ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್, ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಹಿರಿಮಗ ಸಮಿತಿ ದ್ರಾವಿಡ್ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತ ಅಂಡರ್-19 ತಂಡ ಸೆಪ್ಟೆಂಬರ್ 21ರಿಂದ ಅಕ್ಟೋಬರ್ 10ರವರೆಗೆ ಪ್ರವಾಸಿ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ ನಾಲ್ಕು ದಿನಗಳಲ್ಲಿ 2 ಪಂದ್ಯಗಳನ್ನಾಡಲಿದೆ. ಏಕದಿನ ಸರಣಿ ಪಾಂಡಿಚೇರಿಯಲ್ಲಿ ಹಾಗೂ ನಾಲ್ಕು ದಿನಗಳ ಪಂದ್ಯ ಚೆನ್ನೈನಲ್ಲಿ ನಡೆಯಲಿವೆ.
ಏಕದಿನ ಸರಣಿಗೆ ಭಾರತ ಅಂಡರ್-19 ತಂಡ: ಮೊಹಮ್ಮದ್ ಅಮಾನ್ (ನಾಯಕ), ರುದ್ರ ಪಟೇಲ್ (ಉಪನಾಯಕ), ಸಾಹಿಲ್ ಪರಾಖ್, ಕಾರ್ತಿಕೇಯ ಕೆ.ಪಿ, ಕಿರಣ್ ಚೊರ್ಮಾಲೆ, ಅಭಿಜ್ಞಾನ ಕುಂಡು, ಹರ್ವಾನ್ಶ್ ಸಿಂಗ್, ಸಮಿತ್ ದ್ರಾವಿಡ್, ಯುಧಜಿತ್ ಗುಹಾ, ಸಮರ್ಥ್ ಎನ್, ನಿಖಿಲ್ ಕುಮಾರ್, ಚೇತನ್ ಶರ್ಮಾ, ಹಾರ್ದಿಕ್ ರಾಜ್, ರೋಹಿತ್ ರಜವತ್, ಮೊಹಮ್ಮದ್ ಎನಾನ್.
ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಅಂಡರ್-19 ತಂಡ: ವೈಭವ್ ಸೂರ್ಯವಂಶಿ, ನಿತ್ಯಾ ಪಾಂಡ್ಯ, ವಿಹಾನ್ ಮಲ್ಹೋತ್ರ, ಸೋನಮ್ ಪಟವರ್ಧನ್ (ನಾಯಕ), ಕಾರ್ತಿಕೇಯ ಕೆ.ಪಿ, ಸಮಿತ್ ದ್ರಾವಿಡ್, ಅಭಿಜ್ಞಾನ ಕುಂಡು, ಹರ್ವನ್ಷ್ ಸಿಂಗ್, ಚೇತನ್ ಶರ್ಮಾ, ಸಮರ್ಥ್ ಎನ್., ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್ಜೀತ್ ಸಿಂಗ್, ಆದಿತ್ಯ ಸಿಂಗ್, ಮೊಹಮ್ಮದ್ ಎನಾನ್.