನನ್ನ ಮತ್ತು ಮನೆಯವರ ಆರೋಗ್ಯದ ದೃಷ್ಟಿಯಿಂದ ಸ್ವಚ್ಚತೆಯನ್ನು ಮಾಡಿಕೊಳ್ಳುವುದನ್ನು ಮರೆಯುವುದಿಲ್ಲ”.
“ಒಂದು ಹೆಣ ಸುಡಲು 350 ರಿಂದ 400 ಕೆಜೆ , ಅಂದರೆ ರೂ 1200 ಕಟ್ಟಿಗೆ ಬೇಕಾಗುತ್ತದೆ. ಕೆಲವರು ಶವ ಸಂಸ್ಕಾರಕ್ಕೆ ಹಣ ಕೊಡುತ್ತಾರೆ. ಇನ್ನು ಬಡವರು ಅಷ್ಟು ಶಕ್ತರಾಗಿರುವುದಿಲ್ಲ. ಆಗ ನಾವೇ ಮುಂದೆ ನಿಂತು ನಿಭಾಯಿಸುತ್ತೇವೆ. ಈ ಎಲ್ಲಾ ಕೆಲಸಕ್ಕೆ ನಗರಸಭೆಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಇದೆ. ಕೊರೊನ ಸಂಕಷ್ಟ ಸಮಯದಲ್ಲಿ ಇದು ಒಂದು ಸಣ್ಣ ಸೇವೆ ಎಂದು ಕೆಲಸ ಮುಂದುವರಿಸಿದ್ದೇನೆ”, ಎನ್ನುತ್ತಾರೆ ನಾಗಾರ್ಜುನ್.
ಲಾಕ್ ಡೌನ್ ಶುರುವಾದಾಗಿನಿಂದ ಒಂದು ರಜೆಯ ನ್ನೂ ತೆಗೆದುಕೊಂಡಿಲ್ಲವಂತೆ ನಾಗಾರ್ಜುನ್. ಆಗಲೂ ಸ್ಯಾನಿಟೈಸೇಶನ್, ನಿರಾಶ್ರಿತರಿಗೆ ಊಟ ಕೊಡುವುದು ನಡೆದೇ ಇತ್ತು. ಅಲ್ಲದೇ ಪ್ರತಿ ದಿನ 10-30 ಮನೆಗಳಿಗೆ ಹೋಗಿ ಕೊರೋನಾ ಜಾಗ್ರತಿ ಮೂಡಿಸುವ ಕೆಲಸ ಕೂಡ ಮಾಡ್ತ ಇದ್ದಾರೆ.
ಇನ್ನು ನಿತ್ಯದ ಸೇವೆ ಹೊರತು ಪಡಿಸಿ ಕ್ರಿಕೆಟ್ ಆಡುವುದು ಇವರ ಆಸಕ್ತಿ. ಈಗ ಕೆಲಸದ ಒತ್ತಡದಿಂದ ಆಡಲು ಆಗುತ್ತಿಲ್ಲ. ಆದರೂ ಸ್ಥಳೀಯ ಕಡೆ ಕ್ರಿಕೆಟ್ ಪಂದ್ಯಾಟವಿದ್ದರೆ ಇವರು ಹಾಜರ್. ಇಷ್ಟು ಕೆಲಸ ನಿರಂತರ ಮಾಡುತ್ತಿದ್ದರೂ ಎಲೆ ಮರೆ ಕಾಯಿಯಂತೆ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ.

ಕೊರೋನಾ ವಾರಿಯರ್ಸ್‌ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ನಾಗಾರ್ಜುನ ಇವರ ಸಮಾಜ ಸೇವೆಯನ್ನು ಮನಗಂಡು ಇತ್ತೀಚೆಗಷ್ಟೇ ಉಡುಪಿ ಶ್ರೀ ಕೃಷ್ಣ ಮಠದ ಸಪ್ತೋತ್ಸವ ಕಾರ್ಯಕ್ರಮದಲ್ಲಿ ರಾಜಾಂಗಣದ ನರಿಹರಿತೀರ್ಥ ವೇದಿಕೆಯಲ್ಲಿ,
ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ “ಕೃಷ್ಣಾನುಗ್ರಹ” ಪ್ರಶಸ್ತಿ ನೀಡಿ ಗೌರವಿಸಿದೆ.ಏಪ್ರಿಲ್ 3 ರಂದು ಕುಂದಾಪುರದಲ್ಲಿ ನಡೆದ ಸ್ಪೋರ್ಟ್ಸ್ ಕನ್ನಡ “ಯುಗಾಂತರ” ಕಾರ್ಯಕ್ರಮದಲ್ಲಿ ರಾಜ್ಯದ ಹಿರಿಯ ಆಟಗಾರರ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ನಡೆದಿದೆ.ಈ ವರೆಗೆ ಜಿಲ್ಲೆಯಾದ್ಯಂತ 20 ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ನಾಗಾರ್ಜುನ ಇವರನ್ನು ಗುರುತಿಸಿ ಗೌರವಿಸಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

seventeen + two =