15.7 C
London
Tuesday, September 10, 2024
Homeಕ್ರಿಕೆಟ್ಭಾರತೀಯ ಕ್ರಿಕೆಟ್ ಎಂದಿಗೂ ಮರೆಯಲಾಗದ.. ಮರೆಯಬಾರದ ಮಹನೀಯರ ಹುಟ್ಟುಹಬ್ಬ..!

ಭಾರತೀಯ ಕ್ರಿಕೆಟ್ ಎಂದಿಗೂ ಮರೆಯಲಾಗದ.. ಮರೆಯಬಾರದ ಮಹನೀಯರ ಹುಟ್ಟುಹಬ್ಬ..!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ವಕಾರ್ ಯೂನಿಸ್, ಅಲನ್ ಡೊನಾಲ್ಡ್, ಕರ್ಟ್ಲಿ ಆ್ಯಂಬ್ರೊಸ್’ರಂತಹ ಭಯಾನಕ ವೇಗಿಗಳ ವಿಧ್ವಂಸಕ ದಾಳಿಗೆ 90ರ ದಶಕ ಸಾಕ್ಷಿಯಾಗಿತ್ತು.

ನೆನಪಿರಲಿ.. ಇವರಿಗೆಲ್ಲಾ ಹೆಗಲಿಗೆ ಹೆಗಲು ಕೊಡಲು ಸಮರ್ಥ ಜೊತೆಗಾರರು ತಂಡದಲ್ಲಿದ್ದರು.

Amidst it all, One bowler from India who stood tall & carried his team more than any of these legends alone. ಅವರು ಮೈಸೂರು ಎಕ್ಸ್’ಪ್ರೆಸ್, ನಮ್ಮ ಹೆಮ್ಮೆಯ ಕನ್ನಡಿಗ ಜಾವಗಲ್ ಶ್ರೀನಾಥ್..!

The great ಕಪಿಲ್ ದೇವ್ ಮೈದಾನದಲ್ಲಿ ಗಿಡಗಳನ್ನು ನೆಟ್ಟರೆ; ಜಹೀರ್ ಖಾನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಅವರಂತವರು ಹಣ್ಣುಗಳನ್ನು ನೀಡುವ ಮರಕ್ಕೆ ಆಸರೆಯಾದವರು. ಇದರ ಮಧ್ಯೆ ಭಾರತದ ಕ್ರಿಕೆಟ್ ಮೈದಾನದಲ್ಲಿ ವೇಗದ ಬೌಲಿಂಗ್ ಎಂದು ಕರೆಯಲ್ಪಡುವ ಈ ಸಸ್ಯದ ರಕ್ಷಣೆಗೆ ಅವಿರತವಾಗಿ ಶ್ರಮಿಸಿದ ಒಬ್ಬ ತೋಟಗಾರ ಯಾರಾದರೂ ಇದ್ದರೆ ಅದು ನಿಸ್ಸಂದೇಹವಾಗಿ ಜಾವಗಲ್ ಶ್ರೀನಾಥ್.

ರಣಜಿ ಪದಾರ್ಪಣೆಯ ಇನ್ನಿಂಗ್ಸ್’ನಲ್ಲೇ ಹ್ಯಾಟ್ರಿಕ್ ಸಾಧನೆಯೊಂದಿಗೆ 5 ವಿಕೆಟ್ ಪಡೆದಿದ್ದ ಶ್ರೀನಾಥ್ 1990ರಲ್ಲಿ ಭಾರತ ತಂಡಕ್ಕೆ ಕಾಲಿಟ್ಟು ವೇಗದ ಬೌಲಿಂಗ್ ಜವಾಬ್ದಾರಿಗೆ ಹೆಗಲಾದವರು.

90ರ ದಶಕದ
ಸಿಡಿಲಮರಿ ಸನತ್ ಜಯಸೂರ್ಯ ಕ್ರಿಕೆಟ್ ಜಗತ್ತಿನ ಘಾತಕ ವೇಗಿಗಳನ್ನು ಹುರಿದು ಮುಕ್ಕುತ್ತಿದ್ದಾಗ.. ಜಯಸೂರ್ಯನಂಥಾ ಜಯಸೂರ್ಯನನ್ನ ಕನಸಲ್ಲೂ ಬೆಚ್ಚಿ ಬೀಳಿಸಿದ ಬೌಲರ್ ಯಾರಾದರೂ ಇದ್ದರೆ, ಅದು ಜಾವಗಲ್ ಶ್ರೀನಾಥ್.

