ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೋವಿಡ್-19
ಕೊರೋನಾ ಸಾಮಾನ್ಯ ಜನಜೀವನವನ್ನೇ ಅಸ್ತವ್ಯಸ್ತವನ್ನಾಗಿಸಿದೆ.
ಈ ನಿಟ್ಟಿನಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 8 ವಾರ್ಡ್ ಮತ್ತು 2 ಪಂಚಾಯತ್ ನ ಸುಮಾರು 10,000 ಮನೆಗಳಿಗೆ ಪ್ರತಿದಿನ ಅನ್ನದಾಸೋಹ,ಕುಡಿಯುವ ನೀರಿನ ವ್ಯವಸ್ಥೆ,ರೇಷನ್,ತರಕಾರಿ, ಉಚಿತ ಮಾಸ್ಕ್ ಗಳನ್ನು ನೀಡುವ ಕಾರ್ಯದಲ್ಲಿ 90 ರ ದಶಕದ ಕ್ರಿಕೆಟ್ ಪಟು,ಜನಪ್ರಿಯ ಕರ್ನಾಟಕ ಹಾಗೂ ಬೆಂಗಳೂರಿನ ಪ್ರತಿಷ್ಟಿತ ತಂಡಗಳನ್ನು ಮುನ್ನಡೆಸಿದ ಖ್ಯಾತಿಯ,ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕೆ.ಪಿ.ಸಿ.ಸಿ ಸದಸ್ಯರಾದ ಪಿ.ಎನ್.ಕೃಷ್ಣಮೂರ್ತಿ ಯವರು ಮನೆ ಮನೆಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜಾಲಹಳ್ಳಿಯಲ್ಲಿರುವ ಪಿ.ಎನ್.ಕೆ ಮಾಲೀಕತ್ವದ ಕೃಷ್ಣಚಂದ್ರ ಸಭಾಭವನದಲ್ಲಿ ಊಟವನ್ನು ತಯಾರಿಸಿ ವಾಹನಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ.
ಈ ಸಂದರ್ಭ ಪಿ.ಎನ್.ಕೆ ಯವರ ಅವರ ಪುತ್ರ ಆಕಾಶ್ ಜೊತೆ 8 ವಾರ್ಡ್ ಹಾಗೂ 2 ಪಂಚಾಯತ್ ನ ನಾಯಕರಾದ ನಾರಾಯಣ ಸ್ವಾಮಿ,ರವಿ,ಸೋಮಣ್ಣ,ಮಂಜು, ಪ್ರಕಾಶ್ ಸಹಿತ ಕಾರ್ಯಕರ್ತರು ಕೈ ಜೋಡಿಸಿದ್ದಾರೆ.