ಜಾವಗಲ್ ಶ್ರೀನಾಥ್ ಭಾರತೀಯ ಕ್ರಿಕೆಟ್ ಕಂಡ ಮೊಟ್ಟ ಮೊದಲ genuine ಫಾಸ್ಟ್ ಬೌಲರ್.

ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್’ನಲ್ಲಿ ವೇಗದ ಬೌಲರ್’ಗಳು ಸುದೀರ್ಘ ಸ್ಪೆಲ್’ಗಳನ್ನು ಮಾಡುವುದು ತುಂಬಾ ಅಪರೂಪ. ಶ್ರೀನಾಥ್ 90-95 mph ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಎಕ್ಸ್’ಪ್ರೆಸ್ ಫಾಸ್ಟ್ ಬೌಲರ್. ಹೀಗಿದ್ದರೂ ಇಡೀ ಬೌಲಿಂಗ್ ಲೈನಪ್’ನಲ್ಲಿ ಅತೀ ಹೆಚ್ಚು ಓವರ್’ಗಳನ್ನು ಮಾಡುತ್ತಿದ್ದವರು ಅವರೇ. ಇಂತಹ heavy workload ಮಧ್ಯೆ ಗಾಯಗಳು ಸಹಜ. 1996-97ರ ಸೀಸನ್’ನಲ್ಲಿ ಜಾವಗಲ್ ಶ್ರೀನಾಥ್ ಭುಜದ ಗಾಯಕ್ಕೊಳಗಾಗುತ್ತಾರೆ. rotator cuff injury 1997ರ ಮಾರ್ಚ್ ಹೊತ್ತಿಗೆ 2nd stage ತಲುಪುವ ಮೊದಲು ಆ ಸೀಸನ್’ನ 9 ಟೆಸ್ಟ್ ಮ್ಯಾಚ್’ಗಳಲ್ಲಿ 429 ಓವರ್ ಬೌಲಿಂಗ್ ಮಾಡುತ್ತಾರೆ.

9 ಟೆಸ್ಟ್’ಗಳಲ್ಲಿ 46 ವಿಕೆಟ್’ಗಳನ್ನು ಪಡೆದಿದ್ದ ಶ್ರೀನಾಥ್ ತಮ್ಮ ಫಾರ್ಮ್’ನ ಉತ್ತುಂಗದಲ್ಲಿದ್ದ ಸಮಯವದು. ಗಾಯ ಅದೆಷ್ಟು ಗಂಭೀರವಾಗಿ ಕಾಡಿತು ಎಂದರೆ ಮತ್ತೆ ಬೌಲಿಂಗ್ ಮಾಡಬಲ್ಲರೇ ಎಂಬ ಅನುಮಾನ ಕಾಡಿತ್ತು. ಸ್ವತಃ ಶ್ರೀನಾಥ್ ಅವರಿಗೂ ಅಂಥದ್ದೊಂದು ಯೋಚನೆ ಬಂದಿತ್ತೋ ಗೊತ್ತಿಲ್ಲ. ಆ ಸಮಯವನ್ನು ಶ್ರೀನಾಥ್ ತಮ್ಮ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಂಡರು. ಕಾಲೇಜಿಗೆ ಹೋಗಿ ಡಿಗ್ರಿ ಪಡೆದುಕೊಂಡರು.
ಮುಂದಿನ ದಿನಗಳಲ್ಲಿ ಗಾಯದಿಂದ ಚೇತರಿಸಿಕೊಂಡು ಕ್ರಿಕೆಟ್ ಮೈದಾನಕ್ಕೆ ಮರಳಿದರೂ ಬೌಲಿಂಗ್’ನಲ್ಲಿ ಹಿಂದಿನ ಎಕ್ಸ್’ಪ್ರೆಸ್ ವೇಗ ಇರಲಿಲ್ಲ.

ಜಹೀರ್ ಖಾನ್’ಗೆ ಒಬ್ಬ ಆಶಿಶ್ ನೆಹ್ರಾ ಇದ್ದ.. ಶ್ರೀಶಾಂತ್, ಬಾಲಾಜಿಯಂಥಾ ಜೊತೆಗಾರರಿದ್ದರು. ಬುಮ್ರಾಗೊಬ್ಬ ಶಮಿ, ಸಿರಾಜ್’ನಂಥಾ ಪಾರ್ಟ್ನರ್’ಗಳಿದ್ದಾರೆ. ಆದರೆ ಜಾವಗಲ್ ಶ್ರೀನಾಥ್ ಅವರಿಗೆ ಹೆಗಲಿಗೆ ಹೆಗಲು ಕೊಡಬಲ್ಲ ಸಮರ್ಥ ಜೊತೆಗಾರರು ಇರಲೇ ಇಲ್ಲ. ಅವರು 90ರ ದಶಕದಲ್ಲಿ ಭಾರತದ ವೇಗದ ಬೌಲಿಂಗ್ ನೊಗವನ್ನು ಎಳೆದ ಒಂಟಿ ಎತ್ತು.

236 ಟೆಸ್ಟ್ ವಿಕೆಟ್’ಗಳು, 315 ಏಕದಿನ ವಿಕೆಟ್’ಗಳು, 44 ವಿಶ್ವಕಪ್ ವಿಕೆಟ್’ಗಳು.. ಒಟ್ಟಾರೆ 551 ಅಂತರಾಷ್ಟ್ರೀಯ ವಿಕೆಟ್’ಗಳು.. ಇದು ಶ್ರೀನಾಥ್ ಸಾಧನೆ.

ಜಾವಗಲ್ ಶ್ರೀನಾಥ್ ಅವರ ನಂತರ ಭಾರತದ ವೇಗದ ಬೌಲಿಂಗ್’ಗೆ ಬಸ ತುಂಬಿದ ಜಹೀರ್ ಖಾನ್ ಬಗ್ಗೆ ಸೌರವ್ ಗಂಗೂಲಿ ಬಳಿ ಮೊದಲ ಬಾರಿ ಮಾತಾಡಿದವರೇ ಶ್ರೀನಾಥ್. ಇಂಡಿಯನ್ಸ್ ಏರ್’ಲೈನ್ಸ್ ಪರ ಆಡುತ್ತಿದ್ದ ಜಹೀರ್’ನನ್ನು ನೋಡಿದ ಶ್ರೀನಾಥ್, ಆಗಿನ ಭಾರತ ತಂಡದ ನಾಯಕ ಗಂಗೂಲಿಗೆ ಫೋನ್ ಕಾಲ್ ಮಾಡಿ, ‘’ಈ ಹುಡುಗನನ್ನು ನೇರವಾಗಿ ಭಾರತ ತಂಡದಲ್ಲಿ ಆಡಿಸಿ’’ ಎಂದಿದ್ದರಂತೆ. ಮುಂದಿನದ್ದು ಇತಿಹಾಸ.

ವೇಗದ ಬೌಲರ್’ಗಳಾಗಲು ಎಷ್ಟೋ ಯುವಕರಿಗೆ ಸ್ಫೂರ್ತಿಯಾದ ಚಾಂಪಿಯನ್ ಫಾಸ್ಟ್ ಬೌಲರ್.. ಅಷ್ಟೇ ಸರಳ ವ್ಯಕ್ತಿ. ಈಗಲೂ ಬೆಂಗಳೂರು to ಮೈಸೂರು, ಮೈಸೂರು to ಬೆಂಗಳೂರು ರೈಲಿನಲ್ಲೇ ಓಡಾಡುವ ಸಿಂಪಲ್ ಮನುಷ್ಯ.

Happy Birthday ಮೈಸೂರು ಎಕ್ಸ್’ಪ್ರೆಸ್ ಜಾಗವಲ್ ಶ್ರೀನಾಥ್.

Latest stories

LEAVE A REPLY

Please enter your comment!
Please enter your name here

five × 5 =